ಸಿಎಸ್​ಕೆ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ.. ಐಪಿಎಲ್​​ನಲ್ಲಿ ಭಾರೀ ಸಂಚಲನ.. VIDEO

author-image
Ganesh
Updated On
ಸಿಎಸ್​ಕೆ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ.. ಐಪಿಎಲ್​​ನಲ್ಲಿ ಭಾರೀ ಸಂಚಲನ.. VIDEO
Advertisment
  • ನಿನ್ನೆ ಮುಂಬೈ vs ಚೆನ್ನೈ ನಡುವೆ ರೋಚಕ ಪಂದ್ಯ
  • ಸಿಎಸ್​ಕೆ ಬೌಲಿಂಗ್ ಅವಧಿಯ ವಿಡಿಯೋ ವೈರಲ್
  • ಗಾಯಕ್ವಾಡ್, ಖಲೀಲ್ ನಿಜಕ್ಕೂ ಬಾಲ್ ವಿರೂಪಗೊಳಿಸಿದ್ರಾ?

IPL 2025! ಚೆನ್ನೈ ಸೂಪರ್ ಕಿಂಗ್ಸ್ (CSK) ವಿವಾದದ ಸುಳಿಗೆ ಸಿಲುಕಿದೆ. ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್​ಕೆ ತನ್ನ ಮೊದಲ ಪಂದ್ಯವನ್ನು ಆಡಿತು. ರೋಚಕ ಪಂದ್ಯದಲ್ಲಿ ಸಿಎಸ್​ಕೆ ನಾಲ್ಕು ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದೀಗ ಸಿಎಸ್​​ಕೆಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದ್ದು, ಅಭಿಮಾನಿಗಳು ಚೆನ್ನೈ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ (ವಿರೂಪಗೊಳಿಸಿದ) ಆರೋಪ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ..?

ವೈರಲ್ ಆಗಿರುವ ವಿಡಿಯೋದಲ್ಲಿ ಸಿಎಸ್​ಕೆ ನಾಯಕ ಋತುರಾಜ್ ಗಾಯಕ್ವಾಡ್​, ಬೌಲರ್​ ಖಲೀಲ್ ಅಹ್ಮದ್​ ಬಳಿಗೆ ಬರುತ್ತಾರೆ. ಅದೇ ಸಮಯದಲ್ಲಿ ಖಲೀಲ್ ಅಹ್ಮದ್ ತಮ್ಮ ಜೇಬಿನಿಂದ ಏನೋ ತೆಗೆಯುತ್ತಾರೆ. ಆಗ ಕ್ಯಾಮೆರಾ ಖಲೀಲ್ ಅಹ್ಮದ್​ ಬೆನ್ನಿನ ಮೇಲೆ ಕೇಂದ್ರೀಕರಿಸಿದ್ದರೂ, ಅವರು ಜೇಬಿನಿಂದ ಏನು ತೆಗೆದರು ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ.

ಅಭಿಮಾನಿಗಳು ಏನು ಹೇಳ್ತಿದ್ದಾರೆ..?

ವಿಡಿಯೋ ವೈರಲ್ ಬೆನ್ನಲ್ಲೇ, ಅಭಿಮಾನಿಗಳು ತಮ್ಮದೇ ಅರ್ಥದಲ್ಲಿ ವಿಶ್ಲೇಷಿಸುತ್ತಿದ್ದಾರೆ. ಇಬ್ಬರು ಸೇರಿಕೊಂಡು ಬಾಲ್​ ವಿರೂಪಗೊಳಿಸಿದ್ದಾರೆ ಅಂತಾ ಕಿಡಿಕಾರಿದ್ದಾರೆ. ಸಿಎಸ್​​ಕೆ ವಿರುದ್ಧ ಅಭಿಮಾನಿಗಳು ಇಂಥ ಆರೋಪವನ್ನು ಆಗಾಗ ಮಾಡುತ್ತಲೇ ಇರುತ್ತಾರೆ. ಆದರೆ ಅದೊಂದು ಸಾಮಾನ್ಯ ದೃಶ್ಯವಾಗಿರಬಹುದು ಅಂತಲೂ ಕೆಲವರು ಹೇಳ್ತಿದ್ದಾರೆ.

ಹಿಂದೆ CSK ನಿಷೇಧ ಹೇರಲಾಗಿತ್ತು..!

ಚೆನ್ನೈ ಸೂಪರ್ ಕಿಂಗ್ಸ್​ ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಹೀಗಿದ್ದೂ 2016 ಮತ್ತು 2017 ರಲ್ಲಿ ಎರಡು ವರ್ಷಗಳ ಕಾಲ ತಂಡವನ್ನು ಅಮಾನತುಗೊಳಿಸಲಾಗಿತ್ತು. 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ವಿವಾದದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. 2018ರಲ್ಲಿ ಸಿಎಸ್‌ಕೆ ಅದ್ಭುತ ಪುನರಾಗಮನದೊಂದಿಗೆ ಟ್ರೋಫಿಯನ್ನು ಎತ್ತಿ ಹಿಡಿಯಿತು.

ಇದನ್ನೂ ಓದಿ: ಆರ್​ಸಿಬಿ ಮುಂದಿನ ಪಂದ್ಯ ಸಿಎಸ್​ಕೆ ವಿರುದ್ಧ.. ಯಾವಾಗ..? ಎಲ್ಲಿ ನಡೆಯುತ್ತೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment