newsfirstkannada.com

ಈಗ ಏನ್‌ ಹೇಳ್ತೀರಾ.. 10ನೇ ತರಗತಿಯಲ್ಲಿ ಪಾಸ್ ಆಗಲ್ಲ ಎಂದವರಿಗೆ ‘ಮುನ್ನಿ’ ಸ್ಮಾರ್ಟ್‌ ಆನ್ಸರ್; ಏನಂದ್ರು?

Share :

Published May 16, 2024 at 12:29pm

Update May 16, 2024 at 12:39pm

  ಸಲ್ಮಾನ್ ಖಾನ್‌ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಅಭಿನಯಿಸಿದ್ದ ಮುನ್ನಿ

  ಸದಾ ರೀಲ್ಸ್‌ನಲ್ಲಿ ಬ್ಯುಸಿಯಾದ ನೀನು ಪರೀಕ್ಷೆಯಲ್ಲಿ ಪಾಸ್ ಆಗಲ್ಲ ಎಂದಿದ್ದರು

  10ನೇ ತರಗತಿ ರಿಸಲ್ಟ್‌ ಅನೌನ್ಸ್ ಮಾಡಿ ಶಾಕ್ ಕೊಟ್ಟ ಹರ್ಷಾಲಿ ಮಲ್ಹೋತ್ರಾ

ಭಜರಂಗಿ ಭಾಯಿಜಾನ್ ಸಿನಿಮಾದ ಮುನ್ನಿ ಯಾರಿಗೆ ಗೊತ್ತಿಲ್ಲ ಹೇಳಿ. 2015ರಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಮುನ್ನಿ ಎಲ್ಲರ ಗಮನ ಸೆಳೆದಿದ್ದಳು. ಮುನ್ನಿ ಖ್ಯಾತಿಯ ನಟಿ ಹರ್ಷಾಲಿ ಮಲ್ಹೋತ್ರಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿದ್ದು, ಇದೀಗ ಟ್ರೋಲರ್‌ಗಳಿಗೆ ಟಕ್ಕರ್‌ ಕೊಟ್ಟಿದ್ದಾರೆ.

ಹರ್ಷಾಲಿ ಮಲ್ಹೋತ್ರಾ 10ನೇ ತರಗತಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದು ತನ್ನ ಪರೀಕ್ಷೆಯ ರಿಸಲ್ಟ್‌ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ನೀನು 10ನೇ ಕ್ಲಾಸ್‌ನಲ್ಲಿ ಪಾಸ್ ಆಗಲ್ಲ. ಯಾವಾಗಲೂ ರೀಲ್ಸ್, ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರ್ತೀಯಾ ಎಂದು ಕಾಲೆಳೆಯುತ್ತಿದ್ದವರಿಗೆ ಮುನ್ನಿ ಖಡಕ್ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬಾತ್ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ PUC ವಿದ್ಯಾರ್ಥಿನಿ ಮೃತದೇಹ.. ಸಾವಿನ ಸುತ್ತ ಅನುಮಾನದ ಹುತ್ತ 

10ನೇ ತರಗತಿ ಪರೀಕ್ಷೆಯಲ್ಲಿ ಹರ್ಷಾಲಿ ಮಲ್ಹೋತ್ರಾ ಶೇಕಡಾ 83ರಷ್ಟು ಅಂಕ ಪಡೆದು ಪಾಸ್ ಆಗಿದ್ದಾರೆ. ಈ ಖುಷಿಗೆ ಹರ್ಷಾಲಿ ವಿಡಿಯೋ ಮಾಡಿದ್ದು, ಸದಾ ಟೀಕೆ ಮಾಡುತ್ತಿದ್ದ ಟ್ರೋಲರ್‌ಗಳಿಗೆ ಉತ್ತರ ಕೊಟ್ಟಿದ್ದಾರೆ. ಬಹಳ ಹೆಮ್ಮೆಯಿಂದ ರಿಸಲ್ಟ್ ಬಹಿರಂಗ ಪಡಿಸುವುದರ ಜೊತೆಗೆ ನಿಮ್ಮ ಸಂದೇಹ ಹಾಗೂ ಟೀಕೆಗಳಿಗೂ ಧನ್ಯವಾದ ತಿಳಿಸಿದ್ದಾರೆ.

ಹರ್ಷಾಲಿ ಮಲ್ಹೋತ್ರಾ ಅವರು ರೀಲ್ಸ್ ಮಾಡುವುದನ್ನು ನೋಡಿದ ಟ್ರೋಲರ್ಸ್‌ ನೀನು ಶಾಲೆಗೆ ಹೋಗುತ್ತಿದ್ದೀಯಾ? ನೀನು ಕಥಕ್ ನೃತ್ಯ ಅಭ್ಯಾಸ ಮಾಡುತ್ತಾ ಇದ್ದರೆ ನೀನು ಪರೀಕ್ಷೆಯಲ್ಲಿ ಫೇಲ್ ಆಗುವುದು ಪಕ್ಕಾ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬರೀ ರೀಲ್ಸ್ ಮಾಡುತ್ತಾ ಇರು ಅಥವಾ ಬರೀ ಓದುವುದರ ಕಡೆ ಗಮನ ಕೊಡು ಎಂದು ಟೀಕೆ ಮಾಡಿದ್ದರು. ಟ್ರೋಲರ್‌ಗಳಿಗೆ ರಿಸಲ್ಟ್ ಮೂಲಕವೇ ಉತ್ತರ ನೀಡಿರುವ ಹರ್ಷಾಲಿ ಮಲ್ಹೋತ್ರಾ ಅವರು ನಿಮ್ಮ ಟೀಕೆಗೆ ಡೋಂಟ್‌ ಕೇರ್ ನಾನು ರೀಲ್ಸ್‌ಗಳ ಜೊತೆಗೆ ಪರೀಕ್ಷೆಯನ್ನು ಪಾಸ್ ಮಾಡಿದ್ದೇನೆ ಎನ್ನುತ್ತಾ ಮತ್ತೊಂದು ರೀಲ್ಸ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈಗ ಏನ್‌ ಹೇಳ್ತೀರಾ.. 10ನೇ ತರಗತಿಯಲ್ಲಿ ಪಾಸ್ ಆಗಲ್ಲ ಎಂದವರಿಗೆ ‘ಮುನ್ನಿ’ ಸ್ಮಾರ್ಟ್‌ ಆನ್ಸರ್; ಏನಂದ್ರು?

https://newsfirstlive.com/wp-content/uploads/2024/05/Harshaali-Malhotra-2.jpg

Load More