/newsfirstlive-kannada/media/post_attachments/wp-content/uploads/2024/05/Airport.jpg)
ಬೆಂಗಳೂರು: ಕೆಂಪೇಗೌಡ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ನಲ್ಲಿ ನಿತ್ಯ ಸಾವಿರಾರು ಜನ ಓಡ್ತಾರೆ. ಅವರ ಓಡಾಟಕ್ಕಾಗಿ ನೂರಾರು ಟ್ಯಾಕ್ಸಿಗಳು ಇಲ್ಲಿ ಸೇವೆಯನ್ನ ಸಲ್ಲಿಸುತ್ತವೆ.
ಆದ್ರೆ ಮೊನ್ನೆಯಿಂದ ಏರ್​ರ್ಪೋರ್ಟ್‌ನಲ್ಲಿ ಶುರುವಾದ ಫೀಸ್ ಕಲೆಕ್ಷನ್ ಆಕ್ರೋಶಕ್ಕೆ ಕಾರಣವಾಗಿತ್ತು. ಹೊಸದಾಗಿ ಶುರು ಮಾಡಿದ ಪಿಕ್ ಅಪ್ ಲೇನ್ ಕಲೆಕ್ಷನ್‌ಗೆ ಟ್ಯಾಕ್ಸಿ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಹನ ದಟ್ಟಣೆ ತಪ್ಪಿಸಲು ಎರಡೂ ಟರ್ಮಿನಲ್​ಗಳಲ್ಲೂ ಶುಲ್ಕ ವಸೂಲಿಗೆ ನಿರ್ಧಾರ ಮಾಡಲಾಗಿತ್ತು. ನಿನ್ನೆಯಿಂದಲೇ ಈ ಶುಲ್ಕ ವಸೂಲಿ ಶುರುವಾಗಿತ್ತು.
/newsfirstlive-kannada/media/post_attachments/wp-content/uploads/2024/05/Airport1.jpg)
ಪಿಕ್​ ಅಪ್​ ಲೇನ್​ ಬಿಸಿ!
ವಿಮಾನ ನಿಲ್ದಾಣದ ಪಿಕ್ ಲೇನ್ ಪ್ರವೇಶಿಸುವ ಖಾಸಗಿ ವೈಟ್ ಬೋರ್ಡ್ ಕಾರುಗಳಿಗೆ ಮೊದಲ 7 ನಿಮಿಷಕ್ಕೆ 150 ರೂ. ಮತ್ತು ಮುಂದಿನ ಏಳು ನಿಮಿಷಗಳಿಗೆ 150 ಶುಲ್ಕ ವಿಧಿಸಲಾಗ್ತಿತ್ತು. ಯೆಲ್ಲೋ ಬೋರ್ಡ್ ವಾಹನಗಳಿಗೆ ಮೊದಲ 7 ನಿಮಿಷಗಳಿಗೆ 150 ರೂ. ಮುಂದಿನ 7 ನಿಮಿಷಗಳಿಗೆ 300 ರೂ. ಶುಲ್ಕ ಫಿಕ್ಸ್ ಮಾಡಲಾಗಿತ್ತು. ಇನ್ನು, ಬಸ್‌ಗಳು ಬಂದರೆ ಅವುಗಳಿಗೆ ಬರೋಬ್ಬರಿ 600 ರೂ. ಶುಲ್ಕ, ಟೆಂಪೋ ಟ್ರಾವೆಲರ್ಸ್‌ಗೆ 300 ರೂ. ಶುಲ್ಕ, ಟಿಕೆಟ್ ಕಳೆದು ಹೋದರೆ 600 ರೂ. ಶುಲ್ಕ ನಿಗಧಿಪಡಿಸಲಾಗಿತ್ತು. ಇದನ್ನ ಮೀರಿ 15 ನಿಮಿಷಕ್ಕೂ ಹೆಚ್ಚಿದ್ರೆ ಗಾಡಿಗಳನ್ನ ಟೋಯಿಂಗ್ ಮಾಡಲಾಗುತ್ತಿತ್ತು. ಈ ಚಾರ್ಜ್​ ಕೂಡ ವಾಹನ ಮಾಲೀಕರೇ ಭರಿಸಬೇಕಿತ್ತು. ಇದ್ರಿಂದ ಆಕ್ರೋಶಗೊಂಡ ಖಾಸಗಿ ವಾಹನ ಮಾಲೀಕರ ಅಸೋಸಿಯೇಷನ್ ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಗೂ ಪತ್ರ ಬರೆದಿದ್ರು.
ಪ್ರತಿಭಟನೆ ಬೆನ್ನಲ್ಲೇ ಪಿಕ್ ಅಪ್ ಲೇನ್​ ಶುಲ್ಕ ಸ್ಥಗಿತ
ಯಾವಾಗ ಖಾಸಗಿ ವಾಹನ ಮಾಲೀಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರೋ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ರೋ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಬೆಂಗಳೂರು ಏರ್​ಪೋರ್ಟ್​ನಲ್ಲಿ ವಾಹನಗಳಿಗೆ ಪಿಕ್ ಅಪ್ ಲೇನ್ ಶುಲ್ಕ ವಿಧಿಸೋದಕ್ಕೆ ತಡೆ ನೀಡಿದೆ. ಇದ್ರಿಂದಾಗಿ ಟ್ಯಾಕ್ಸಿ ಚಾಲಕರಿಗೆ ಎದುರಾಗಿದ್ದ ಆತಂಕ ದೂರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us