newsfirstkannada.com

ಶಂಕಿತ ಉಗ್ರ ಜುನೈದ್‌ಗೆ ಬೆಂಗಳೂರಲ್ಲೇ ಇದ್ದಾಳೆ ಗರ್ಲ್‌ಫ್ರೆಂಡ್‌; ಬ್ಲಾಸ್ಟ್‌ಗೆ ಸಂಚು ರೂಪಿಸಿದ್ದವನ ಲವ್ ಸ್ಟೋರಿ ಏನು ಗೊತ್ತಾ?

Share :

Published July 25, 2023 at 1:32pm

Update July 25, 2023 at 2:13pm

    ತನಿಖಾ ದಳಕ್ಕೆ ಸಿಕ್ಕಿದೆ ಜುನೈದ್​ ಕುರಿತಾದ ಮಾಹಿತಿ

    ಎಲ್ಲಿ ಅಡಗಿದ್ದಾನೆ ಗೊತ್ತಾ A2 ಆರೋಪಿ ಜುನೈದ್?

    ಶಂಕಿತ ಉಗ್ರನ ಬಳಿ ಇದೆ ಒರಿಜಿನಲ್ ಪಾಸ್ ಪೋರ್ಟ್

ಬೆಂಗಳೂರು ಬ್ಲಾಸ್ಟ್​ಗೆ ಪ್ಲಾನ್​ ಮಾಡಿದ್ದ A2 ಆರೋಪಿ ಜುನೈದ್​ ತಲೆಮರೆಸಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೀಗ ಶಂಕಿತ ಉಗ್ರನ ಕುರಿತಾಗಿ ಹಲವು ಮಾಹಿತಿಗಳು ಹೊರಬಿದ್ದಿದೆ. 2021ರಲ್ಲೇ ಜುನೈದ್​​ ಬೆಂಗಳೂರು ಬಿಟ್ಟಿದ್ದಾನೆ ಎಂಬ ಮಾಹಿತಿ ತನಿಖಾ ಇಲಾಖೆಗೆ ಲಭ್ಯವಾಗಿದೆ.

ಬೆಂಗಳೂರು ಹುಡುಗಿಯನ್ನ ಪ್ರೀತಿ ಮಾಡುತ್ತಿದ್ದ ಜುನೈದ್​

ತಲೆಮರೆಸಿಕೊಂಡಿರುವ ಜುನೈದ್​​ ವಿದೇಶದಲ್ಲಿದ್ದಾನೆ ಎಂಬ ಮಾಹಿತಿ ಈ ಮೊದಲೇ ಹೊರಬಿದ್ದಿತ್ತು. ಆದರೀಗ ಈತನ ಕುರಿತಾಗಿ ಸಾಕಷ್ಟು ಮಾಹಿತಿಗಳು ತನಿಖಾ ತಂಡಕ್ಕೆ ಸಿಕ್ಕಿದೆ. ಜುನೈದ್​ ಓರ್ವ ಯುವತಿಯ ಪ್ರೀತಿಗೆ ಬಿದ್ದಿದ್ದು, ಆತನಿಗೆ ಬೆಂಗಳೂರಿನಲ್ಲಿ ಓರ್ವ ಗರ್ಲ್​ ಫ್ರೆಂಡ್​​ ಇದ್ದಾಳೆ. ಬೆಂಗಳೂರು ಬ್ಲಾಸ್ಟ್​ಗೆ ಸಂಚು ರೂಪಿಸಿದ ಸಂಗತಿ ಹೊರಬೀಳುವವವರೆಗೆ ಆತ ಆಕೆಯ ಜೊತೆಗೆ ಸಂಪರ್ಕದಲ್ಲಿದ್ದ. ಆದರೆ ಕೇಸ್ ಬೆಳಕಿಗೆ ಬಂದ ಬಳಿಕ ಆಕೆಯ ಜೊತೆಗಿದ್ದ ಸಂಪರ್ಕ ಕಡಿತ ಗೊಳಿಸಿದ್ದಾನೆ ಎಂಬ ಮಾಹಿತಿ ತನಿಖಾ ಇಲಾಖೆಗೆ ದೊರಕಿದೆ.

ಬೆಂಗಳೂರು ಬ್ಲಾಸ್ಟ್​​ನ A2 ಆರೋಪಿ ಜುನೈದ್​​
ಬೆಂಗಳೂರು ಬ್ಲಾಸ್ಟ್​​ನ A2 ಆರೋಪಿ ಜುನೈದ್​​

ಲವ್ವರ್​ ಜೊತೆ ಜುನೈದ್​ ಸುತ್ತಾಟ

ಇನ್ನು ಜುನೈದ್​​ ಗರ್ಲ್​ ಫ್ರೆಂಡ್​​ ಅನ್ನು ತನಿಖಾ ದಳ ವಿಚಾರಣೆ ನಡೆಸಿದ್ದು, ಯುವತಿ ಬಳಿ ಮಾಹಿತಿ ಕಲೆ ಹಾಕಿದೆ. ಆದರೆ ಯುವತಿಗೆ ಜುನೈದ್ ಟೆರರ್ ಆ್ಯಕ್ಟಿವಿಟಿ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಹಿಂದೆ ಆಕೆಯೊಂದಿಗೆ ಜುನೈದ್ ಸುತ್ತಾಡಿದ್ದ. ಆತನ ವರ್ತನೆಗಳು ಹೇಗಿದ್ದವು ಎಂಬ ಕುರಿತಾಗಿ ಮಾಹಿತಿ ಕಲೆ ಹಾಕಲು ಯುವತಿಯನ್ನು ತನಿಖೆಗೆ ಒಳಪಡಿಸಿದ್ದಾರೆ.

ಜುನೈದ್​ ಬಳಿ ಒರಿಜಿನಲ್ ಪಾಸ್ ಪೋರ್ಟ್

ಜುನೈದ್ ವಿದೇಶಕ್ಕೆ ಆತನ ಪಾಸ್ ಪೋಟ್ ಬಳಸಿಯೇ ತೆರಳಿದ್ದಾನೆ. ಸಿಸಿಬಿ ತನಿಖೆ ವೇಳೆ ಜುನೈದ್ ತನ್ನ ಒರಿಜಿನಲ್ ಪಾಸ್ ಪೋರ್ಟ್ ಮೂಲಕ ಪ್ರಯಾಣ ಮಾಡಿರೋದು ಬೆಳಕಿಗೆ ಬಂದಿದೆ.

ಕರಾಚಿಯಲ್ಲಿ ಟ್ರೈನಿಂಗ್

ಬೆಂಗಳೂರು ಬ್ಲಾಸ್​​ಗೆ ಉಗ್ರ ಟಿ ನಜೀರ್ ಜೊತೆ ಇಷ್ಟೆಲ್ಲಾ ಪ್ಲಾನ್​ ಹೆಣೆದಿದ್ದ ಜುನೈದ್​​ 2017ರಲ್ಲಿ ಆತನ ಮೇಲೆ ಕೊಲೆ ಕೇಸ್ ದಾಖಲಾಗುವ ಮೊದಲೇ ಪಾಸ್ ಪೋರ್ಟ್ ಹೊಂದಿದ್ದ. ಆದರೆ ಕೇಸ್​​ನಲ್ಲಿ ಯಾವ ಇಂಟರ್​​​ನ್ಯಾಷನಲ್ ಲಿಂಕ್ ಇಲ್ಲದ ಕಾರಣ ಪಾಸ್ ಪೋರ್ಟ್ ಸೀಜ್ ಮಾಡಿರಲಿಲ್ಲ. ನಂತರ ದುಬೈ ವೀಸಾ ಪಡೆದು ವಿದೇಶ ಹೋಗಿದ್ದ. ಬಳಿಕ ಅಲ್ಲಿಂದ ಕರಾಚಿಗೆ ತೆರಳಿ ಟ್ರೈನಿಂಗ್ ಪಡೆದಿದ್ದ.

ಉಗ್ರ ಟಿ. ನಜೀರ್​, A2 ಆರೋಪಿ ಜುನೈದ್​ ಸೇರಿದಂತೆ ಬಂಧನವಾದ 5 ಶಂಕಿತ ಉಗ್ರರು
ಉಗ್ರ ಟಿ. ನಜೀರ್​, ಶಂಕಿತ ಉಗ್ರ A2 ಆರೋಪಿ ಜುನೈದ್​ ಸೇರಿದಂತೆ ಬಂಧನವಾದ 5 ಶಂಕಿತ ಉಗ್ರರು

ಈ ದೇಶದಲ್ಲಿದ್ದಾನೆ ಜುನೈದ್​​

ಸದ್ಯ ಶಂಕಿತ ಉಗ್ರ ಮಿಡಲ್ ಈಸ್ಟ್ ನಲ್ಲಿಯೇ ಇರುವ ಅಜೆರ್ಬೈಜಾನ್ ದೇಶದ ಬಾಕು ಎಂಬ ನಗರದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇಂಟರ್ ಪೋಲ್ ಮೂಲಕ ಜುನೈದ್​ನನ್ನು ಪತ್ತೆ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಂಕಿತ ಉಗ್ರ ಜುನೈದ್‌ಗೆ ಬೆಂಗಳೂರಲ್ಲೇ ಇದ್ದಾಳೆ ಗರ್ಲ್‌ಫ್ರೆಂಡ್‌; ಬ್ಲಾಸ್ಟ್‌ಗೆ ಸಂಚು ರೂಪಿಸಿದ್ದವನ ಲವ್ ಸ್ಟೋರಿ ಏನು ಗೊತ್ತಾ?

https://newsfirstlive.com/wp-content/uploads/2023/07/Junaid.jpg

Load More