ಬಾಳು ಬೆಳಗುಂದಿಗೆ ಒಲಿದ ಅದೃಷ್ಟ; ಮ್ಯಾಜಿಕಲ್ ಕಂಪೋಸರ್​ನಿಂದ ಭರ್ಜರಿ ಆಫರ್.. ಏನದು?

author-image
Veena Gangani
Updated On
ಬಾಳು ಬೆಳಗುಂದಿಗೆ ಒಲಿದ ಅದೃಷ್ಟ; ಮ್ಯಾಜಿಕಲ್ ಕಂಪೋಸರ್​ನಿಂದ ಭರ್ಜರಿ ಆಫರ್.. ಏನದು?
Advertisment
  • ಸರಿಗಮಪ ಶೋನಲ್ಲೇ ಸಖತ್​ ಶೈನ್​ ಆದ ಬಾಳು ಬೆಳಗುಂದಿ
  • ವೇದಿಕೆ ಮೇಲೆ ಎಲ್ಲರಿಗೂ ಸರ್​ಪ್ರೈಸ್​ ನೀಡಿದ ಸ್ಟಾರ್​ ಗಾಯಕ
  • ಬಾಳು ಬೆಳಗುಂದಿ ಮುಂದಿನ ಹಾದಿಗೆ ಅಭಿಮಾನಿಗಳು ಹಾರೈಕೆ

ಹಳ್ಳಿ ಪ್ರತಿಭೆ, ತಕ್ಷಣವೇ ಹಾಡನ್ನು ರೆಡಿ ಮಾಡಿ ಹಾಡೋ ಅದ್ಭುತ ಗಾಯಕ ಅಂದ್ರೆ ಅದು ಬಾಳು ಬೆಳಗುಂದಿ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕತ್ರಿಕೊಪ್ಪ ಎಂಬ ಸಣ್ಣ ಹಳ್ಳಿಯ ಪ್ರತಿಭಾವಂತ ಯುವಕ. ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾನೆ.

ಇದನ್ನೂ ಓದಿ:ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ಭವ್ಯಾ ಗೌಡ; ಯಾವ ಸೀರಿಯಲ್?

publive-image

ಈಗಾಗಲೇ ಹಾವೇರಿ ಗಾಯಕ ಬಾಳು ಬೆಳಗುಂದಿ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ನೂರಾರು ಹಾಡುಗಳನ್ನು ಬರೆದು ಹಾಡಿರುವ ಬಾಳು ಬೆಳಗುಂದಿ ಅವರಿಗೆ ದೊಡ್ಡ ಅಭಿಮಾನಿ ಬಹಳವೇ ಇದೆ. ಇದೀಗ ಬಾಳು ಬೆಳಗುಂದಿಗೆ ಒಂದು ಭರ್ಜರಿ ಅವಕಾಶ ಸಿಕ್ಕಿದೆ.

publive-image

ಹೌದು, ಜೀ ಕನ್ನಡ ವಾಹಿನಿಯ ಸರಿಗಮಪ ಶೋನಲ್ಲಿ ಸ್ಪರ್ಧಿಯಾಗಿರುವ ಬಾಳು ಬೆಳಗುಂದಿ, ಈಗಾಗಲೇ ಕನ್ನಡ ಸಿನಿಮಾದಲ್ಲಿ ಹಾಡುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ಮ್ಯಾಜಿಕಲ್ ಕಂಪೋಸರ್​ ಅರ್ಜುನ್ ಜನ್ಯ ಅವರು ಹಲವು ಗಾಯಕರಿಗೆ ಚಾನ್ಸ್ ಕೊಟ್ಟಿದ್ದಾರೆ.
ಸರಿಗಮಪ ಶೋಗೆ ಬರುವ ಸ್ಪರ್ಧಿಗಳಿಗೆ ತಮ್ಮ ಸಿನಿಮಾದಲ್ಲೂ ಚಾನ್ಸ್ ನೀಡಿ, ಅವರ ಬೆಳವಣಿಗೆಗೆ ದಾರಿದೀಪವಾಗಿದ್ದಾರೆ.

publive-image

ಐಶ್ವರ್ಯಾ ರಂಗರಾಜನ್, ಸಂಜಿತ್ ಹೆಗಡೆ, ಸುನೀಲ್, ಅಂಕಿತಾ ಕುಂಡು ಮುಂತಾದ ಪ್ರತಿಭಾವಂತರಿಗೆ ಅರ್ಜುನ್ ಜನ್ಯ ಚಾನ್ಸ್ ಕೊಟ್ಟಿದ್ದಾರೆ. ಇದೀಗ ಉತ್ತರ ಕರ್ನಾಟಕದ ಮತ್ತೊಂದು ಪ್ರತಿಭೆ ಬಾಳು ಬೆಳಗುಂದಿಗೆ ಅವಕಾಶ ನೀಡಿದ್ದಾರೆ. ಹೀಗೆ ವೇದಿಕೆ ಮೇಲೆ ಮಾತಾಡಿದ ಅವರು, ನಮ್ಮ ಬಾಳು ಅವರು ಬ್ರ್ಯಾಟ್ ಸಿನಿಮಾಗೆ, ಅವರೇ ಸಾಹಿತ್ಯ ಬರೆದು ಹಾಡುತ್ತಿದ್ದಾರೆ. ಆದಷ್ಟು ಬೇಗ ಈ ಹಾಡು ರಿಲೀಸ್‌ ಆಗಲಿದೆ.

publive-image

ಬಾಳು ನಿಮಗೆ ಒಳ್ಳೆದಾಗಲಿ ಎಂದು ಅರ್ಜುನ್ ಜನ್ಯ ಹಾರೈಸಿದ್ದಾರೆ. ಆಗ ಬಾಳು, ನನ್ನ ಮೊದಲ ಸಿನಿಮಾ ಹಾಡು. ಅದು ಅರ್ಜುನ್ ಜನ್ಯ ಸರ್ ಮ್ಯೂಸಿಕ್‌ನಲ್ಲಿ ಹಾಡ್ತಿರುವುದು ಖುಷಿಯಾಗಿದೆ. ಅವರ ಸ್ಟುಡಿಯೋದಲ್ಲಿ ಆ ಮೈಕ್ ಮುಂದೆ ಹಾಡುವುದು ಎಂದಾಗ ಮೈ ಜುಂ ಎಂದಿತ್ತು. ಈ ವೇದಿಕೆಗೆ ಮತ್ತು ಅರ್ಜುನ್ ಜನ್ಯ ಸರ್‌ಗೆ ನಾನು ಯಾವತ್ತೂ ಋಣಿಯಾಗಿರುತ್ತೇನೆ ಅಂತ ಹೇಳಿದ್ದಾರೆ.

ಡಾರ್ಲಿಗ್‌ ಕೃಷ್ಣ ಹೀರೋ ಆಗಿ ಅಭಿನಯಿಸುತ್ತಿರೋ ಶಶಾಂಕ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಬ್ರ್ಯಾಟ್‌ನಲ್ಲಿ ಸಾಂಗ್​ ಹಾಡುವ ಚಾನ್ಸ್ ಬಾಳುಗೆ ಸಿಕ್ಕಿದೆ. ಬ್ರ್ಯಾಟ್‌ ಸಿನಿಮಾಗೆ ಸಂಗೀತ ನೀಡುತ್ತಿರುವುದು ಅರ್ಜುನ್ ಜನ್ಯ. ಹಾಗಾಗಿ ಈ ಚಿತ್ರದಲ್ಲಿರುವ ಒಂದು ಹಾಡನ್ನು ಬಾಳು ಅವರಿಂದ ಹಾಡಿಸಿದ್ದಾರೆ. ಬಾಳು ಬರೀ ಹಾಡುವುದಷ್ಟೇ ಅಲ್ಲ, ಅತ್ಯುತ್ತಮವಾಗಿ ಸಾಹಿತ್ಯ ರಚನೆ ಕೂಡ ಮಾಡಿದವರು. ಹಾಗಾಗಿ, ಬ್ರ್ಯಾಟ್‌ ಸಿನಿಮಾಗೆ ಬಾಳು ಹಾಡನ್ನೂ ಕೂಡ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಯೋಜಿಸಿರುವ ಟ್ಯೂನ್‌ಗೆ ಸಾಹಿತ್ಯ ಬರೆದು ಬಾಳು ಬೆಳಗುಂದಿ ಹಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment