/newsfirstlive-kannada/media/post_attachments/wp-content/uploads/2025/05/balu_.jpg)
ಹಳ್ಳಿ ಪ್ರತಿಭೆ, ತಕ್ಷಣವೇ ಹಾಡನ್ನು ರೆಡಿ ಮಾಡಿ ಹಾಡೋ ಅದ್ಭುತ ಗಾಯಕ ಅಂದ್ರೆ ಅದು ಬಾಳು ಬೆಳಗುಂದಿ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕತ್ರಿಕೊಪ್ಪ ಎಂಬ ಸಣ್ಣ ಹಳ್ಳಿಯ ಪ್ರತಿಭಾವಂತ ಯುವಕ. ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾನೆ.
ಇದನ್ನೂ ಓದಿ:ಮಳೆಯೋ ಮಳೆ.. ಕರ್ನಾಟಕದಲ್ಲಿ ನಿನ್ನೆ ಮಳೆರಾಯ ಏನೆಲ್ಲ ಅನಾಹುತ ಮಾಡಿದ್ದಾನೆ..? Photos
ಈಗಾಗಲೇ ಹಾವೇರಿ ಗಾಯಕ ಬಾಳು ಬೆಳಗುಂದಿ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ನೂರಾರು ಹಾಡುಗಳನ್ನು ಬರೆದು ಹಾಡಿರುವ ಬಾಳು ಬೆಳಗುಂದಿ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದೀಗ ಬಾಳು ಬೆಳಗುಂದಿಗೆ ಸರಿಗಮಪ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ.
ಅಲ್ಲದೇ ದಾಖಲೆಯ ಪ್ರಾಣದಲ್ಲಿ ವೋಟ್ಸ್ಗಳನ್ನು ಪಡೆದುಕೊಂಡಿದ್ದಾರಂತೆ. ಹೌದು, ಜೀ ಕನ್ನಡ ವಾಹಿನಿಯ ಸರಿಗಮಪ ಶೋನಲ್ಲಿ ಸ್ಪರ್ಧಿಯಾಗಿರುವ ಬಾಳು ಬೆಳಗುಂದಿ, ಈಗಾಗಲೇ ಕನ್ನಡ ಸಿನಿಮಾದಲ್ಲಿ ಹಾಡುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಹಲವು ಗಾಯಕರಿಗೆ ಚಾನ್ಸ್ ಕೊಟ್ಟಿದ್ದಾರೆ. ಸರಿಗಮಪ ಶೋಗೆ ಬರುವ ಸ್ಪರ್ಧಿಗಳಿಗೆ ತಮ್ಮ ಸಿನಿಮಾದಲ್ಲೂ ಚಾನ್ಸ್ ನೀಡಿ, ಅವರ ಬೆಳವಣಿಗೆಗೆ ದಾರಿದೀಪವಾಗಿದ್ದಾರೆ.
ಇದನ್ನೂ ಓದಿ: ಮಗುಗೆ ಕಚ್ಚಿದ್ದ ನಾಯಿ.. ಆಸ್ಪತ್ರೆಗೆ ಹೋಗುವಾಗ ಬೈಕ್ ಅಡ್ಡಗಟ್ಟಿದ್ದಕ್ಕೆ ದುರಂತ
View this post on Instagram
ಇದೀಗ ಮತ್ತೊಂದು ಖುಷಿ ವಿಚಾರ ಏನೆಂದರೆ ಬಾಳು ಬೆಳಗುಂದಿ ವೀಕ್ಷಕರಿಂದ ಅತಿ ಹೆಚ್ಚು ವೋಟ್ಸ್ಗಳನ್ನು ಪಡೆದು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಮೇಲೆ ಹುಟ್ಟು ಹಬ್ಬದ ನಿಮಿತ್ತ ಕೇಕ್ ಕಟ್ ಮಾಡಿಸಿ ಬಾಳುಗೆ ಜಡ್ಜ್ ಸರ್ಪ್ರೈಸ್ ಕೊಟ್ಟಿದ್ದಾರೆ. ಜೊತೆಗೆ ಫೈನಲಿಸ್ಟ್ ಆಗಿ ಆಯ್ಕೆ ಮಾಡಿದ್ದಾರೆ.
ಸದ್ಯ ಈ ಬಾರಿಯ ಟಾಪ್ 6 ಫೈನಲಿಸ್ಟ್ ಆರಾಧ್ಯ ರಾವ್, ಬಾಳು ಬೆಳಗುಂದಿ, ಶಿವಾನಿ ಶಿವದಾಸ್, ಧ್ಯಾಮೇಶ, ರಶ್ಮಿ, ಅಮೋಘ ವರ್ಷ ಆಯ್ಕೆಯಾಗಿದ್ದಾರೆ. ಈ ವಾರದ ಕೊನೆಯಲ್ಲಿ ಈ ಬಾರಿಯ ಸರಿಗಮಪ ವಿನ್ನರ್ ಯಾರೆಂದು ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ