/newsfirstlive-kannada/media/post_attachments/wp-content/uploads/2025/05/bangaluru-sslc3.jpg)
ಬೆಂಗಳೂರು: ಇಂದು 2024-25ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ SSLC ಪರೀಕ್ಷೆ ನಡೆದಿತ್ತು. ಇದೀಗ ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಬೆಂಗಳೂರಿನ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
625/625 ಅಂಕ ಪಡೆದ ಬೆಂಗಳೂರಿನ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ..
ಜಾಹ್ನವಿ, ಟಾಪರ್..
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಬೆಂಗಳೂರಿನ ಜಾಹ್ನವಿಗೆ ಟಾಪರ್ ಪಟ್ಟ ಸಿಕ್ಕಿದೆ. 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ ಜಾಹ್ನವಿ. ಜಾಹ್ನವಿ ಗಿರಿನಗರದ ವಿಜಯಭಾರತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ವಿದ್ಯಾರ್ಥಿನಿ ಜಾಹ್ನವಿ ಟಾಪರ್ ಪಟ್ಟ ಸಿಗ್ತಿದ್ದಂತೆ ಶಾಲೆಯಲ್ಲಿ ಸಂಭ್ರಮಾಚರಣೆ ಶುರುವಾಗಿದೆ.
ಇನ್ನೂ, ಈ ಬಗ್ಗೆ ಮಾತಾಡಿದ ಜಾಹ್ನವಿ, ಕಾಲೇಜಿಗೆ ಹೋಗಿದ್ದೆ ಅಪ್ಪ ಬಂದು ಟಾಪರ್ ಆಗಿದ್ದೀಯ ಅಂದ್ರು. ನಾನು ಯಾವುದೇ ಟ್ಯೂಷನ್ ಹೋಗಿರಲಿಲ್ಲ. ದಿನ ಕೇವಲ 2 ಗಂಟೆ ಟೈಮ್ ಮಾತ್ರ ಓದುತ್ತಿದ್ದೆ. ಈಗ 600 ಮೇಲೆ ಬರುತ್ತೆ ಅಂದುಕೊಂಡಿದ್ದೆ. ಆದ್ರೆ 625 ಅಂಕ ಬಂದಿರೋದು ತುಂಬಾ ಖುಷಿಯಾಗಿದೆ. ಮುಂದೆ ಸೈನ್ಸ್ ಮಾಡಬೇಕು ಅಂತಾ ಇದ್ದೀನಿ. ವಿಜ್ಞಾನಿ ಆಗಬೇಕು ಅಂತಾ ಅಂದುಕೊಂಡಿದ್ದೀನಿ ಅಂತ ಹೇಳಿದ್ದಾರೆ.
ನಮಿತಾ, ಟಾಪರ್..
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಬೆಂಗಳೂರಿನ ಸೌತ್ನಲ್ಲಿ ನಮಿತಾಗೆ ಟಾಪರ್ ಪಟ್ಟ ಸಿಕ್ಕಿದೆ. 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ ನಮಿತಾ. ನಮಿತಾ ಮಾತಾ ನ್ಯಾಷನಲ್ ಇಂಗ್ಲಿಷ್ ಹೈ ಸ್ಕೂಲ್ ಕಲ್ಯಾಣ ನಗರ ವಿದ್ಯಾರ್ಥಿನಿಯಾಗಿದ್ದರು. ವಿದ್ಯಾರ್ಥಿನಿ ನಿಮಿತಾ ಟಾಪರ್ ಎಂದು ಗೊತ್ತಾಗುತ್ತಿದ್ದಂತೆ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
ಭಾವನಾ ಟಾಪರ್
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ವಿದ್ಯಾರ್ಥಿನಿ ಭಾವನಾ ಕೂಡ 625ಕ್ಕೆ 625 ಅಂಕ ಗಳಿಸಿ ಟಾಪರ್ ಆಗಿದ್ದಾರೆ. ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ವಿದ್ಯಾರ್ಥಿನಿ ರಂಜಿತಾ ಕೂಡ ಪ್ರಥಮ ಸ್ಥಾನ ಪಡೆದಕೊಂಡಿದ್ದಾರೆ.
ಧನಲಕ್ಷ್ಮಿ ಎಂ
ಇಂದು ಪ್ರಕಟವಾಗಿರೋ SSLC ಪರೀಕ್ಷೆಯಲ್ಲಿ ಬೆಂಗಳೂರು ಉತ್ತರದ ವಿದ್ಯಾರ್ಥಿನಿ ಧನಲಕ್ಷ್ಮಿ ಎಂ ಅವರು ಕೂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಮಧುಸೂದನ್ ರಾಜು
ಇತ್ತ ಬೆಂಗಳೂರು ಉತ್ತರದಲ್ಲಿ ವಿದ್ಯಾರ್ಥಿ ಮಧುಸೂದನ್ ರಾಜು ಕೂಡ 625ಕ್ಕೆ 625 ಅಂತ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಬೆಂಗಳೂರು ದಕ್ಷಿಣದ ವಿದ್ಯಾರ್ಥಿನಿ ಯುಕ್ತಿ ಕೂಡ ರಾಜ್ಯಕ್ಕೆ ಫಸ್ಟ್ ಱಂಕ್ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ