3 ಮಕ್ಕಳನ್ನ ಕೃಷಿ ಹೊಂಡಕ್ಕೆ ತಳ್ಳಿದ ತಾಯಿ.. ಕೊನೆಗೆ ತಾನೂ ಕೂಡ ಉಳಿಯಲಿಲ್ಲ

author-image
Bheemappa
Updated On
3 ಮಕ್ಕಳನ್ನ ಕೃಷಿ ಹೊಂಡಕ್ಕೆ ತಳ್ಳಿದ ತಾಯಿ.. ಕೊನೆಗೆ ತಾನೂ ಕೂಡ ಉಳಿಯಲಿಲ್ಲ
Advertisment
  • ಪುಟ್ಟ ಮಕ್ಕಳನ್ನ ನೀರಿಗೆ ತಳ್ಳಲು ಮಹಾತಾಯಿಗೆ ಮನಸು ಬಂತಾ?
  • ಗಂಡ ಕೃಷಿ ಹೊಂಡದಲ್ಲಿ ಇಣುಕಿ ನೋಡಿದಾಗ ಪ್ರಕರಣ ಬೆಳಕಿಗೆ
  • ಕುರಿ ಮೇಯಿಸಲು ಹೊಲಕ್ಕೆ ಹೋಗಿದ್ದಾಗ ಅಸಲಿಗೆ ಏನಾಯಿತು?

ಬಳ್ಳಾರಿ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿಯೊಬ್ಬರು ಮೂವರು ಮಕ್ಕಳ ಸಮೇತ ಕೃಷಿ ಹೊಂಡಕ್ಕೆ ಹಾರಿ ಜೀವ ಕಳೆದುಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಜಿಲ್ಲೆಯ ಕುರುಗೋಡು ತಾಲೂಕಿನ ಬರದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬೆಳಗಾವಿ ಮೂಲದ ಸಿದ್ಧಮ್ಮ (30) ಈಕೆಯ ಮಕ್ಕಳಾದ ಅಭಿಗ್ನ (8), ಅವಣಿ (6) ಹಾಗೂ ಆರ್ಯ (4) ಎಲ್ಲರು ಕೊನೆಯುಸಿರೆಳೆದಿದ್ದಾರೆ. ಬೆಳಗಾವಿ ಮೂಲದ ಸಿದ್ಧಮ್ಮ ಅವರು ತನ್ನ ಗಂಡ ಕುಮಾರ ಹಾಗೂ ಮೂವರು ಮಕ್ಕಳ ಸಮೇತ ಕುರಿ ಮೇಯಿಸಲು ಎಂದು ಬಳ್ಳಾರಿಗೆ ಬಂದಿದ್ದರು. ಪ್ರತಿ ವರ್ಷ ಬೇಸಿಗೆಯಂತೆ ಈ ವರ್ಷವೂ ತಾಲೂಕಿನ ಬರದನಹಳ್ಳಿಯ ರಾಘವೇಂದ್ರ ಎನ್ನುವರ ಹೊಲದಲ್ಲಿ ತಾತ್ಕಾಲಿಕ ಕುರಿ ಹಟ್ಟಿ ಹಾಕಿ ವಾಸವಿರುತ್ತಿದ್ದರು.

ಇದನ್ನೂ ಓದಿ: ಬುಲೆಟ್​ ಟ್ರೈನ್​ ಕಾರಿಡಾರ್; 8ನೇ ಸ್ಟೀಲ್​ ಬ್ರಿಡ್ಜ್​ ಪೂರ್ಣ.. ಇನ್ನು ಎಷ್ಟು ಸೇತುವೆ ನಿರ್ಮಿಸಬೇಕು?

ಗಂಡ ಹಾಗೂ ಹೆಂಡತಿ ಇಬ್ಬರ ನಡುವೆ ಜಗಳ ಆಗಿರುವ ಅನುಮಾನ ವ್ಯಕ್ತಪಡಿಸಲಾಗಿದೆ. ಈ ಗಲಾಟೆಯ ಬಳಿಕ ಬೆಳಗ್ಗೆ ಮೂವರು ಮಕ್ಕಳ ಸಮೇತ ಕುರಿ ಮೇಯಿಸಲು ತಾಯಿ ಹೋಗಿದ್ದರು. ಈ ವೇಳೆ ಮಕ್ಕಳ ಸಮೇತ ತಾಯಿ ಕೃಷಿ ಹೊಂಡಕ್ಕೆ ಹಾರಿರುವ ಶಂಕೆ ವ್ಯಕ್ತಪಡಿಸಲಾಗಿದೆ. ವಾಪಸ್ ಆಗದಿದ್ದಕ್ಕೆ ಪತಿ ಕುಮಾರ್ ಹುಡುಕಾಡಲು ಹೊಲಕ್ಕೆ ಹೋಗಿದ್ದರು.

ಈ ವೇಳೆ ಕೃಷಿ ಹೊಂಡದ ಬಳಿಯೇ ಎಲ್ಲ ಕುರಿಗಳು ನಿಂತಿದ್ದನ್ನು ನೋಡಿ ಗಾಬರಿಗೊಂಡಿದ್ದನು. ಪತ್ನಿ ಹಾಗೂ ಮಕ್ಕಳು ಕಾಣದಿದ್ದಾಗ ಕೃಷಿ ಹೊಂಡದಲ್ಲಿ ಇಣುಕಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಗಾಬರಿಯಿಂದ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ಸದ್ಯ ಈ ಸಂಬಂಧ ಮಹಿಳೆಯ ಸಹೋದರ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment