newsfirstkannada.com

ಮನೆ ಕೀ ಶೂನಲ್ಲಿ ಇಟ್ಟು ಹೋಗ್ತೀರಾ? ಬೆಂಗಳೂರು ನಿವಾಸಿಗಳೇ ತಪ್ಪದೇ ಈ ಸ್ಟೋರಿ ಓದಿ!

Share :

Published February 28, 2024 at 2:52pm

Update February 28, 2024 at 2:53pm

    ಆರಾಮಾಗಿ ಮನೆ ಬೀಗ ಓಪನ್ ಮಾಡಿ ಚಿನ್ನಾಭರಣ ಕಳ್ಳತನ

    ಶೂ ಕಳ್ಳತನ ಮಾಡುತ್ತಿರಬೇಕಾದ್ರೆ ಇವನಿಗೆ ಮನೆ ಕೀ ಸಿಕ್ಕಿದೆ

    ರಾತ್ರಿ ಲೈಟ್ ಆಫ್ ಆಗಿದ್ದ ಮನೆಗಳೇ ಇವನ ಟಾರ್ಗೆಟ್ ಆಗಿತ್ತು

ಬೆಂಗಳೂರು: ಬಾಗಿಲು ಒಡೆಯಲ್ಲ, ಕಿಟಕಿ ಪೀಸ್, ಪೀಸ್ ಮಾಡಲ್ಲ. ಆರಾಮಾಗಿ ಮನೆ ಬೀಗ ಓಪನ್ ಮಾಡುತ್ತಾನೆ. ಒಳಗೆ ಹೋಗಿ ಚಿನ್ನಾಭರಣ ದೋಚಿ ಪರಾರಿ ಆಗ್ತಾನೆ. ಬೈಯಪ್ಪನಹಳ್ಳಿ ಪೊಲೀಸರು ಮುನಿಯಪ್ಪ ಎಂಬ ವ್ಯಕ್ತಿಯನ್ನ ಬಂಧಿಸಿದ್ದಾರೆ. ಈತ ಶೂ ಕಳ್ಳನಾಗಿದ್ದವನು ಮನೆಗಳ್ಳನಾದ ಖತರ್ನಾಕ್ ಸ್ಟೋರಿಯೇ ರೋಚಕವಾಗಿದೆ.

ಆರೋಪಿ ಮುನಿಯಪ್ಪ ಬರೀ ಶೂ ಕಳ್ಳತನ ಮಾಡ್ತಿದ್ದ. ಒಮ್ಮೆ ಹಾಗೇ ಶೂ ಕಳ್ಳತನ ಮಾಡುತ್ತಿರಬೇಕಾದ್ರೆ ಇವನಿಗೆ ಮನೆ ಕೀ ಸಿಕ್ಕಿದೆ. ಆಮೇಲೆ ನೋಡೇ ಬಿಡೋಣ ಅಂತಾ ಬೀಗ ಓಪನ್ ಮಾಡಿ ಮನೆ ಒಳಗೆ ಹೋಗಿದ್ದ. ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.

ಮನೆ ಕಳ್ಳತನ ಮಾಡುತ್ತಿದ್ದ ಮುನಿಯಪ್ಪ ಬೆಳಗ್ಗೆ ಟೈಮ್‌ನಲ್ಲಿ ಆಟೋ ಓಡಿಸುತ್ತಾ ಹೊಂಚು ಹಾಕ್ತಿದ್ದ. ರಾತ್ರಿ ಲೈಟ್ ಆಫ್ ಆಗಿದ್ದ ಮನೆಗಳೇ ಇವನ ಟಾರ್ಗೆಟ್ ಆಗಿತ್ತು. ಶೂ ಕಳ್ಳತನದಿಂದ ಮನೆಗಳ್ಳತನಕ್ಕೆ ಇಳಿದ ಮುನಿಯಪ್ಪ ಇತ್ತೀಚೆಗೆ ಮನೆ ಬಾಗಿಲು ಒಡೆಯೋದನ್ನು ರೂಢಿ ಮಾಡಿಕೊಂಡಿದ್ದ.

ಇದನ್ನೂ ಓದಿ: ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ.. ಪಾದ್ರಿ ಅಪ್ಪನ ವಿರುದ್ಧವೇ ಮಗಳಿಂದ ಗಂಭೀರ ಆರೋಪ

ಬೈಯಪ್ಪನಹಳ್ಳಿ ಪೊಲೀಸರು ಆರೋಪಿ ಮುನಿಯಪ್ಪನನ್ನು ಬಂಧಿಸಿ 4 ಕಳ್ಳತನ ಪ್ರಕರಣವನ್ನು ಬೇಧಿಸಿದ್ದಾರೆ. ಬಂಧಿತನಿಂದ 7.7 ಲಕ್ಷ ಮೌಲ್ಯದ 132 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಕೀ ಶೂನಲ್ಲಿ ಇಟ್ಟು ಹೋಗ್ತೀರಾ? ಬೆಂಗಳೂರು ನಿವಾಸಿಗಳೇ ತಪ್ಪದೇ ಈ ಸ್ಟೋರಿ ಓದಿ!

https://newsfirstlive.com/wp-content/uploads/2024/02/Byappanahalli-Arrest.jpg

Load More