newsfirstkannada.com

×

ನಾಗಮಂಗಲ ಗಲಭೆ ಕೇಸ್‌.. 55 ಆರೋಪಿಗಳಿಗೆ ಜಾಮೀನು ಮಂಜೂರು; ಬಿಡುಗಡೆ ಯಾವಾಗ?

Share :

Published September 27, 2024 at 10:42pm

    ಸೆಪ್ಟೆಂಬರ್ 11ರಂದು ನಾಗಮಂಗಲ ಅಕ್ಷರಶಃ ಹೊತ್ತಿ ಉರಿದಿತ್ತು

    ಸೆಪ್ಟೆಂಬರ್ 12ರಿಂದ ಮಂಡ್ಯ ಕಾರಾಗೃಹದಲ್ಲಿದ್ದ 55 ಆರೋಪಿಗಳು

    ಕೋರ್ಟ್‌ನಿಂದ ಜಾಮೀನು ಸಿಕ್ಕರೂ ಜೈಲಿನಿಂದ ಬಿಡುಗಡೆ ಇಲ್ಲ!

ಮಂಡ್ಯ: ಗಣೇಶೋತ್ಸವದ ವೇಳೆ ನಾಗಮಂಗಲದಲ್ಲಿ ನಡೆದ ಅಹಿತಕರ ಘಟನೆಯನ್ನ ಯಾರೂ ಮರೆಯುವಂತಿಲ್ಲ. ಈ ಗಲಭೆ ಮಾಡಿದ ಗಾಯ ಇನ್ನೂ ನಾಗಮಂಗಲ ಜನರನ್ನು ಕಾಡುತ್ತಲೇ ಇದೆ. ಪೊಲೀಸರು ಬಂಧಿಸಿದ ಆರೋಪಿಗಳು ಜೈಲು ಪಾಲಾದ್ರೆ, ಅವರನ್ನೇ ನಂಬಿ ಬದುಕಿದ್ದ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದರು. ಆದ್ರೀಗ ಈ ಪ್ರಕರಣ ಸಂಬಂಧ ಬಂಧಿತ ಆರೋಪಿಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ.

ಇದನ್ನೂ ಓದಿ: ನಾಗಮಂಗಲದಲ್ಲಿ ಅಮಾಯಕರನ್ನು ಬಂಧಿಸಿದ್ದಕ್ಕೂ ಕಾರಣ ಇದೆ.. ಸಚಿವ ಚೆಲುವರಾಯಸ್ವಾಮಿ ಶಾಕಿಂಗ್ ಉತ್ತರ! 

ಕಳೆದ ಸೆಪ್ಟೆಂಬರ್ 11ರಂದು ನಾಗಮಂಗಲ ಅಕ್ಷರಶಃ ಹೊತ್ತಿ ಉರಿದಿತ್ತು. ಈ ಗಲಭೆ ಪ್ರಕರಣದ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು 55 ಆರೋಪಿಗಳನ್ನು ಬಂಧಿಸಿದ್ದರು. ನಾಗಮಂಗಲವನ್ನು ಸಂಪೂರ್ಣ ನಿಯಂತ್ರಿಸಲು ಹರಸಾಹಸ ಪಟ್ಟಿದ್ದರು. ಆರೋಪಿಗಳನ್ನು ಬಂಧಿಸಿದ ಬಳಿಕ ನಾಗಮಂಗಲದ ಗಲಭೆ ರಾಜಕೀಯ ತಿರುವುಗಳನ್ನು ಪಡೆದುಕೊಂಡಿತ್ತು.

ಇಡೀ ರಾಜ್ಯದಲ್ಲಿ ಸುದ್ದಿಯಾಗಿದ್ದ ನಾಗಮಂಗಲದಲ್ಲಿ ಇದೀಗ ಹೊಸ ಬೆಳಕು ಮೂಡಿದೆ. ಪ್ರಕರಣ ‌ಸಂಬಂಧ ಬಂಧಿತ 55 ಆರೋಪಿಗಳಿಗೆ ಇಂದು ಜಾಮೀನು ಮಂಜೂರು ಮಾಡಲಾಗಿದೆ. ಮಂಡ್ಯದ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.

ಆರೋಪಿಗಳ ಬಿಡುಗಡೆ ಯಾವಾಗ?
ಮಂಡ್ಯದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು 55 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ನೀಡಿದೆ. ಆರೋಪಿಗಳು ತಲಾ ಒಂದು ಲಕ್ಷ ಮೌಲ್ಯದ ಬಾಂಡ್ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಅಪರಾಧಿ ‌ಕೃತ್ಯದಲ್ಲಿ ಭಾಗಿಯಾಗಬಾರದು. ಪ್ರತಿ ಭಾನುವಾರ ಪೊಲೀಸ್‌ ಠಾಣೆಗೆ ತೆರಳಿ ಸಹಿ ಮಾಡಬೇಕು ಅನ್ನು ಷರತ್ತು ವಿಧಿಸಲಾಗಿದೆ.

ಇದನ್ನೂ ಓದಿ: ನಾಗಮಂಗಲ ಗಲಾಟೆ ನೋವು ಇನ್ನೂ ಮುಗಿದಿಲ್ಲ; ಒಬ್ಬರದ್ದು ಒಂದೊಂದು ಕತೆ, HDK ಮುಂದೆ ಕಣ್ಣೀರಿಟ್ಟ ಹಿರಿಯ ಜೀವಗಳು 

ಈ ಷರತ್ತುಗಳನ್ನು ಪೂರೈಸಬೇಕಿರುವುದರಿಂದ ಜಾಮೀನು ಸಿಕ್ಕರೂ ಗಲಭೆಯ ಆರೋಪಿಗಳಿಗೆ ಇಂದು ಬಿಡುಗಡೆಯ ಭಾಗ್ಯ ಸಿಗಲಿಲ್ಲ. ನಾಳೆ, ನಾಡಿದ್ದು ರಜೆ ಹಿನ್ನೆಲೆ ಸೋಮವಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಳೆದ ಸೆಪ್ಟೆಂಬರ್ 11ರಂದು ನಾಗಮಂಗಲದಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿತ್ತು. 55 ಮಂದಿಯೂ ಸೆಪ್ಟೆಂಬರ್ 12ರಿಂದ ಮಂಡ್ಯ ಕಾರಾಗೃಹದಲ್ಲಿ ಕಾಲ ಕಳೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಗಮಂಗಲ ಗಲಭೆ ಕೇಸ್‌.. 55 ಆರೋಪಿಗಳಿಗೆ ಜಾಮೀನು ಮಂಜೂರು; ಬಿಡುಗಡೆ ಯಾವಾಗ?

https://newsfirstlive.com/wp-content/uploads/2024/09/MND-NAGAMANGALA-1.jpg

Load More