newsfirstkannada.com

VIDEO: ನೂರಾರು ಬಲಿ ಪಡೆದ ಬಾಲಸೋರ್ ಕರಾಳ ದಿನವೇ ಮತ್ತೊಂದು ರೈಲು ಅವಘಡ; ಆಗಿದ್ದೇನು?

Share :

Published June 2, 2024 at 3:09pm

  ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಸಂಭವಿಸಿದ ರೈಲು ದುರಂತ

  ಬಾಲಾಸೋರ್​ ಮಾದರಿಯಲ್ಲೇ ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ

  ಒಡಿಶಾದ ಬಾಲಾಸೋರ್​ ರೈಲ್ವೆ ನಿಲ್ದಾಣದದಲ್ಲಿ ತ್ರಿವಳಿ ರೈಲು ದುರಂತ

ಸರಿಯಾಗಿ ಒಂದು ವರ್ಷದ ಹಿಂದೆ ಇದೇ ಸಮಯಕ್ಕೆ ಇಡೀ ದೇಶದ ಜನ ಬೆಚ್ಚಿ ಬಿದ್ದಿದ್ದರು. ಒಡಿಶಾದ ಬಾಲಾಸೋರ್​ ಜಿಲ್ಲೆಯ ಬಹನಗಾ ರೈಲ್ವೆ ನಿಲ್ದಾಣದ ಬಳಿ ತ್ರಿವಳಿ ರೈಲು ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 1,100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ರೆ, ಸಾವಿನ ಸಂಖ್ಯೆ 290ಕ್ಕೂ ಹೆಚ್ಚಾಗಿತ್ತು. ಈ ಕರಾಳ ದಿನವೇ ದೇಶದಲ್ಲಿ ಮತ್ತೊಂದು ಅದೇ ಮಾದರಿಯ ರೈಲು ಅವಘಡ ಸಂಭವಿಸಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಪಂಜಾಬ್‌ನ ಫತೇಘರ್‌ ಸಾಹಿಬ್‌ನಲ್ಲಿ ಗೂಡ್ಸ್ ಹಾಗೂ ಪ್ಯಾಸೆಂಜರ್‌ ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಗೂಡ್ಸ್ ರೈಲು ಏಕಾಏಕಿ ಪಲ್ಟಿಯಾಗಿ ಪಕ್ಕದ ಹಳಿಯ ಮೇಲೆ ಬಿದ್ದಿದೆ. ಇದೇ ವೇಳೆ ಪಕ್ಕದ ಹಳಿಯಲ್ಲಿ ಸಾಗುತ್ತಿದ್ದ ಪ್ಯಾಸೆಂಜರ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: 280ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದ ಒಡಿಶಾ ತ್ರಿವಳಿ ರೈಲು ದುರಂತ ಕೇಸ್.. ಮೂವರು ಅರೆಸ್ಟ್ 

ಗೂಡ್ಸ್‌ ರೈಲಿನ ಎಂಜಿನ್ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಇಬ್ಬರು ಲೋಕೋ ಪೈಲಟ್‌ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ಯಾಸೆಂಜರ್ ರೈಲಿನ ಬೋಗಿ ಹಳಿ ತಪ್ಪುತ್ತಿದ್ದಂತೆ ಪ್ರಯಾಣಿಕರು ಕೆಳಗೆ ಜಿಗಿದು ಹೊಡಿದ್ದು, ಹೆಚ್ಚು ಪ್ರಯಾಣಿಕರಿಗೆ ತೊಂದರೆ ಆಗಿಲ್ಲ.

ಪಂಜಾಬ್‌ನ ಲುಧಿಯಾನ-ಅಂಬಾಲಾ ಮಧ್ಯೆ ಸಾಗುವ ರೈಲ್ವೆ ಟ್ರ್ಯಾಕ್‌ನಲ್ಲಿ ಈ ದುರಂತ ಸಂಭವಿಸಿದೆ. ಗಾಯಗೊಂಡಿರುವ ಲೋಕೋ ಪೈಲೆಟ್‌ಗಳನ್ನು ಶ್ರೀ ಫತೇಘರ್ ಸಾಹಿಬ್ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಾಲಸೋರ್ ಘಟನೆ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ!
ಜೂನ್ 02, 2023ರಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲ್ವೆ ದುರಂತ ಬಹಳ ದೊಡ್ಡ ಎಚ್ಚರಿಕೆಯ ಪಾಠವಾಗಿತ್ತು. ಈ ದುರಂತದ ಬಳಿಕ ರೈಲ್ವೆ ಸಂಚಾರದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಇಷ್ಟಾದರೂ ಗೂಡ್ಸ್ ರೈಲು ಹಾಗೂ ಪ್ಯಾಸೆಂಜರ್ ರೈಲಿನ ಮಧ್ಯೆ ಅವಘಡ ಸಂಭವಿಸಿರೋದು ಚರ್ಚೆಗೆ ಗುರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನೂರಾರು ಬಲಿ ಪಡೆದ ಬಾಲಸೋರ್ ಕರಾಳ ದಿನವೇ ಮತ್ತೊಂದು ರೈಲು ಅವಘಡ; ಆಗಿದ್ದೇನು?

https://newsfirstlive.com/wp-content/uploads/2024/06/Train-Accident-1.jpg

Load More