/newsfirstlive-kannada/media/post_attachments/wp-content/uploads/2024/11/JOBS_BANK-1.jpg)
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬಳ್ಳಾರಿ ಇಲ್ಲಿ ಖಾಲಿ ಇರುವಂತಹ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಇದೀಗ ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಹಾಗೂ ಇತರೆ ಬೋಧಕೇತರ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆಯನ್ನು ರಿಲೀಸ್ ಮಾಡಲಾಗಿದೆ. ಮಹಾವಿದ್ಯಾಲಯದ ವಿವಿಧ ಕಚೇರಿಯಲ್ಲಿ ಖಾಲಿ ಇರುವ ಹುದ್ದೆ ನೇಮಕ ಮಾಡಲಾಗುತ್ತಿದೆ. ಹೀಗಾಗಿ ಅರ್ಹರು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಬೋಧಕ (ವೈದ್ಯರು) ಉದ್ಯೋಗಗಳನ್ನು ಕಾಂಟ್ರಾಕ್ಟ್ ಬೇಸ್ ಮೇಲೆ ನೇಮಕ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದೆ. ಹೀಗಾಗಿ ಈ ಕೆಲಸಗಳಿಗೆ ಸೇರಲು ಬಯಸುವವರು ತಮ್ಮ ತಮ್ಮ ವಿದ್ಯಾರ್ಹತೆಯ ದಾಖಲೆಗಳ ಮೂಲ ಪ್ರತಿ, ಇತ್ತೀಚಿನ 2 ಫೋಟೋ, ಒಂದು ಸಾವಿರ ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಅರ್ಜಿ ಶುಲ್ಕವನ್ನು ನಿರ್ದೇಶಕರು, ಬಿಎಂಸಿಆರ್‌ಸಿ, ಬಳ್ಳಾರಿ, ಇವರ ಹೆಸರಲ್ಲಿ ಮೊದಲು ಡಿಡಿ ತೆಗೆಯಬೇಕು. 2 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನವನ್ನು 02 ಏಪ್ರಿಲ್ 2025 ರಂದು ನಡೆಸಲಾಗುತ್ತದೆ. ಸಂದರ್ಶನ ನಡೆಯುವ ಸ್ಥಳ ಇಲ್ಲಿ ನೀಡಲಾಗಿದೆ.
ಇದನ್ನೂ ಓದಿ:NIMHANS ಸಂಸ್ಥೆಯಲ್ಲಿ ಉನ್ನತ ಉದ್ಯೋಗಕ್ಕೆ ಅರ್ಜಿ ಆಹ್ವಾನ.. ಸಂಬಳ ಮಾತ್ರ ಲಕ್ಷ.. ಲಕ್ಷ
ಸಂದರ್ಶನ ನಡೆಯುವ ಸ್ಥಳ
ಆಡಳಿತ ಕಚೇರಿ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ), ಬಳ್ಳಾರಿ
ಉದ್ಯೋಗಗಳ ಹೆಸರು ಹಾಗೂ ಸಂಖ್ಯೆ?
ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಸೀನಿಯರ್ ರೆಸಿಡೆಂಟ್- 48
ಪ್ರಾಧ್ಯಾಪಕರು- 06
ಸಹ ಪ್ರಾಧ್ಯಾಪಕರು- 22
ಸಹಾಯಕ ಪ್ರಾಧ್ಯಾಪಕರು- 22
ಇತರೆ- 04
ನೇಮಕಾತಿ ವಿಭಾಗಗಳು?
ರೇಡಿಯೋ ಡಯಾಗ್ನೋಸಿಸ್, ಟಿಬಿ ಅಂಡ್ ಸಿಡಿ, ಪ್ಲಾಸ್ಟಿಕ್ ಸರ್ಜರಿ, ಪೀಡಿಯಾಟ್ರಿಕ್ಸ್ ಸರ್ಜರಿ, ಸೈಕಿಯಾಟ್ರಿ, ನೆಫ್ರೋಲಜಿ, ಮೆಡಿಕಲ್ ಗ್ಯಾಸ್ಟ್ರೋಲಜಿ, ಜೆನೆರಲ್ ಮೆಡಿಷನ್, ಜೆನೆರಲ್ ಸರ್ಜರಿ, ಆರ್ಥೋಪೆಡಿಕ್, ಒಬಿಜಿ, ಯುರೋಲಜಿ, ಅನಸ್ತೇಷಿಯಾಲಜಿ, ರೇಡಿಯೋಥೆರಪಿ, ಎಂಡೊಕ್ರೈನಾಲಜಿ,
ವೆಬ್‌ಸೈಟ್:https://bmcrcballari.karnataka.gov.in
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ