ಇನ್ಮುಂದೆ ಐಫೋನ್​​ 16 ಬ್ಯಾನ್​​; ಹೊಸ ಕಾನೂನಿಗೆ ಬೆಚ್ಚಿಬಿದ್ದ ಜನ; ನೀವು ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
ಆ್ಯಪಲ್​ ಪ್ರಿಯರಿಗೆ ಶಾಕ್​.. ಐಫೋನ್​​ 16 ಪ್ರೊದಲ್ಲಿ ಕಾಣಿಸಿಕೊಂಡ ಸಮಸ್ಯೆ!
Advertisment
  • ಈ ದೇಶದಲ್ಲಿ ಐಫೋನ್​ 16 ಬಳಕೆ ಕಾನೂನು ಬಾಹಿರ ಏಕೆ?
  • ಆ್ಯಪಲ್​ ತನ್ನ ಜವಾಬ್ದಾರಿಯನ್ನು ಸರಿಯಾಗಿ ಪೂರೈಸಿಲ್ವಾ..?
  • ಐಫೋನ್​ 16 ಹೊಂದಿರೋರು ಓದಲೇಬೇಕಾದ ಸ್ಟೋರಿ ಇದು

ಆ್ಯಪಲ್​ ಕಂಪನಿ ಐಫೋನ್​ 16 ಪರಿಚಯಿಸಿ ತಿಂಗಳುಗಳೇ ಕಳೆದವು. ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆಯನ್ನು ಪಡೆಯುವ ಮೂಲಕ ಈ ಫೋನ್​​ ಗುರುತಿಸಿಕೊಂಡಿದೆ. ಆದರೀಗ ಇಂಡೋನೇಷ್ಯಾ ಮಾತ್ರ ಐಫೋನ್​​ 16 ಬಳಕೆ ದೇಶದಲ್ಲಿ ಕಾನೂನು ಬಾಹಿರ ಎಂಬ ಕಾನೂನನ್ನು ತಂದಿದೆ. ಇದರಿಂದ ಪ್ರವಾಸಿಗರಿಗೂ ಈ ಕಾನೂನು ತಲ್ಲಣಗೊಳಿಸುವಂತೆ ಮಾಡಿದೆ.

ಐಫೋನ್​ 16 ಮಾರಾಟ ಮತ್ತು ಬಳಕೆಯನ್ನು ಇಂಡೋನೇಷ್ಯಾ ನಿಷೇಧಿಸಿದೆ. ದೇಶದ ಕೈಗಾರಿಕೆ ಸಚಿವ ಅಗುಸ್​​ ಗುಮಿವಾಂಗ್​ ಕರ್ತಸಸ್ಮಿತಾರವರು ಈ ಕಾನೂನನ್ನು ಜಾರಿಗೆ ತಂದಿದ್ದು, ಗ್ರಾಹಕರ ಐಫೋನ್​ 16 ಬಳಸಬಾರದು ಎಂದು ಹೇಳಿದ್ದಾರೆ.

ಸಚಿವ ಅಗುಸ್​​ ಗುಮಿವಾಂಗ್​ ಕರ್ತಸಸ್ಮಿತಾ ಪ್ರಕಾರ, ಇಂಡೋನೇಷ್ಯಾದಲ್ಲಿ ಐಫೋನ್​ 16 ಇಂಟರ್​ನ್ಯಾಷನಲ್​​ ಮೊಬೈಲ್​​ ಸಲಕರಣೆಯ ಗುರುತಿನ ಪ್ರಮಾಣೀಕರಣವನ್ನು ಹೊಂದಿಲ್ಲ. ಹಾಗಾಗಿ ಇದನ್ನು ವಿದೇಶದಿಂದ ಖರೀದಿಸಿ ಇಂಡೋನೇಷ್ಯಾದಲ್ಲಿ ಬಳಸಿದರೆ ಅದು ಕಾನೂನು ಬಾಹಿರ ಎಂದು ಹೇಳಿದ್ದಾರೆ.

ಇಂಡೋನೇಷ್ಯಾ ಐಫೋನ್​ 16ನನ್ನು ನಿಷೇಧಿಸಿದ್ಯಾಕೆ?

ಆ್ಯಪಲ್​ ತನ್ನ ಹೂಡಿಕೆಯನ್ನು ಇಂಡೋನೇಷ್ಯಾದಲ್ಲಿ ಹೂಡಿಕೆ ಮಾಡಲು ವಿಫಲವಾಗಿದೆ. 1.71 ಟ್ರಿಲಿಯನ್​ ರೂಪಾಯಿಯಲ್ಲಿ ಸರಿಸುಮಾರು 1.48 ಟ್ರಿಲಿಯನ್​ ರೂಪಾಯಿಯನ್ನು ಹೂಡಿಕೆ ಮಾಡಿದೆ. ಇದರ ಪರಿಣಾಮ ಸುಮಾರು 230 ಟ್ರಿಲಿಯನ್​​ ರೂಪಾಯಿ ಕೊರತೆಯಾಗಿದೆ. ಆ್ಯಪಲ್​ ತನ್ನ ಜವಾಬ್ದಾರಿಯನ್ನು ಸರಿಯಾಗಿ ಪೂರೈಸದ ಕಾರಣ ದೇಶದಲ್ಲಿ ಐಫೋನ್​ 16 ಪರವಾನಗಿ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಇದರ ಬಳಕೆಯನ್ನು ಕಾನೂನುಬಾಹಿರಗೊಳಿಸಿದೆ.

ಪ್ರವಾಸಿಗರ ಕತೆ ಏನು?

ಇಂಡೋನೇಷ್ಯಾಗೆ ಭೇಟಿ ನೀಡುವ ಪ್ರವಾಸಿಗರು ಐಫೋಣ್​ 16 ಹೊಂದಿದ್ದಲ್ಲಿ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ IMEI ಪ್ರಮಾಣೀಕರಣವನ್ನು ಹೊಂದಿರಬೇಕು. ಇಲ್ಲದಿದ್ದಲ್ಲಿ ಪ್ರವಾಸಿಗರ ಮೇಲೂ ಈ ಕಾನೂನಿನ ಪರಿಣಾಮ ಬೀರಲಿದೆ.

ಇದನ್ನೂ ಓದಿ:ದಿಢೀರ್​ ಹೃದಯಾಘಾತ; ನಟ ದರ್ಶನ್​ ಆಪ್ತ ಮತ್ತು ನವಗ್ರಹ ಖ್ಯಾತಿಯ ಗಿರಿ ದಿನೇಶ್ ನಿಧನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment