/newsfirstlive-kannada/media/post_attachments/wp-content/uploads/2025/05/bande-mahakali.jpg)
ಬೆಂಗಳೂರಿನಲ್ಲಿ ಅನೇಕ ದೇವಿ ದೇವಾಲಯಗಳಿವೆ. ಅವುಗಳಲ್ಲಿ ಬಂಡೆ ಮಹಾಕಾಳಿ ದೇವಾಲಯವೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆದ್ರೆ ಈಗ ಬಂಡೆ ಮಹಾಕಾಳಿ ದೇವಸ್ಥಾನದ ಅರ್ಚಕನಿಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ 47 ಕೊರೊನಾ ಕೇಸ್.. ಪಾಸಿಟಿವಿಟಿ ರೇಟ್ ಹೆಚ್ಚಾದ್ರೆ ಎಲ್ಲರಿಗೂ ಟೆನ್ಷನ್; ಯಾಕೆ ಗೊತ್ತಾ?
ಹೌದು, ಬಂಡೆಮಹಾಕಾಳಿ ದೇವಸ್ಥಾನದ ಪಾಸ್ ಪಡೆಯುವ ವಿಚಾರಕ್ಕೆ ದೇವಸ್ಥಾನದ ಅರ್ಚಕ ಶಶಿಕುಮಾರ್ ಹಾಗೂ ರಮೇಶ್ ಎಂಬುವವರ ಮಧ್ಯೆ ಗಲಾಟೆ ಆಗಿದೆ. ಪಾಸ್ ಕೊಡುವಂತೆ ದೇವಸ್ಥಾನದ ಅರ್ಚಕ ಶಶಿಕುಮಾರ್ಗೆ ರಮೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿರೋ ಆರೋಪ ಕೇಳಿ ಬಂದಿದೆ.
ತನ್ನ ಸ್ನೇಹಿತರಿಗೆ ದರ್ಶನದ ಪಾಸ್ ನೀಡುವಂತೆ ರಮೇಶ್ ಕೇಳಿದ್ದ, ಆದ್ರೆ ಪಾಸ್ ನೀಡಲು ಶಶಿಕುಮಾರ್ ನಿರಾಕರಿಸಿದ್ರು. ಇದಾದ ಬಳಿಕ ಮತ್ತೆ ಕಳೆದ ಶನಿವಾರ ಕೂಡ ಪಾಸ್ ಪಡೆಯುವ ವಿಚಾರಕ್ಕೆ ಶಶಿಕುಮಾರ್ ಹಾಗೂ ರಮೇಶ್ ಮಧ್ಯೆ ಕಿರಿಕ್ ಆಗಿದೆ. ಹೀಗಾಗಿ ಚಾಮರಾಜಪೇಟೆಗೆ ಬಂದಿದ್ದ ಶಶಿಕುಮಾರ್, ರಮೇಶ್ ಜೊತೆ ಮಾತಿನ ಚಕಮಕಿ ನಡೆದಿದೆ. ಆದ್ರೆ ಶಶಿಕುಮಾರ್ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ರಮೇಶ್ ಆರೋಪಿದ್ದಾರೆ. ಇನ್ನು ಅರ್ಚಕ ಶಶಿಕುಮಾರ್ ಅವಾಚ್ಯ ಶಬ್ದಗಳಿಂದ ರಮೇಶ್ ನಿಂದಿಸಿದ್ದಾರೆಂದು ಕೆಂಪೇಗೌಡ ನಗರ ಠಾಣೆಗೆ ದೂರು ನೀಡಿದ್ದಾರೆ.