ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಬಲಿಜ ಸಮುದಾಯ ಪ್ರತಿಭಟನೆ
ಲೀಸ್ಗೆ ಪಡೆದ ಟ್ರಸ್ಟ್ ಕಟ್ಟಡದಲ್ಲಿ ಅನಧಿಕೃತ ರಾಯಲ್ ಕಾನ್ ಕಾರ್ಡ್ ಶಾಲೆ?
ಆನೇಕಲ್ ತಿಮ್ಮಯ್ಯ ಚಾರಿಟಬಲ್ ಟ್ರಸ್ಟ್‌ಗೆ ಸೇರಿದ ಜಾಗ ಕಬಳಿಕೆಗೆ ಹುನ್ನಾರ?
ಬೆಂಗಳೂರು: ಬೋಗಸ್ ದಾಖಲೆ, ಅಕ್ರಮವಾಗಿ ಟ್ರಸ್ಟ್‌ಗೆ ಸೇರಿದ ಜಾಗ ಕಬಳಿಸೋ ಹುನ್ನಾರ, ಕೋಟಿ, ಕೋಟಿ ವಂಚನೆ ಮಾಡಿದ ಆರೋಪದಲ್ಲಿ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರ ವಿರುದ್ಧ ಬಲಿಜ ಸಮುದಾಯ ರೊಚ್ಚಿಗೆದ್ದಿದೆ.
ಚಾಮರಾಜಪೇಟೆಯ ಒಂದನೇ ಮುಖ್ಯರಸ್ತೆಯಲ್ಲಿರುವ ಆನೇಕಲ್ ತಿಮ್ಮಯ್ಯ ಚಾರಿಟಬಲ್ ಟ್ರಸ್ಟ್ನ ದತ್ತಿ ಸಂಸ್ಥೆಗೆ ಸೇರಿದ್ದ ಜಾಗವನ್ನು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರು ಅಕ್ರಮವಾಗಿ ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಎಲ್.ಆರ್ ಶಿವರಾಮೇಗೌಡ ವಿರುದ್ಧ ಬಲಿಜ ಸಮುದಾಯದ ಜನರು ಬೃಹತ್ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂ.ಎಸ್ ರಾಮಯ್ಯ ವಿದ್ಯಾ ಸಮೂಹ ಸಂಸ್ಥೆಗಳ ಛೇರ್ಮನ್ ಎಂ.ಆರ್ ಜಯರಾಂ ಅವರ ನೇತೃತ್ವದಲ್ಲಿ ತಿಮ್ಮಯ್ಯ ಚಾರಿಟಬಲ್ ಟ್ರಸ್ಟ್ನ ಟ್ರಸ್ಟ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಹೋರಾಟಗಾರರು ಕಪ್ಪುಪಟ್ಟಿ ಧರಿಸಿ ‘ಧಿಕ್ಕಾರ ಧಿಕ್ಕಾರ ಶಿವರಾಮೇಗೌಡ ಧಿಕ್ಕಾರ’, ‘ಶಿವರಾಮೇಗೌಡ ಹಠಾವೋ ಬಿಲಿಜ ಹಾಸ್ಟಲ್ ಬಚಾವೋ’, ‘ಬೇಕೆ ಬೇಕು ನ್ಯಾಯ ಬೇಕು’, ‘ತೊಲಗು ತೊಲಗು ಶಿವರಾಮೇಗೌಡ ತೊಲಗು’ ಅನ್ನೋ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಸಾವಿರಾರು ಬಲಿಜ ಸಮುದಾಯದ ಜನರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಯಾವುದೇ ಕಾರಣಕ್ಕೂ ಸಮುದಾಯದ ಜಾಗವನ್ನು ಬಿಟ್ಟುಕೊಡುವುದಿಲ್ಲ. ಮುಂದೆ ನಡೆಯುವ ಎಂತಹ ಹೋರಾಟಕ್ಕೆ ನಾವೆಲ್ಲರೂ ಸಿದ್ಧರಾಗಿದ್ದೇವೆ. ಸಮುದಾಯದ ಮುಂಚೂಣಿ ನಾಯಕರಿಗೆ ಸಹಕಾರ ನೀಡುವುದಾಗಿ ಬೆಂಬಲ ಸೂಚಿಸಿದರು.
ಇದನ್ನೂ ಓದಿ: ಪೆನ್ಡ್ರೈವ್ ಕುಮಾರಸ್ವಾಮಿ ಹಂಚಿದ್ರಾ? ಏನಿದು ಶಿವರಾಮೇಗೌಡ, ದೇವರಾಜೇಗೌಡ ಸೀಕ್ರೆಟ್ ಸಂಭಾಷಣೆ?
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಎಂ.ಆರ್.ಜಯರಾಂ ಮಾತನಾಡಿ, ಸಮುದಾಯದ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್‌ಗೆ ಸೇರಿದ ಜಾಗವನ್ನು ಅತಿಕ್ರಮಿಸಲು ಮುಂದಾಗಿರುವ ಎಲ್.ಆರ್ ಶಿವರಾಮೇಗೌಡ ರಾಕ್ಷಸ ಗುಣವುಳ್ಳವನು. ಈತ ಬಲಾಢ್ಯ ವ್ಯಕ್ತಿ. ಈತನ ವಿರುದ್ಧ ಧರ್ಮಯುದ್ಧದಂತೆ ನಾವೆಲ್ಲರೂ ಹೋರಾಟ ನಡೆಸೋಣ. ಸಮುದಾಯದ ಎಲ್ಲರೂ ಒಗ್ಗಟ್ಟಾಗಿದ್ದು, ಮುಂದೆ ಬರುವ ಕಠಿಣ ಸವಾಲುಗಳನ್ನು ಎದುರಿಸೋಣ ಎಂದರು.
ಸಮುದಾಯದ ಸ್ವಹಿತಾಸಕ್ತಿ ಬಿಟ್ಟು ಹೋದಾಗ, ಸ್ವಲ್ಪ ಸ್ವಾರ್ಥ ಇಟ್ಟುಕೊಂಡು ಕೆಲಸ ಮಾಡಿದಾಗ ಇಂತಹ ದೊಡ್ಡ ತಪ್ಪುಗಳಾಗುತ್ತದೆ. ಕೆಟ್ಟ ವ್ಯಕ್ತಿಯ ಹಿಂದೆ ಹೋಗಿರುವುದೇ ದೊಡ್ಡ ತಪ್ಪು. ಹಿಂದಿನ ಟ್ರಸ್ಟ್ನ ಪದಾಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಿತ್ತು. ಇದೀಗ ನಮ್ಮನ್ನೇ ನಾವು ಕೀಳಾಗಿ ನೋಡುವ ಪರಿಸ್ಥಿತಿ ಬಂದೊಗಿದೆ. ಯಾವುದೇ ಕಾರಣಕ್ಕೂ ಕೆಟ್ಟ ವ್ಯಕ್ತಿಯನ್ನು ಬಿಡಬಾರದು. ಕೆಟ್ಟವನಿಗೆ ಸಹಾಯ ಮಾಡಿದರೆ ನಮ್ಮನ್ನೇ ಮುಗಿಸುತ್ತಾನೆ. ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕಿದೆ. ಬಲಿಜ ಸಮುದಾಯ ಚಿಕ್ಕ ಸಮಾಜವಾದರೂ ದೊಡ್ಡ ಮನಸ್ಸು ಹೊಂದಿರುವಂತಹ ಸಮಾಜವಾಗಿದೆ. ಎಲ್ಲರನ್ನೂ ಒಳ್ಳೆತನದಿಂದ ಕರೆದುಕೊಂಡು ಹೋಗುವ ಸಮಾಜ ನಮ್ಮದು ಎಂದು ಎಂ.ಆರ್.ಜಯರಾಂ ಹೇಳಿದರು.
ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಹೇಳೋದೇನು?
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಆತನ ಗುಂಡಾಗಳು, ಸಹಚರರು, ಬೌನ್ಸರ್ಗಳು, ಗನ್ಮ್ಯಾನ್ಗಳು ನಿರಂತರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಖಾಲಿ ಜಾಗವನ್ನು ಅತಿಕ್ರಮಿಸಲು ಯತ್ನಿಸುತ್ತಿದ್ದಾರೆ. ಕಾನೂನು ಪ್ರಕಾರವೇ ಹೋರಾಟ ನಡೆಸುತ್ತಿದ್ದೇವೆ. ಸಮುದಾಯದ ಎಲ್ಲಾ ಜನರು ಒಗ್ಗಟ್ಟುನಿಂದ ಆತನ ವಿರುದ್ಧ ಕೆಚ್ಚದೆಯ ಹೋರಾಟ ನಡೆಸಬೇಕು. ಹೋರಾಟ ಮೂಲಕ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗೋಣ. ಯಾವುದೇ ಕಾರಣಕ್ಕೂ ಆನೇಕಲ್ ತಿಮ್ಮಯ್ಯ ಚಾರಿಟಬಲ್ ಟ್ರಸ್ಟ್‌ಗೆ ಸೇರಿದ ಜಾಗವನ್ನು ಬಿಟ್ಟು ಕೊಡುವುದಿಲ್ಲ. ಪೊಲೀಸ್ ಠಾಣೆಗೆ ಸಂಕ್ಷಿಪ್ತವಾಗಿ ದೂರನ್ನು ದಾಖಲಿಲಾಗುವುದು.
ಕೂಚಣ್ಣ ಶ್ರೀನಿವಾಸನ್, ಆನೇಕಲ್ ತಿಮ್ಮಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ
20,928 ಚದರ ಅಡಿ ಜಾಗ ಕಬಳಿಕೆಗೆ ಯತ್ನ?
ಆನೇಕಲ್ ತಿಮ್ಮಯ್ಯ ಚಾರಿಟಬಲ್ ಟ್ರಸ್ಟ್‌ಗೆ ಸೇರಿದ್ದ ಜಾಗದಲ್ಲಿ ಎಲ್.ಆರ್.ಶಿವರಾಮೇಗೌಡ ಮತ್ತು ಆತನ ಕುಟುಂಬ ಒಡೆತನದಲ್ಲಿ ರಾಯಲ್ ಕಾನ್ಕಾರ್ಡ್ ಎಜುಕೇಷನಲ್ ಟ್ರಸ್ಟ್ ಎಂಬ ಹೆಸರಿನಲ್ಲಿ ಶಾಲೆ ನಡೆಸುತ್ತಿದ್ದಾರೆ. ನಿಯಮಬಾಹಿರವಾಗಿ ಬಾಡಿಗೆ ಕರಾರು ಒಪ್ಪಂದ ಪ್ರಕಾರವೇ 16 ಕೋಟಿ ರೂ.ಬಾಡಿಗೆ ಹಣವನ್ನು ನೀಡಬೇಕಿತ್ತು. ಈವರೆಗೆ ನಯಾಪೈಸೆಯೂ ಕೊಟ್ಟಿಲ್ಲ. ಟ್ರಸ್ಟ್‌ಗೆ ಸೇರಿದ ಅಂದಾಜು 20,928 ಚದರ ಅಡಿ ಜಾಗವನ್ನು ನಕಲಿ ದಾಖಲೆ ಮೂಲಕ ಲಪಾಟಯಿಸಲು ಶಿವರಾಮೇಗೌಡ ಹುನ್ನಾರ ನಡೆಸುತ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲಿಸಿದಾಗ ಶಿವರಾಮೇಗೌಡ ಸೃಷ್ಟಿಸಿರುವ ಎಲ್ಲಾ ದಾಖಲೆಗಳು ನಕಲಿ ಎಂಬುದು ಸಾಬೀತಾಗಿದೆ ಎಂದು ಬಲಿಜ ಸಮುದಾಯದ ಮುಖಂಡ ಮತ್ತು ವಕೀಲ ಜಗದೀಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ