/newsfirstlive-kannada/media/post_attachments/wp-content/uploads/2024/03/Pradeep-Ishwar.jpg)
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ಗೆ ಸಚಿವ ಸ್ಥಾನ ನೀಡುವಂತೆ ಚಿಕ್ಕಬಳ್ಳಾಪುರದಲ್ಲಿ ಬಲಿಜ ಸಮುದಾಯ ಒತ್ತಾಯಿಸಿದೆ. ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಲಿಜ ಸಮುದಾಯ ಹಾಗೂ ಬೆಂಬಲಿಗರು ಭಾಗಿಯಾಗಿದ್ದರು.
ಈ ವೇಳೆ ರಾಜ್ಯದಲ್ಲಿ ಬಲಿಜ ಸಮುದಾಯದಲ್ಲಿ ಏಕೈಕ ಶಾಸಕ ಪ್ರದೀಪ್ ಈಶ್ವರ್. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಅಂತ ಮುಖಂಡರು ಮಾಡಿದರು. ಸಚಿವ ಸಂಪುಟ ವಿಸ್ತರಣೆ ಮಾಡಿ ಪ್ರದೀಪ್ ಈಶ್ವರ್ಗೆ ಅವಕಾಶ ನೀಡುವಂತೆ ಆಗ್ರಹಿಸಿದರು.
ಇದನ್ನೂ ಓದಿ:ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!
ಪ್ರದೀಪ್ ಈಶ್ವರ್ ಬಲಿಜ ಜನಾಂಗದ ಯುವಕ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಬಲಿಜ ಜನಾಂಗ ಬಿಜೆಪಿ ಹಿಂದೆ ಇತ್ತು. ವಿಧಾನಸಭೆ ಚುನಾವಣೆ ವೇಳೆ ಪ್ರದೀಪ್ ಈಶ್ವರ್ಗೆ ಕಾಂಗ್ರೆಸ್ನಿಂದ ಟಿಕೆಟ್ ಸಿಕ್ಕ ನಂತರ.. ಬಲಿಜ ಜನಾಂಗದ ಶೇಕಡಾ 80 ರಷ್ಟು ಜನ ಕಾಂಗ್ರೆಸ್ ಕಡೆ ಬಂದರು. ಕಾಂಗ್ರೆಸ್ ತನ್ನ ಮತದಾರರನ್ನು ಉಳಿಸಿಕೊಳ್ಳಬೇಕು ಅಂದರೆ ಪ್ರದೀಪ್ ಈಶ್ವರ್ಗೆ ಸಚಿವ ಸ್ಥಾನ ನೀಡಬೇಕು. ಹಾಗಾದರೆ ಬಿಜೆಪಿಯಲ್ಲಿರುವ ಮತಗಳು ಕೂಡ ಕಾಂಗ್ರೆಸ್ ಕಡೆ ವಾಲುತ್ತವೆ ಎಂದು ಸಮುದಾಯ ಒತ್ತಾಯಿಸಿದೆ.
ಇದನ್ನೂ ಓದಿ:Rain Alert ಜೂನ್ 29ವರೆಗೆ ಭಾರೀ ಮಳೆ.. ರಾಜ್ಯದ ಎರಡು ಭಾಗಗಳಿಗೆ ಪ್ರತ್ಯೇಕ ಎಚ್ಚರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ