/newsfirstlive-kannada/media/post_attachments/wp-content/uploads/2025/01/BGM-KUMBAMELA-STAMPED.jpg)
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ 2025ರ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ 15 ಭಕ್ತರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಮಹಾ ಕುಂಭಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರಯಾಗ್ರಾಜ್ನ ಸಂಗಮ್ ಪ್ರದೇಶದಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಏಕಾಏಕಿ ಜನರು ನುಗ್ಗಿಕೊಂಡು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಸುಮಾರು 15 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಪ್ರಯಾಗರಾಜ್ನ ಕುಂಭಮೇಳದಲ್ಲಿ ಕಾಲ್ತುಳಿತದ ಪ್ರಕರಣದಲ್ಲಿ ಬೆಳಗಾವಿಯ ಇಬ್ಬರು ಮಹಿಳಾ ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರಿಗೆ ಗಾಯಗಳಗಾಗಿವೆ. ಬೆಳಗಾವಿ ವಡಗಾವಿಯ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋಪರ್ಡೆಗೆ ಗಾಯಗಳಾಗಿವೆ. ಬಾಲಕಿಯರಾದ ಮೇಘಾ, ಜ್ಯೋತಿ ಕೂಡ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಮೂರು ದಿನಗಳ ಹಿಂದೆ ಪ್ರಯಾಗರಾಜ್ಗೆ ಈ ನಾಲ್ವರು ತೆರಳಿದ್ದರು. ಸ್ಥಳೀಯ ವೈದ್ಯರಿಂದ ನಾಲ್ವರಿಗು ಚಿಕಿತ್ಸೆ ನೀಡಲಾಗಿದ್ದು ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಬಂದಿದೆ. ಬೆಳಗಾವಿಯಿಂದ ಸುಮಾರು 500ಕ್ಕೂ ಅಧಿಕ ಯಾತ್ರಾರ್ಥಿಗಳು ಪ್ರಯಾಗರಾಜ್ಗೆ ಪ್ರಯಾಣ ಮಾಡಿದ್ದಾರೆ.
ಇದನ್ನೂ ಓದಿ:Maha Kumbh Mela ಕಾಲ್ತುಳಿತ ಸಂಭವಿಸಲು ಪ್ರಮುಖ 2 ಕಾರಣಗಳು ಇಲ್ಲಿವೆ..!
ಇನ್ನು ಕಾಲ್ತುಳಿತಕ್ಕೆ ಒಳಗಾಗಿದ್ದ ನಾಲ್ಕು ಜನರ ಪ್ರಕರಣದ ಹಿನ್ನೆಲೆಯನ್ನು ನೋಡಿದಾಗ ಘಟನೆಯ ಬಗ್ಗೆ ರಾಮತೀರ್ಥನಗರದ ನಿವಾಸಿ ನವೀನ್ ಹಿರೇಮಠ ಮಾಹಿತಿ ನೀಡಿದ್ದಾರೆ. ಬೆಳಗಾವಿಯಿಂದ ಟಿಟಿ ವಾಹನ ಮಾಡಿಕೊಂಡು ಪ್ರಯಾಗರಾಜ್ಗೆ ತೆರಳಿದ್ದರಂತೆ ಬೆಳಗಾವಿ ನಿವಾಸಿಗಳು. ತಡರಾತ್ರಿ ಎರಡು ಗಂಟೆ ಸುಮಾರು ಹೊತ್ತಿಗೆ ಹತ್ತು ಜನ ಹೋಗಿದ್ದೇವು. ಅಲ್ಲಿಯ ಸಾಧುಗಳು ಹೇಳುವ ಪ್ರಕಾರ ಮೂರರಿಂದ ನಾಲ್ಕು ಕೋಟಿ ಜನ ಭಾಗಿಯಾಗಿದ್ದರು ಎಮದು ಹೇಳಲಾಗುತ್ತಿದೆ. ಪುಣ್ಯಸ್ನಾನ ಮಾಡುವಾಗ ಸಂಗಮದಲ್ಲಿ ಸಾಕಷ್ಟು ಜನ ಸೇರಿದ್ದರು. ಆದದರೆ ಪೊಲೀಸರು ಅಲ್ಲಿಂದ ಬೇರೆ ಕಡೆ ಹೋಗುವಂತೆ ಸೂಚಿಸಿದ್ದಾರೆ. ಗಂಗಾ, ಯಮುನಾ ಬ್ರಹ್ಮಪುತ್ರ ನದಿ ಸೇರುವಲ್ಲಿ ಸ್ನಾನ ಮಾಡಲು ಅವಕಾಶ ಮಾಡಿಕೊಟ್ಟರು ಈ ವೇಳೆ ಕಾಲ್ತುಳಿತ ಆಗಿ ಸಮಸ್ಯೆ ಆಗಿದೆ.ಬೆಳಗಾವಿಯಿಂದ ನೂರಾರು ಜನರು ಇಲ್ಲಿಗೆ ಬಂದಿದ್ದೇವೆ ಎಂದು ನವೀನ್ ಹಿರೇಮಠ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ