ಆಟೋ ಡ್ರೈವರ್​ಗೆ ಚಪ್ಪಲಿಯಿಂದ ಹೊಡೆದ ಘಟನೆ.. ಚಾಲಕನ ಕಾಲು ಮುಟ್ಟಿ ಕ್ಷಮೆ ಕೇಳಿದ ಮಹಿಳೆ, ಆಕೆಯ ಗಂಡ

author-image
Bheemappa
Updated On
ಆಟೋ ಡ್ರೈವರ್​ಗೆ ಚಪ್ಪಲಿಯಿಂದ ಹೊಡೆದ ಘಟನೆ.. ಚಾಲಕನ ಕಾಲು ಮುಟ್ಟಿ ಕ್ಷಮೆ ಕೇಳಿದ ಮಹಿಳೆ, ಆಕೆಯ ಗಂಡ
Advertisment
  • ಕನ್ನಡ, ಕನ್ನಡಿಗರನ್ನ ದ್ವೇಷ ಮಾಡಲ್ಲ. ಐ ಲವ್ ಬೆಂಗಳೂರು
  • ಸುದ್ದಿಯನ್ನು ಮೊದಲು ಪ್ರಸಾರ ಮಾಡಿದ್ದ ನ್ಯೂಸ್​ ಫಸ್ಟ್
  • ಆಟೋ ಚಾಲಕ ಹಾಗೂ ಆತನ ಪತ್ನಿಯ ಕಾಲು ಮುಟ್ಟಿ ಕ್ಷಮೆ

ಬೆಂಗಳೂರು: ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಪತಿ ಇಬ್ಬರು ಆಟೋ ಡ್ರೈವರ್​, ಆತನ ಪತ್ನಿಯ ಕಾಲು ಮುಟ್ಟಿ ಕ್ಷಮೆ ಕೇಳಿದ್ದಾರೆ. ಘಟನೆಯ ಕುರಿತು ಸುದ್ದಿಯನ್ನು ಮೊದಲು ನ್ಯೂಸ್​ಫಸ್ಟ್ ಪ್ರಸಾರ ಮಾಡಿತ್ತು.

ಬೆಳ್ಳಂದೂರು ವೃತ್ತದಲ್ಲಿ ಆಟೋ ಚಾಲಕ ಹಾಗೂ ಹೊರ ರಾಜ್ಯದ ಮಹಿಳೆ ಪನ್ಪೂರಿ ಮಿಶ್ರಾ (28) ನಡುವೆ ಗಲಾಟೆ ನಡೆದಿತ್ತು. ಸದ್ಯ ಈಗ ಪನ್ಪೂರಿ ಮಿಶ್ರಾ, ಆಕೆಯ ಗಂಡ ಇಬ್ಬರೂ ಸೇರಿ ಆಟೋ ಚಾಲಕ ಹಾಗೂ ಆತನ ಪತ್ನಿಯ ಕಾಲು ಮುಟ್ಟಿ ಕ್ಷಮೆ ಕೇಳಿದ್ದಾರೆ. ಕೈ ಮುಗಿದು ಇನ್ನೊಮ್ಮೆ ಈ ರೀತಿ ಆಗಲ್ಲ ಎಂದು ಗಂಡ ಕೇಳಿಕೊಂಡಿದ್ದಾನೆ. ಇನ್ನು ದರ್ಪ ತೋರಿದ ಮಹಿಳೆ ಮಾತನಾಡಿ, ಕನ್ನಡ, ಕನ್ನಡಿಗರನ್ನ ನಾವು ದ್ವೇಷ ಮಾಡಲ್ಲ. ಐ ಲವ್ ಬೆಂಗಳೂರು. ಇಲ್ಲಿನ ಸಂಸ್ಕೃತಿ ಇಷ್ಟ ಎಂದು ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನದಿಂದ ಮಹಿಳೆಯರಿಗೆ ಉಚಿತ ಬಸ್.. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಭರವಸೆಗಳು ಏನೇನು?

publive-image

ನಾನು ಗರ್ಭಿಣಿ ಆಗಿದ್ದು ಬೈಕ್​ನಲ್ಲಿ ಹೋಗುವಾಗ ಪಕ್ಕದಲ್ಲಿ ಸಡನ್ ಆಗಿ ಆಟೋ ಬಂದಾಗ ಭಯ ಆಯಿತು. ಆ ಗಾಬರಿಯಲ್ಲಿ ಚಾಲಕನಿಗೆ ಚಪ್ಪಲಿಯಿಂದ ಹೊಡೆದುಬಿಟ್ಟೆ ಅಂತ ಕ್ಷಮೆ ಕೇಳುವಾಗ ಹೇಳಿದ್ದಾಳೆ. ಇನ್ನು ಇದನ್ನು ನ್ಯೂಸ್​ಫಸ್ಟ್ ಮೊದಲು ಪ್ರಸಾರ ಮಾಡಿತ್ತು. ಈ ವರದಿ ಬೆನ್ನಲ್ಲೇ ಆಟೋ ಚಾಲಕನ ಪರವಾಗಿ ಕನ್ನಡಿಗರು ಬೆಂಬಲಕ್ಕೆ ವ್ಯಕ್ತಪಡಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಬೆಳ್ಳಂದೂರು ಠಾಣೆಯ ಪೊಲೀಸರು ಮಹಿಳೆಯನ್ನು ಹುಡುಕಿ ಕರೆದುಕೊಂಡು ಬಂದು ವಿವರಣೆ ಪಡೆದಿದ್ದರು. ಈಗ ಅಂತಿಮವಾಗಿ ಹಲ್ಲೆಗೊಳಗಾಗಿದ್ದ ಚಾಲಕನ ಕಾಲು ಹಿಡಿದು ಮಹಿಳೆ ಕ್ಷಮೆ ಕೇಳಿದ್ದಾರೆ. ಘಟನೆ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment