/newsfirstlive-kannada/media/post_attachments/wp-content/uploads/2025/06/FISHING.jpg)
ಒಡಿಶಾದ ಬಾಲಸೋರ್‌ನ ನಾನಿ ಗೋಪಾಲ್ ಎಂಬ ಮೀನುಗಾರನ ಬದುಕಿಗೆ ಹೊಸ ತಿರುವು ಸಿಕ್ಕಿದೆ. ದಿಘಾ ಕಿನಾರೆಯ ಆಳದಲ್ಲಿ (Digha) ಮೀನು ಹಿಡಿಯಲು ಬಲೆ ಬೀಸಿದ್ದರು. ಈ ವೇಳೆ ತಿಲಿಯಾ ಭೋಲಾ ಮೀನುಗಳು (Telia Bhola fish) ಸಿಕ್ಕಿವೆ.
ಕೇವಲ ಒಂದರೆಡು ಮೀನುಗಳ ಅಲ್ಲ. ಬರೋಬ್ಬರಿ 29 ಮೀನುಗಳು ಬಲೆ ಬಿದ್ದವು. ಪ್ರತಿಯೊಂದು ಮೀನು ಕೂಡ 20 ಕೆಜಿಗಿಂತ ಹೆಚ್ಚು ತೂಗುತ್ತದೆ. ಇದರಿಂದ ಅವರ ಬದುಕಿಗೆ ಹೊಸ ತಿರುವು ಸಿಕ್ಕಂತಾಗಿದೆ. ಯಾಕೆಂದರೆ ಮಾರುಕಟ್ಟೆಯಲ್ಲಿ ಈ ಮೀನುಗಳಿಗೆ ಉತ್ತಮ ಬೇಡಿಕೆ ಇದೆ. ಇದರಿಂದಾಗಿ, ವ್ಯಾಪಾರಿಗಳು ಅವುಗಳನ್ನು ಪಡೆಯಲು ಪೈಪೋಟಿ ನಡೆಸುತ್ತಾರೆ. ಮೀನು ಹರಾಜು ಕೇಂದ್ರದಲ್ಲಿ ಈ ಮೀನುಗಳು ಬರೋಬ್ಬರಿ 33 ಲಕ್ಷ ರೂ.ಗಳಿಗೆ ಮಾರಾಟವಾಗಿವೆ.
ಇದನ್ನೂ ಓದಿ: ‘ನಾನು ತಪ್ಪು ಮಾಡಿಲ್ಲ ಅಂದ್ರೆ ಆ ದೇವರೇ ಬಂದರೂ..’ ನೋವು ಹೊರ ಹಾಕಿದ ರಚಿತಾ ರಾಮ್ -VIDEO
ತಿಲಿಯಾ ಭೋಲಾ ಮೀನು ತುಂಬಾನೇ ಜನಪ್ರಿಯವಾಗಿದೆ. ವಿವಿಧ ಔಷಧೀಯ ಗುಣಗಳಿಗಾಗಿ ಈ ಮೀನನ್ನು ತಿನ್ನಲಾಗುತ್ತದೆ. ವಿವಿಧ ಗಂಭೀರ ಕಾಯಿಲೆಗಳಿಗೆ ಔಷಧಿಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಇದನ್ನ ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ನನ್ನ ಬದುಕಿಗೆ ಹೊಸ ಸಂತೋಷ ಸಿಕ್ಕಿದೆ. ಇನ್ಮುಂದೆ ನನ್ನ ಕುಟುಂಬ ಅಪಾಯದಲ್ಲಿ ಇರಲ್ಲ. ಯಾಕೆಂದರೆ ಬದುಕಿಗೆ ಹೊಸ ಭರವಸೆ ಸಿಕ್ಕಿದೆ ಎಂದು ನಾನಿ ಗೋಪಾಲ್ ಹೇಳಿದ್ದಾರೆ.
ಇದನ್ನೂ ಓದಿ: ಗಿಲ್ ‘ಯಶಸ್ವಿ’ ಶತಕ ವೈಭವ, ಪಂತ್ ಫೆಂಟಾಸ್ಟಿಕ್.. ಆಂಗ್ಲರ ನಾಡಲ್ಲಿ ಹೇಗಿದೆ ತಾಳ್ಮೆಯ ಆಟ..?
#WATCH | Balasore: Fisherman catches 29 Telia Bhola fish, sells for Rs 33 lakh and becomes a millionaire overnight.#Odishapic.twitter.com/vr6TQUncrd
— Kalinga TV (@Kalingatv) June 19, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ