ಬ್ಯಾಂಕ್​​ ಮ್ಯಾನೇಜರ್​​ನಿಂದ ಮೋಸ ಹೋದ ಯುವತಿ.. ಮದುವೆಯಾದ ಬಳಿಕ ಬಯಲಾಯ್ತು ಅಸಲಿ ಸತ್ಯ

author-image
Bheemappa
Updated On
ಬ್ಯಾಂಕ್​​ ಮ್ಯಾನೇಜರ್​​ನಿಂದ ಮೋಸ ಹೋದ ಯುವತಿ.. ಮದುವೆಯಾದ ಬಳಿಕ ಬಯಲಾಯ್ತು ಅಸಲಿ ಸತ್ಯ
Advertisment
  • ಮದುವೆಯಾದ ಬಳಿಕ ಬಯಲಾಯಿತಂತೆ ಪತಿಯ ಅಸಲಿ ಮುಖ
  • ವಂಚನೆ ಬಯಲಾಗ್ತಿದ್ದಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ
  • ತನ್ನ ಮುಖವಾಡ ಕಳಚುತ್ತಿದ್ದಂತೆ ಪತ್ನಿ ವಿರುದ್ಧವೇ ಗಂಡನ ದೂರು

ಬೆಂಗಳೂರು: ಬ್ಯಾಂಕ್​​ಗೆ ಬರುತ್ತಿದ್ದ ಗ್ರಾಹಕರನ್ನೇ ಸಂಬಂಧಿಕರೆಂದು ನಂಬಿಸಿ ಮ್ಯಾನೇಜರ್ ಒಬ್ಬರು ಯುವತಿಯನ್ನ ಮದುವೆಯಾಗಿದ್ದಾರೆ. ಸದ್ಯ ಈ ಸಂಬಂಧ ಮೋಸ ಹೋದ ಪತ್ನಿಯು ಬಸವೇಶ್ವರ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಗಂಡ ಕೂಡ ಪ್ರತಿ ದೂರು ದಾಖಲಿಸಿದ್ದಾರೆ.

ಬ್ಯಾಂಕ್​ವೊಂದರಲ್ಲಿ ಮ್ಯಾನೇಜರ್ ಆಗಿದ್ದ ದಿಲೀಪ್​ ಎನ್ನುವರು ಥೇಟ್ ಸಿನಿಮಾ ಮಾದರಿಯಲ್ಲಿ ನಕಲಿ ಸಂಬಂಧಿಕರನ್ನ ಕರೆಯಿಸಿ ಯುವತಿಯೊಬ್ಬರನ್ನ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ಬಳಿಕ ಪತ್ನಿಗೆ ಟಾರ್ಚರ್ ಕೊಡಲು ಪ್ರಾರಂಭಿಸಿದ್ದಾನೆ ಎನ್ನಲಾಗಿದೆ. ಜೊತೆಗೆ ಮದುವೆ ಬಳಿಕ ಪತಿಯ ಅಸಲಿ ಮುಖ ಬಯಲಾಗಿದೆ. ಅಪರಿಚಿತರನ್ನು ತನ್ನ ಫ್ಯಾಮಿಲಿ ಅಂತ ಹೇಳಿದ್ದ ಪತಿ ವಿರುದ್ಧ ಹೆಂಡತಿ ಬಸವೇಶ್ವರ ನಗರ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಪತ್ನಿ ಆರೋಪವೇನು?

ತಂದೆಯ ಲೋನ್ ಮಾಡಿಸಲು ಯುವತಿ ಬ್ಯಾಂಕ್​​ಗೆ ಹೋಗಿದ್ದಾಗ ಬ್ಯಾಂಕ್​​ನಲ್ಲಿ ಮ್ಯಾನೇಜರ್ ಆಗಿದ್ದ ದಿಲೀಪ್ ಪರಿಚಯವಾಗಿದ್ದಾರೆ. ಬಳಿಕ ಯುವತಿ ನಂಬರ್ ಪಡೆದುಕೊಂಡು ಮೆಸೇಜ್ ಮಾಡಲು ಪ್ರಾರಂಭಿಸಿದ್ದಾನೆ. ಇದು ಪ್ರೀತಿಯಾಗಿ ನಂತರ ದಿನಗಳಲ್ಲಿ ಮದುವೆ ಕೂಡ ಆಗಿದ್ದರು. ಮದುವೆ ಬಳಿಕ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಹೀಗಾಗಿ ಇಬ್ಬರು ಪರಸ್ಪರ ಒಬ್ಬರ ಮೇಲೆ ಒಬ್ಬರು ದೂರು ದಾಖಲಿಸಿದ್ದಾರೆ.

ಮ್ಯಾನೇಜರ್​ ದಿಲೀಪ್ ಪ್ಲಾನ್​ ಹೇಗಿತ್ತು!

ತಂದೆಯ ಲೋನ್ ಮಾಡಿಸಲು ಬಂದಿದ್ದ ಯುವತಿಯನ್ನ ದಿಲೀಪ್ ಪರಿಚಯ ಮಾಡಿಕೊಂಡಿದ್ದ. ಯುವತಿಯನ್ನ ಮದುವೆಯಾಗಲು ಬ್ಯಾಂಕ್​​ಗೆ ಲೋನ್​ಗಾಗಿ ಬರುತ್ತಿದ್ದ ಗ್ರಾಹಕರನ್ನೇ ತನ್ನ ಫ್ಯಾಮಿಲಿ ಎಂದು ಹೇಳಿ ನಂಬಿಸಿದ್ದನು. ಈ ಬಗ್ಗೆ ಪೊಲೀಸರು ವಿಚಾರಣೆಯಲ್ಲಿ ನಕಲಿ ಸಂಬಂಧಿಕರು ಎಂಬುದು ಪತ್ತೆ ಆಗಿದೆ. ಪೊಲೀಸ್ ಇನ್ಸ್​ಪೆಕ್ಟರ್ ತನ್ನ ಮಾವ ಎಂದು ಕೂಡ ಹೇಳಿದ್ದನಂತೆ. ಸದ್ಯ ಇದೀಗ ಮೋಸ ಹೋದ ಮಹಿಳೆಯರು ಮುಂದೆ ಬನ್ನಿ ಎಂದು ಪತ್ನಿ ಮನವಿ ಮಾಡಿದ್ದಾರೆ. ಇತ್ತ ನಾನೇ ಪತ್ನಿಯಿಂದ ಹನಿಟ್ರ್ಯಾಪ್​ಗೆ ಒಳಗಾಗಿದ್ದೀನಿ ಎಂದು ಪ್ರತಿದೂರಿನಲ್ಲಿ ಗಂಡ ಉಲ್ಲೇಖ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment