newsfirstkannada.com

ಬೆಂಗಳೂರಿಗೆ ಮತ್ತೆ ತಂಪೆರೆದ ಮಳೆರಾಯ.. ಇಂದಿನಿಂದ ಗುಡುಗು, ಸಿಡಿಲಿನ ಆರ್ಭಟ; ಎಲ್ಲೆಲ್ಲಿ Rain ಅಲರ್ಟ್‌!

Share :

Published June 1, 2024 at 3:32pm

Update June 1, 2024 at 3:37pm

    ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಳೆ ಸಾಧ್ಯತೆ ಇದೆ

    ಮಳೆ ಜೊತೆಗೆ ಗಾಳಿ ಬೀಸುವುದರಿಂದ ಜನರು ಎಚ್ಚರಿಕೆಯಿಂದಿರಿ

    ಮಿಂಚು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ

ಬೆಂಗಳೂರು: ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರ ನಡುವೆ ನಗರದ ಹಲವೆಡೆ ಮಳೆ ಪ್ರಾರಂಭವಾಗಿದೆ.

ಟೌನ್​ ಹಾಲ್, ಮಾರ್ಕೆಟ್​, ಸುಧಾಮನಗರ, ಹೆಬ್ಬಾಳ, ಮೇಖ್ರಿ ಸರ್ಕಲ್, ದಾಸರಹಳ್ಳಿ, ಕಾರ್ಪೋರೇಶನ್, ಮೆಜೆಸ್ಟಿಕ್, ಸುಬ್ಬಯ್ಯ ಸರ್ಕಲ್ ಸೇರಿದಂತೆ ಸಿಲಿಕಾನ್ ಸಿಟಿಯ ಹಲವು ಕಡೆ ವರುಣರಾಯ ತಂಪೆರೆದಿದ್ದಾನೆ. ಎರಡು ದಿನ ಬಿಸಿಲಿನಿ ತಾಪಾಮಾನದಿಂದ ಕಂಗೆಟ್ಟ ಜನರಿಗೆ ಮಳೆ ಕೂಲ್ ಕೂಲ್ ಮಾಡಿದೆ.

ಬೆಂಗಳೂರು ಹಲವೆಡೆ ವರುಣ ಆಗಮನ ಆಗುವ ಮುನ್ಸೂಚನೆ ಇದ್ದು ಗುಡುಗು, ಸಿಡಿಲು ಸಮೇತ ಮಳೆಯಾಗಬಹುದು ಎನ್ನಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವರುಣನ ಆಗಮನದ ಸೂಚನೆ ಇದೆ. ಬೆಂಗಳೂರಿನಲ್ಲಿ ವರುಣನ ಆರ್ಭಟ ಮತ್ತೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: 6 ಬಾರಿ ExitPoll ಲೆಕ್ಕಾಚಾರ ತಲೆಕೆಳಗಾಗಿತ್ತು.. ಲೋಕಸಭಾ ಚುನಾವಣೆಯ ಭವಿಷ್ಯ ನಿಜವಾಗುತ್ತಾ?

ಉತ್ತರ ಒಳನಾಡಿನ ಕೆಲ‌ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸೂಚನೆ ಇದ್ದು ದಕ್ಷಿಣ ಒಳನಾಡಿನಲ್ಲಿ ಗುಡುಗು ಮಿಂಚಿನೊಂದಿಗೆ ಮಳೆ ಸುರಿಯುತ್ತದೆ. ಮಳೆ ಜೊತೆಗೆ ಗಾಳಿಯು ಬೀಸುವುದರಿಂದ ರಸ್ತೆಗಳಲ್ಲಿ ವಿದ್ಯುತ್ ಕಂಬ, ಮರಗಳು ಬೀಳಬಹುದು. ಹೀಗಾಗಿ ವಿದ್ಯುತ್ ವ್ಯತ್ಯಯವಾಗುವುದು ಸಾಮಾನ್ಯವಾಗಿರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗೆ ಮತ್ತೆ ತಂಪೆರೆದ ಮಳೆರಾಯ.. ಇಂದಿನಿಂದ ಗುಡುಗು, ಸಿಡಿಲಿನ ಆರ್ಭಟ; ಎಲ್ಲೆಲ್ಲಿ Rain ಅಲರ್ಟ್‌!

https://newsfirstlive.com/wp-content/uploads/2024/05/RAIN-10.jpg

Load More