ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆ.. ಮಹಿಳೆ, ಆಕೆಯ ಗಂಡ ಕೈ ಮುಗಿದು ಕನ್ನಡ, ಕನ್ನಡಿಗರ ಬಗ್ಗೆ ಏನೇನು ಹೇಳಿದರು?

author-image
Bheemappa
Updated On
ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆ.. ಮಹಿಳೆ, ಆಕೆಯ ಗಂಡ ಕೈ ಮುಗಿದು ಕನ್ನಡ, ಕನ್ನಡಿಗರ ಬಗ್ಗೆ ಏನೇನು ಹೇಳಿದರು?
Advertisment
  • ಇನ್ನೊಂದು ಸಲ ಈ ರೀತಿ ತಪ್ಪು ಮಾಡಲ್ಲ- ಹೊರ ರಾಜ್ಯದ ಮಹಿಳೆ
  • ಗಾಬರಿಯಲ್ಲಿ ಚಾಲಕನಿಗೆ ಹೊಡೆದಿರುವುದು ನನ್ನದು ತಪ್ಪು ಆಗಿದೆ
  • ಆಟೋ ಚಾಲಕನ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದ ಕನ್ನಡಿಗರು

ಬೆಂಗಳೂರು: ಬೆಳ್ಳಂದೂರು ವೃತ್ತದಲ್ಲಿ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆಗೆ ಸಂಬಂಧಿಸಿದಂತೆ ಹೊರ ರಾಜ್ಯದ ಮಹಿಳೆ, ಆಕೆಯ ಪತಿ ಸೇರಿ ಆಟೋ ಡ್ರೈವರ್ ಹಾಗೂ ಪತ್ನಿಯ ಕಾಲು ಮುಟ್ಟಿ ಕ್ಷಮೆ ಕೇಳಿದ್ದಾರೆ.

ಕ್ಷಮೆ ಕೇಳಿದ ಬಳಿಕ ಮಹಿಳೆ ಪನ್ಪೂರಿ ಮಿಶ್ರಾ (28) ಕನ್ನಡ, ಕರ್ನಾಟಕ ಹಾಗೂ ಇಲ್ಲಿನ ಜನರ ಬಗ್ಗೆ ಗೌರವ ಇದೆ ಎಂದು ಮಾತನಾಡಿದ್ದಾರೆ. ಎಲ್ಲ ಕನ್ನಡಿಗರು ದಯವಿಟ್ಟು ನಮ್ಮನ್ನು ಕ್ಷಮಿಸಿ. ಎಲ್ಲ ಆಟೋ ಡ್ರೈವರ್​ಗಳಿಗೂ, ಎಲ್ಲ ಕನ್ನಡಿಗರಿಗೂ ನಾನು ಕ್ಷಮೆ ಕೇಳುತ್ತೇನೆ. ಇನ್ನೊಂದು ಸಲ ಈ ರೀತಿ ತಪ್ಪು ಮಾಡಲ್ಲ. ಕನ್ನಡಿಗರ ಬಗ್ಗೆ, ಕರ್ನಾಟಕದ ಬಗ್ಗೆ ನಾನು ತಪ್ಪು ಮಾತನಾಡಲ್ಲ. ದಯವಿಟ್ಟು ಕ್ಷಮೆ ಇರಲಿ. ಐ ಲವ್ ಬೆಂಗಳೂರು. ಜೈ ಕರ್ನಾಟಕ ಎಂದು ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: ಆಟೋ ಡ್ರೈವರ್​ಗೆ ಚಪ್ಪಲಿಯಿಂದ ಹೊಡೆದ ಘಟನೆ.. ಚಾಲಕನ ಕಾಲು ಮುಟ್ಟಿ ಕ್ಷಮೆ ಕೇಳಿದ ಮಹಿಳೆ, ಆಕೆಯ ಗಂಡ

publive-image

ನಾನು ಗರ್ಭಿಣಿ ಆಗಿದ್ದು ಬೈಕ್​ನಲ್ಲಿ ಹೋಗುವಾಗ ಪಕ್ಕದಲ್ಲಿ ಸಡನ್ ಆಗಿ ಇವರ ಆಟೋ ಬಂದಾಗ ಭಯ ಆಯಿತು. ಆ ಗಾಬರಿಯಲ್ಲಿ ಏನನ್ನು ಯೋಚನೆ ಮಾಡದೇ ಚಾಲಕನಿಗೆ ಚಪ್ಪಲಿಯಿಂದ ಹೊಡೆದುಬಿಟ್ಟೆ. ಇದಕ್ಕೆ ಕ್ಷಮೆ ಇರಲಿ ಎಂದು ಹೇಳಿದ್ದಾಳೆ. ಇನ್ನು ಈ ಘಟನೆಯನ್ನು ನ್ಯೂಸ್​ಫಸ್ಟ್ ಮೊದಲು ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಆಟೋ ಚಾಲಕನ ಪರವಾಗಿ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿದ್ದರು.

ಘಟನೆ ನಡೆದ ಮೇಲೆ ಬೆಳ್ಳಂದೂರು ಠಾಣೆಯ ಪೊಲೀಸರು ಮಹಿಳೆಯನ್ನು ಹುಡುಕಿ ಕರೆದುಕೊಂಡು ಬಂದು ವಿವರಣೆ ಪಡೆದಿದ್ದರು. ಈಗ ಅಂತಿಮವಾಗಿ ಹಲ್ಲೆಗೊಳಗಾಗಿದ್ದ ಚಾಲಕ ಹಾಗೂ ಆತನ ಪತ್ನಿ ಕಾಲು ಹಿಡಿದು ಮಹಿಳೆ ಮತ್ತು ಆಕೆಯ ಗಂಡ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment