/newsfirstlive-kannada/media/post_attachments/wp-content/uploads/2025/02/ROHIT_SHARMA.jpg)
ಭಾರತ-ಬಾಂಗ್ಲಾದೇಶದ ನಡುವಿನ ಫೈಟ್ಗೆ ವೇದಿಕೆ ಸಿದ್ಧವಾಗಿದೆ. ದುಬೈನಲ್ಲಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಅಭಿಯಾನ ಆರಂಭಿಸುವ ಲೆಕ್ಕಾಚಾರದಲ್ಲಿದೆ. ಎಲ್ಲರ ಕಣ್ಣಿಗೂ ಟೀಮ್ ಇಂಡಿಯಾನೇ ಹಾಟ್ ಫೆವರೀಟ್. ಹಾಗಂತ ಇದನ್ನ ಒನ್ ಸೈಡೆಡ್ ಗೇಮ್ ಅನ್ನೋಕೆ ಸಾಧ್ಯವಿಲ್ಲ. ಯಾಕಂದ್ರೆ, ಪಾಕ್ ವಿರುದ್ಧದ ಪಂದ್ಯದಷ್ಟೇ ರಣ ರೋಚಕ ಇತಿಹಾಸ ಬಾಂಗ್ಲಾ, ಭಾರತದ ರೈವರ್ಲಿಗೆ ಇದೆ.
ಇಂಡೋ-ಪಾಕ್ ಮ್ಯಾಚ್ ಎಂದಾಕ್ಷಣ ವಿಶ್ವ ಕ್ರಿಕೆಟ್ನಲ್ಲಿ ನೆಕ್ಸ್ಟ್ ಲೆವೆಲ್ ಕ್ರೇಜ್ ಹುಟ್ಟಿ ಬಿಡುತ್ತೆ. ಇಡೀ ವಿಶ್ವ ಈ ಪಂದ್ಯವನ್ನ ನೋಡಲು ಕಾದು ಕುಳಿತಿರುತ್ತೆ. ಇಂದು ನಡೆಯೋ ಇಂಡೋ -ಬಾಂಗ್ಲಾ ಫೈಟ್ ಕೂಡ ಅದಕ್ಕಿಂತ ಏನ್ ಕಡಿಮೆಯಿಲ್ಲ. ಯಾಕಂದ್ರೆ, ಇಂಡೋ ಪಾಕ್, ಪಂದ್ಯಗಳಲ್ಲಿ ಸಿಗುವಷ್ಟೇ ಕಿಕ್, ಇಂಡೋ ಬಾಂಗ್ಲಾ ಬ್ಯಾಟಲ್ನಲ್ಲಿ ಸಿಗುತ್ತೆ. ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸುವಂತ ಥ್ರಿಲ್ಲಿಂಗ್ ಕದನಗಳು, ಸ್ಲೆಡ್ಜಿಂಗ್ ವಾರ್ಗಳು ರೋಚಕತೆಯನ್ನ ಹುಟ್ಟು ಹಾಕುತ್ತವೆ. ಈ ಹಿಂದೆ ನಡೆದ ರಣರೋಚಕ ಕದನಗಳೇ ಇದಕ್ಕೆ ಸಾಕ್ಷಿ.
2007 ಏಕದಿನ ವಿಶ್ವಕಪ್- ಭಾರತಕ್ಕೆ ಬಾಂಗ್ಲಾ ಶಾಕ್..!
ಅದು 2007ರ ಏಕದಿನ ವಿಶ್ವಕಪ್ ಟೂರ್ನಿ. ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ಎದುರು ಕಣಕ್ಕಿಳಿದಿತ್ತು. ಗೆಲ್ಲುವ ವಿಶ್ವಾಸದಲ್ಲಿ ಮೈದಾನಕ್ಕಿಳಿದ ಟೀಮ್ ಇಂಡಿಯಾ ಕೇವಲ 191 ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನ 5 ವಿಕೆಟ್ ಕಳೆದುಕೊಂಡು ಬೆನ್ನಟ್ಟಿದ ಬಾಂಗ್ಲಾದೇಶ ಐತಿಹಾಸಿಕ ಗೆಲುವು ಸಾಧಿಸಿತ್ತು. ಸೋತ ಟೀಮ್ ಇಂಡಿಯಾದ ವಿಶ್ವಕಪ್ ಕನಸು ಭಗ್ನವಾಗಿ ಲೀಗ್ನಿಂದ ಹೊರ ಬಿದ್ದಿತ್ತು.
2016 ಟಿ20 ವಿಶ್ವಕಪ್- ಧೋನಿಯ ಚಕ್ರವ್ಯೂಹ.. ಬಾಂಗ್ಲಾ ಕಂಗಾಲ್
2016ರ ಟಿ20 ವಿಶ್ವಕಪ್ನಲ್ಲಿ ಸೆಮೀಸ್ ಪ್ರವೇಶಕ್ಕೆ ಟೀಮ್ ಇಂಡಿಯಾ ಪಾಲಿನ ಮಸ್ಟ್ ವಿನ್ ಗೇಮ್ ಅದು. ಬಾಂಗ್ಲಾಗೆ ಭಾರತ ತಂಡ 146 ರನ್ಗಳ ಸಾಧಾರಣ ಟಾರ್ಗೆಟ್ ನೀಡಿತ್ತು. ಕೊನೆ ಓವರ್ನಲ್ಲಿ ಬಾಂಗ್ಲಾ ಗೆಲುವಿಗೆ 11 ರನ್ ಬೇಕಿತ್ತಷ್ಟೇ. ಮೊದಲ 3 ಎಸೆತದಲ್ಲಿ 9 ರನ್ಗಳಿಸಿದ ಬಾಂಗ್ಲಾ ಗೆದ್ದೇ ಬಿಟ್ವಿ ಅಂತಾ ಬೀಗ್ತಿತ್ತು. ಆದ್ರೆ ಕೊನೆಗೆ ಚಾಣಾಕ್ಷ ಧೋನಿಯ ಚಕ್ರವ್ಯೂಹದಲ್ಲಿ ಸಿಲುಕಿ ಒದ್ದಾಡಿ ಸೋಲಿಗೆ ಶರಣಾಗಿತ್ತು.
2018ರ ನಿದಾಸ್ ಟ್ರೋಫಿ- ಒಂದು ಎಸೆತ.. 5 ರನ್.. ಥ್ರಿಲ್ಲಿಂಗ್ ಎಂಡ್
2018ರ ನಿದಾಸ್ ಟ್ರೋಫಿ ಫೈನಲ್ ಪಂದ್ಯವನ್ನ ಕ್ರಿಕೆಟ್ ಪ್ರೇಮಿಗಳು ಮರೆಯೋಕೆ ಸಾಧ್ಯಾನೆ ಇಲ್ಲ. ಎಂತಾ ಥ್ರಿಲ್ಲಿಂಗ್ ಅಂತ್ಯ ಅದು.. ಒಂದು ಎಸೆತಕ್ಕೆ 5 ರನ್ ಬೇಕಿದ್ದಾಗ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿದ ಆ ಕ್ಷಣ ಇಂದಿಗೂ ಫ್ಯಾನ್ಸ್ ಕಣ್ಣಿಗೆ ಕಟ್ಟಿದಂತಿದೆ.
2022ರ ಟಿ20 ವಿಶ್ವಕಪ್ ಫೈಟ್- ರಣರೋಚಕವಾಗಿ ಗೆದ್ದ ಭಾರತ
2022ರ ಟಿ20 ವಿಶ್ವಕಪ್ನಲ್ಲೂ ಬಾಂಗ್ಲಾ ಟೈಗರ್ಸ್ ಟೀಮ್ ಇಂಡಿಯಾಗೆ ಟಫ್ ಫೈಟ್ ಕೊಟ್ಟಿದ್ದರು. ಡಿಎಲ್ಎಸ್ ನಿಯಮದ ಪ್ರಕಾರ 16 ಓವರ್ಗಳಲ್ಲಿ 151 ರನ್ಗಳ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾ, ಗೆಲುವಿನ ಸನಿಹ ಬಂದೇ ಬಿಟ್ಟಿತ್ತು. ಕೊನೆಯಲ್ಲಿ ಕೇವಲ 5 ರನ್ ಅಂತರದಲ್ಲಿ ಸೋತು ಹೋಗಿತ್ತು.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಮತ್ತೊಂದು ಎಕ್ಸೈಟಿಂಗ್ ನ್ಯೂಸ್.. ಕಳೆದ ಬಾರಿಯಂತೆ ಈ ಸಲವೂ..
2023ರ ಏಷ್ಯಾಕಪ್- ಟೀಮ್ ಇಂಡಿಯಾಗೆ ಸೋಲಿನ ಅಘಾತ..!
2023ರ ಏಷ್ಯಾಕಪ್ ಪಂದ್ಯದಲ್ಲಿ ಬಾಂಗ್ಲಾ, ಟೀಮ್ ಇಂಡಿಯಾಗೆ ಸೋಲಿನ ಶಾಕ್ ನೀಡಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾ, 265 ರನ್ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ್ದ ಟೀಮ್ ಇಂಡಿಯಾ 259 ರನ್ಗಳಿಗೆ ಸುಸ್ತಾಗಿ ಸೋಲಿನ ಆಘಾತ ಎದುರಿಸಿತು.
ಇದಕ್ಕೆ ಕಾರಣ ಬಾಂಗ್ಲಾ ಪಡೆಯನ್ನ ಲೈಟ್ ಆಗಿ ಪರಿಗಣಿಸಿದ್ದಾಗಿತ್ತು. ಆದ್ರೀಗ ಈ ಸೋಲು ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾಗೆ ಪಾಠ ಆಗಬೇಕಿದೆ. ಜೊತೆಗೆ ದುಬೈ, ಈ ಕಂಡೀಷನ್ಸ್ ಬಾಂಗ್ಲಾಗೆ ಹೊಸತಲ್ಲ. ಅನುಭವಿ ಬ್ಯಾಟರ್ಗಳು, ಮೋಸ್ಟ್ ಎಕ್ಸ್ಪೀರಿಯನ್ಸ್ ಬೌಲರ್ಗಳ ಜೊತೆಗೆ ಸ್ಪಿನ್ ಆ್ಯಂಡ್ ಪಾಸ್ಟ್ ಬೌಲಿಂಗ್ ಆಲ್ರೌಂಡರ್ಗಳ ದಂಡೇ ಬಾಂಗ್ಲಾ ಪಡೆಯಲ್ಲಿದೆ. ಹೀಗಾಗಿ ಸ್ಪಲ್ಪ ಯಾಮಾರಿದ್ರೂ, ಸೋಲು ಅನುಭವಿಸಬೇಕಾಗುತ್ತದೆ ಎಚ್ಚರ.!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ