newsfirstkannada.com

ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು.. ಪಾಕಿಸ್ತಾನ ಚುನಾವಣಾ ಫಲಿತಾಂಶಕ್ಕೆ ಹೊಸ ಟ್ವಿಸ್ಟ್‌!

Share :

Published February 10, 2024 at 2:18pm

    ಪಾಕಿಸ್ತಾನದಲ್ಲಿ ಸೆಂಚುರಿ ಬಾರಿಸಿದ ಇಮ್ರಾನ್ ಖಾನ್ ಬೆಂಬಲಿಗರು

    ನವಾಜ್ ಷರೀಫ್ ನೇತೃತ್ವದ ಮುಸ್ಲಿಂ ಲೀಗ್‌ಗೆ 73 ಸ್ಥಾನಗಳಲ್ಲಿ ಗೆಲುವು

    ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಕಿಂಗ್‌ ಮೇಕರ್

ಇಸ್ಲಾಮಾಬಾದ್‌: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ T20 ಕ್ರಿಕೆಟ್ ಪಂದ್ಯದಷ್ಟೇ ರೋಚಕವಾಗಿದೆ. 20 ಓವರ್‌ನಲ್ಲಿ ಚೇಸಿಂಗ್ ಮುಗಿದ್ರೂ ರಿಸಲ್ಟ್ ಮಾತ್ರ ಸೂಪರ್ ಓವರ್‌ಗೆ ಶಿಫ್ಟ್ ಆಗಿದೆ. ಈಗ ಸೂಪರ್ ಓವರ್‌ನಲ್ಲಿ ಸಿಕ್ಸರ್ ಬಾರಿಸೋರು ಸರ್ಕಾರ ರಚಿಸೋದು ಪಕ್ಕಾ ಆಗಿದೆ.

ಪಾಕಿಸ್ತಾನ ಪಾರ್ಲಿಮೆಂಟ್ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಈ ಬಾರಿಯೂ ಪಾಕಿಸ್ತಾನದಲ್ಲಿ ಅತಂತ್ರ ಪಾರ್ಲಿಮೆಂಟ್ ನಿರ್ಮಾಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಬೆಂಬಲಿಗರು 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಮುಸ್ಲಿಂ ಲೀಗ್‌ಗೆ 73, ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಿಪಿಪಿ ಪಕ್ಷದ ಅಭ್ಯರ್ಥಿಗಳು 52 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಕಿಂಗ್ ಮೇಕರ್ ಆದ ಬಿಲಾವಲ್ ಭುಟ್ಟೋ!
ಪಾಕಿಸ್ತಾನದ ಚುನಾವಣೆಯಲ್ಲಿ ಒಟ್ಟು 336 ಸದಸ್ಯರ ಆಯ್ಕೆ ನಡೆಯಲಿದೆ. ನೂತನ ಸರ್ಕಾರ ರಚಿಸಲು 169 ಸದಸ್ಯರ ಬೆಂಬಲದ ಅಗತ್ಯವಿದೆ. ಈ ನಂಬರ್ ಗೇಮ್‌ನಲ್ಲಿ ಈಗ ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಕ್ಷವೇ ನಿರ್ಣಾಯಕವಾಗಿದೆ. ಬಿಲಾವಲ್ ಭುಟ್ಟೋ ಬೆಂಬಲ ಪಡೆಯುವವರಿಗೆ ಮಾತ್ರವೇ ಸರ್ಕಾರ ರಚನೆ ಸಾಧ್ಯವಾಗಲಿದೆ. ಬಿಲಾವಲ್ ಭುಟ್ಟೋ ಅವರ ಬೆಂಬಲ ಪಡೆಯಲು ನವಾಜ್ ಷರೀಫ್ ಅವರು ತೀವ್ರ ಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ನವಾಜ್ ಷರೀಫ್‌ಗೆ ಬಿಗ್ ಶಾಕ್ ಕೊಟ್ಟ ಇಮ್ರಾನ್ ಖಾನ್‌; ಪಾಕಿಸ್ತಾನದಲ್ಲಿ ಗೆಲ್ಲೋದು ಯಾರು?

ಜೈಲಿನಲ್ಲಿರುವ ಇಮ್ರಾನ್ ಖಾನ್‌ಗೆ ಡಬಲ್ ಖುಷಿ!
ಪಾಕಿಸ್ತಾನ ಚುನಾವಣೆಯ ಮತಎಣಿಕೆಯ ಮಧ್ಯೆ ಜೈಲಿನಲ್ಲಿರುವ ಪಿಟಿಐ ನಾಯಕ ಇಮ್ರಾನ್ ಖಾನ್‌ ಕೂಡ ಡಬಲ್ ಖುಷಿಯಾಗಿದ್ದಾರೆ. ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದ ತಮ್ಮ ಬೆಂಬಲಿಗರು ಚುನಾವಣೆಯಲ್ಲಿ ಸೆಂಚುರಿ ಬಾರಿಸಿ ನವಾಜ್ ಷರೀಫ್ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ. ಇಮ್ರಾನ್ ಖಾನ್ ಬೆಂಬಲಿಗರು ಅತಿ ಹೆಚ್ಚು ಸ್ಥಾನದಲ್ಲಿ ಗೆದ್ದಿರುವ ಸಂತೋಷ ಒಂದು ಕಡೆಯಾದ್ರೆ ಪಾಕಿಸ್ತಾನದ ಭಯೋತ್ಪದನಾ ವಿರೋಧಿ ನ್ಯಾಯಾಲಯ ಬಿಗ್ ರಿಲೀಫ್ ಕೊಟ್ಟಿದೆ.

ಮೇ 9ರ ಗಲಭೆಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದು ಜನರ ವೋಟಿಂಗ್ ಸಿಕ್ಕ ಜಯ ಎಂದು ಅವರ ಬೆಂಬಲಿಗರು ಸಂಭ್ರಮ ಆಚರಿಸಿದ್ದಾರೆ. ಇಮ್ರಾನ್ ಖಾನ್ ಜೊತೆಗೆ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 2023ರಲ್ಲಿ ಇದೇ ಕೋರ್ಟ್ ಸೇನಾ ನೆಲೆಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಹಾಗೂ ಮಹಮೂದ್ ಖುರೇಷಿ ಅವರಿಗೆ ಶಿಕ್ಷೆ ಪ್ರಕಟಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು.. ಪಾಕಿಸ್ತಾನ ಚುನಾವಣಾ ಫಲಿತಾಂಶಕ್ಕೆ ಹೊಸ ಟ್ವಿಸ್ಟ್‌!

https://newsfirstlive.com/wp-content/uploads/2023/08/Imran-Khan.jpg

Load More