Breaking: ಪಾಕ್​ಗೆ ಗಾಯದ ಮೇಲೆ ಮತ್ತೊಂದು ದೊಡ್ಡ ಬರೆ.. ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ

author-image
Ganesh
Updated On
Breaking: ಪಾಕ್​ಗೆ ಗಾಯದ ಮೇಲೆ ಮತ್ತೊಂದು ದೊಡ್ಡ ಬರೆ.. ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ
Advertisment
  • ಬಲೂಚಿಸ್ತಾನದ ಹೊಸ ನಕ್ಷೆ, ಧ್ವಜ ಪ್ರದರ್ಶಿಸಿ ಸಂಭ್ರಮ
  • ಸ್ವಾತಂತ್ರ್ಯ ಘೋಷಿಸಿಕೊಂಡು ದೇಶಕ್ಕೆ ಇಟ್ಟ ಹೆಸರು ಏನು?
  • ಬಲೂಚ್ ನಾಯಕರು ಪ್ರಧಾನಿ ಮೋದಿ ಬಳಿ ಕೇಳಿಕೊಂಡಿದ್ದೇನು?

ಪಾಕಿಸ್ತಾನದಿಂದ ಮುಕ್ತರಾಗಲು ಹೋರಾಡ್ತಿರುವ ಬಲೂಚಿಸ್ತಾನ ಇದೀಗ ಸ್ವಾತಂತ್ರ್ಯ (Balochistan independence) ಘೋಷಿಸಿಕೊಂಡಿದೆ. ನಾವು ಪಾಕಿಸ್ತಾನದಿಂದ ಪ್ರತ್ಯೇಕವಾಗಿದ್ದೇವೆ ಎಂದು ಬಲೂಚಿಸ್ತಾನದ ನಾಯಕರು ಘೋಷಣೆ ಮಾಡಿದ್ದಾರೆ.

ಸ್ವಾತಂತ್ರ್ಯ ಘೋಷಣೆ ಬೆನ್ನಲ್ಲೇ ‘ರಿಪಬ್ಲಿಕ್ ಬಲೂಚಿಸ್ತಾನ’ (‘Republic of Balochistan’) ಅಂತಾ ಬಲೂಚ್ ನಾಯಕರು ನಾಮಕರಣ ಮಾಡಿದ್ದಾರೆ. ಸ್ವತಂತ್ರ ಬಲೂಚಿಸ್ತಾನವನ್ನು ಭಾರತ ಮತ್ತು ವಿಶ್ವಸಂಸ್ಥೆ ನಮ್ಮನ್ನು ಗುರುತಿಸಿ ಮಾನ್ಯತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಅಂದ್ಹಾಗೆ ಬಲೂಚಿಸ್ತಾನದಲ್ಲಿ ಸುಮಾರು 6 ಕೋಟಿ ಜನರಿದ್ದಾರೆ.

ಇದನ್ನೂ ಓದಿ: ಭಾರತೀಯರಿಗೆ ಹೆಮ್ಮೆಯ ವಿಚಾರ.. ಪಾಕ್‌ ವಶದಲ್ಲಿದ್ದ BSF ಯೋಧ ಪಿ.ಕೆ ಶಾ ವಾಪಸ್‌!

publive-image

ಸ್ವಾತಂತ್ರ್ಯ ಘೋಷಿಸಿಕೊಂಡ ಬೆನ್ನಲ್ಲೇ ಬಲೂಚ್ ನಾಯಕರು ಪ್ರತ್ಯೇಕ ಬಲೂಚ್ ನಕ್ಷೆ, ಧ್ವಜವನ್ನು ಪ್ರದರ್ಶಿಸಿದ್ದಾರೆ. ಪಾಕಿಸ್ತಾನ ಸರ್ಕಾರ, ಸೇನೆಯ ದೌರ್ಜನ್ಯದ ವಿರುದ್ಧ ಬಲೂಚ್ ಜನರು ದಶಕಗಳಿಂದ ಹೋರಾಟ ನಡೆಸುತ್ತಿದ್ದರು.

ಭಾರತಕ್ಕೆ ಬೆಂಬಲ

ಬಲೂಚಿಸ್ತಾನಕ್ಕೆ ದೆಹಲಿಯಲ್ಲಿ ಅಧಿಕೃತ ರಾಯಭಾರ ಕಚೇರಿ ತೆರೆಯಲು ಅವಕಾಶ ಕೊಡಬೇಕು ಎಂದು ಬಲೂಚ್ ನಾಯಕರು ಮನವಿ ಮಾಡಿದ್ದಾರೆ. ಬಲೂಚ್ ಹೋರಾಟಗಾರ ಮೀರ್ ಯಾರ್ ಬಲೂಚ್​ (Mir Yar Baloch) ಭಾರತಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ. ಪಾಕ್ ವಿರುದ್ಧ ಅಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ನಮ್ಮ ಬೆಂಬಲ ಇದೆ. ಪಿಒಕೆಯನ್ನು ಪಾಕಿಸ್ತಾನ ಖಾಲಿ ಮಾಡಬೇಕೆಂಬ ಭಾರತದ ಆಗ್ರಹಕ್ಕೆ ಬಲೂಚ್ ಬೆಂಬಲಿಸುತ್ತೆ. ನರೇಂದ್ರ ಮೋದಿ ಅವರೇ ನೀವು ಏಕಾಂಗಿಯಲ್ಲ, ನಿಮ್ಮ ಹಿಂದೆ ಬಲೂಚಿಸ್ತಾನದ 60 ಮಿಲಿಯನ್ ಜನರಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಲುಂಗಿಯಲ್ಲಿ ದೇಶ ಬಿಟ್ಟು ಪರಾರಿಯಾದ ಮಾಜಿ ಅಧ್ಯಕ್ಷ..! ಏನಾಯ್ತು ಇವರಿಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment