ಆಕಸ್ಮಿಕ ಬೆಂಕಿ ಅವಘಡ.. ಸುಟ್ಟು ಕರಕಲಾದ 3 ಅಂತಸ್ತಿನ ಬೇಕರಿ

author-image
AS Harshith
Updated On
ಆಕಸ್ಮಿಕ ಬೆಂಕಿ ಅವಘಡ.. ಸುಟ್ಟು ಕರಕಲಾದ 3 ಅಂತಸ್ತಿನ ಬೇಕರಿ
Advertisment
  • ಮೂರು ಅಂತಸ್ತಿನ ಬೇಕರಿಯಲ್ಲಿ ಕಾಣಿಸಿಕೊಂಡ ಬೆಂಕಿ
  • ಸಂಪೂರ್ಣ ಸುಟ್ಟು ಕರಕಲಾದ ವೈಷ್ಣವಿ ಐಯ್ಯಂಗಾರ್ ಬೇಕರಿ
  • ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡವೇ?

ಮಂಡ್ಯ: ಆಕಸ್ಮಿಕ ಬೆಂಕಿ ಅವಘಡದಿಂದಾಗಿ 3 ಅಂತಸ್ತಿನ ಬೇಕರಿ ಸುಟ್ಟು ಕರಕಲಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ವೈಷ್ಣವಿ ಐಯ್ಯಂಗಾರ್ ಬೇಕರಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ವೈಷ್ಣವಿ ಐಯ್ಯಂಗಾರ್ ಬೇಕರಿ ಹರ್ಷ ಎಂಬುವವರಿಗೆ ಸೇರಿದೆ. ಬೆಂಕಿ ಅವಘಡದಿಂದಾಗಿ ಸುಮಾರು 50 ಲಕ್ಷ ಮೌಲ್ಯದ ವಸ್ತುಗಳು, ಮಿಷನರಿಗಳು ಸುಟ್ಟುಕರಕಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮೇಘಸ್ಫೋಟ.. ಮಳೆಯಿಂದ 40 ಜನರು ಸಾವು, 329 ಕೋಟಿಗಳಷ್ಟು ನಷ್ಟ

ಬೆಳಗ್ಗೆ ಎಂದಿನಂತೆ ಬೇಕರಿ ಓಪನ್​ ಮಾಡಲು ಬಂದಾಗ ವಿದ್ಯುತ್ ಅವಘಡ ಬೆಳಕಿಗೆ ಬಂದಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಬೇಕರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: VIDEO: ನೋಡ ನೋಡುತ್ತಿದ್ದಂತೆ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಅಪರಿಚಿತ ಯುವಕ.. ಮೊಬೈಲ್​ನಲ್ಲಿ ದೃಶ್ಯ ಸೆರೆ

ಬೆಂಕಿ ಅವಘಡದಲ್ಲಿ 50 ಲಕ್ಷಕ್ಕೂ ಹೆಚ್ಚು ರೂಪಾಯಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಮಧ್ಯರಾತ್ರಿಯೆ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಳವಳ್ಳಿ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment