ಸಂಧ್ಯಾ ಕೇಸ್​​​; ಹಂತಕನ ತಂದೆಯಿಂದ ಕಾಂಪ್ರಮೈಸ್​ಗೆ ಯತ್ನ; ಎಷ್ಟು ಕೋಟಿ ಆಫರ್​ ಕೊಟ್ರು ಗೊತ್ತಾ?

author-image
Veena Gangani
Updated On
ಸಂಧ್ಯಾಳ ಜೀವ ತೆಗೆದ ಧನುಷ್​ನಿಂದ ಮತ್ತೊಬ್ಬರ ಜೀವಕ್ಕೂ ಬಂದಿತ್ತು ಕಂಟಕ! ಬೈಕ್ ಸವಾರನಿಗೂ ಡಿಕ್ಕಿ ಹೊಡೆದಿದ್ದ ಕಾರು!
Advertisment
  • ಆರೋಪಿ ಅಪ್ಪ ಸಂಧಾನಕಾರರನ್ನ ಕರೆಸಿ ದುಡ್ಡಿನ ಮಾತಾಡಿದ್ದು ನಿಜಾನಾ?
  • ಧನುಷ್ ಅನ್ನೋ ಯುವಕನಿಂದಾಗಿ ಸಾವನ್ನಪ್ಪಿದ್ದ ಜಾಣೆ ಸಂಧ್ಯಾ
  • ಸದಾ ಚೈತನ್ಯದ ಚಿಲುಮೆಯಂತೆ ಪುಟಿದೇಳುತ್ತಿದ್ದ ಸಂಧ್ಯಾ ಇನ್ನಿಲ್ಲ

ಬೆಂಗಳೂರು: ಕೆಂಗೇರಿ ಬಸ್ ನಿಲ್ದಾಣದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 30 ವರ್ಷದ ಟೆಕ್ಕಿ ಸಂಧ್ಯಾ ಅವರು ಸಾವನ್ನಪ್ಪಿದ್ದಾಳೆ. ನಿನ್ನೆ ಸಂಜೆ 6.45ಕ್ಕೆ ಆರೋಪಿ ಧನುಷ್ ಹಾಗೂ ಆತನ ಗೆಳೆಯರು ಕುಡಿದು ಬೆನ್ಜ್‌ ಕಾರು ಚಾಲನೆ ಮಾಡುತ್ತಿದ್ದರು. ಕೆಂಗೇರಿ ಬಸ್ ನಿಲ್ದಾಣದ ಬಳಿ ಟೆಕ್ಕಿ ಸಂಧ್ಯಾ ಅವರು ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಏಕಾಏಕಿ ಸ್ಪೀಡಾಗಿ ಬರ್ತಿದ್ದ ಬೆನ್ಜ್ ಕಾರು ಆಕೆಗೆ ಡಿಕ್ಕಿ ಹೊಡೆದಿದೆ. ಸಂಧ್ಯಾಳನ್ನು ಕಳೆದುಕೊಂಡ ಕುಟುಂಬಸ್ಥರ ದುಃಖದಲ್ಲಿ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ:Justice For Sandhya: ಸಂಧ್ಯಾ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್‌.. ಆರೋಪಿ ರಕ್ಷಿಸಲು ಕೋಟಿ, ಕೋಟಿ ಆಫರ್‌?

ಸಾಧನೆ ಅನ್ನೋ ನಕ್ಷತ್ರ ಮಿಂಚುತ್ತೋ? ಇಲ್ವೋ? ಅನ್ನೋದರ ಮೇಲೆ ಸಾಧನೆ ನಿಂತಿರುತ್ತೆ. ಇಷ್ಟು ಅದ್ಭುತವಾಗಿ ಸಾಧನೆ ಬಗ್ಗೆ ಹೇಳಿದ್ದ ಸಂಧ್ಯಾ, ಸಾಧಿಸೋ ಹಾದಿ ಮಧ್ಯೆಯೇ ಅಪಘಾತಕ್ಕೆ ಬಲಿ ಆಗಿದ್ದು ಘೋರ ದುರಂತ. ಯಾಕಂದ್ರೆ ಸಂಧ್ಯಾ ಸಾಮಾನ್ಯ ಪ್ರತಿಭೆ ಆಗಿರಲಿಲ್ಲ. ಸಂಧ್ಯಾ ಎಂದ ಕೂಡಲೇ ಜೊತೆಗಾರ್ತಿಯರ ಕಣ್ಣಂಚಲ್ಲಿ ನೀರು ಜಿನುಗುತ್ತಿದೆ. ಸಣ್ಣದೊಂದು ಇರುವೆಗೂ ನೋವು ಮಾಡದ ಮಲ್ಲಿಗೆ ಮನಸ್ಸಿನ ಹುಡುಗಿ ಅವಳು ಅಂತಾರೆ. ಅದ್ಭುತ ಬರವಣಿಗೆ, ಅತ್ಯದ್ಭುತ ವಾಯ್ಸ್ ಎರಡನ್ನೂ ಹೊಂದಿದ್ದ ಜೇನ ದನಿಯ ಸಂಧ್ಯಾಗೆ ಮಾಧ್ಯಮದಲ್ಲಿ ಕೆಲಸ ಮಾಡುವ ಹುಮ್ಮಸ್ಸಿತ್ತು. ಅದೇ ಖುಷಿಯಲ್ಲೇ ಎಫ್​ಎಂ ಚಾನಲ್​​ನಲ್ಲೂ ಕೆಲಸ ಮಾಡಿದ್ರು. ಒಂದು ಕಡೆ ನಿಲ್ಲದೇ ಸದಾ ಚೈತನ್ಯದ ಚಿಲುಮೆಯಂತೆ ಪುಟಿದೇಳುತ್ತಿದ್ದ ಸಂಧ್ಯಾ ಇವತ್ತು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋದಕ್ಕೂ ಸಾಧ್ಯವಾಗುತ್ತಿಲ್ಲ. ಖುದ್ದು ಪತಿ ಶಿವಕುಮಾರ್​ ಹೇಳೋ ಪ್ರಕಾರ ಅದೊಂದು ಪುಟಿವ ಕಾರಂಜಿ ಅಂತಾರೆ.

ಧನುಷ್ ಅನ್ನೋ ಇದೇ ಯುವಕನಿಂದಾಗಿ ಇವತ್ತು ಸಂಧ್ಯಾ ಸಾವನ್ನಪ್ಪಿದ್ದಾರೆ. ಆದರೆ, ಇವನ ರೇಂಜ್ ರೀತಿಯಲ್ಲೇ ಇನ್ಫ್ಯೂಯನ್ಸ್​ ಕೂಡ ವರ್ಕ್ ಆಗ್ತಿದೆ. ಯಾವುದೇ ಪ್ರಭಾವಿ ವ್ಯಕ್ತಿ ಮಗ ಅನ್ನೋ ಕಾರಣಕ್ಕೇ ಪೊಲೀಸರು ಇವನನ್ನ ಗಾರ್ಡ್​ ಮಾಡ್ತಿದ್ದಾರೆ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ಇನ್ನು, ಸಂಧ್ಯಾ ಸಾವಿಗೆ ನ್ಯಾಯ ಸಿಗುತ್ತೆ ಅನ್ನೋ ಗ್ಯಾರಂಟಿ ಕೂಡ ಇಲ್ಲ ಅನ್ನೋ ಮಾತನ್ನ ಕುಟುಂಬಸ್ಥರೇ ಹೇಳುತ್ತಿದ್ದಾರೆ. ಇದು ಸಾಲದು ಅಂತ ಸಂಧ್ಯಾ ಸೋದರ ಶೇಖರ್​ ಸ್ಫೋಟಕ ಸಂಗತಿ ಹೇಳಿದ್ದಾರೆ. ಅದುವೇ ಧನುಷ್ ಅಪ್ಪ ಸಂಧಾನಕಾರರನ್ನ ಕರೆಸಿ ದುಡ್ಡಿನ ಮಾತಾಡಿದ್ದು.

ನನಗೆ ಅಕ್ಕ ಬೇಕು. ಅವರಿಗೆ ಬೆಲೆ ಕಟ್ಟೋಕೆ ಆಗೋದಿಲ್ಲ. ಯಾರೋ ಬಂದು ದುಡ್ಡು ಕೊಡ್ತೀವಿ ಎಫ್​ಐಆರ್​ ಮಾಡಿಸ್ಬೇಡಿ ಅಂತ ಹೇಳಿದ್ರೆ ಕೇಳ್ತೀವಾ? ಕೇಳೋದೇ ಇಲ್ಲ ಅಂತಿದ್ದಾರೆ ಸಂಧ್ಯಾ ಸೋದರ ಶೇಖರ್. ಅದ್ಭುತ ಪ್ರತಿಭಾವಂತೆ ಸಂಧ್ಯಾ ಸಾವಿನಲ್ಲೂ ಸಂಕಟ ತರಿಸೋ ಬೆಳವಣಿಗೆಗಳು ನಡೀತಿವೆ. ಸುಮಾರೂ ಒಂದೂವರೆ ಕೋಟಿ ದುಡ್ಡು ಕೊಡ್ತೀವಿ ಸುಮ್ಮನಾಗಿಬಿಡಿ ಅಂತ ಪ್ರಭಾವಿ ಒಬ್ಬ ಸಂಧಾನವನ್ನೇ ಮಾಡೋಕೆ ಬಂದಿದ್ದ. ಇದೇ ವಿಚಾರವನ್ನ ಸಂಧ್ಯಾ ಸ್ನೇಹಿತೆ ಅನುಪಮಾ ಪತಿ ಸುನೀಲ್ ಕುಮಾರ್​ ಆರೋಪಿಸುತ್ತಿದ್ದಾರೆ.

ಹುಷಾರು ಎನ್ನುತ್ತಿದ್ದ ಸಂಧ್ಯಾ ನೆನೆದು ಬಿಕ್ಕಳಿಸಿದ ಗೆಳತಿ ಅನುಪಮಾ!

ಸದಾ ಎಲ್ಲರನ್ನೂ ನಗಿಸುತ್ತಾ, ನಗುತ್ತಾ ಇದ್ದ ಚಿನ್ನದಂಥಾ ಹುಡುಗಿ ಸಂಧ್ಯಾ ಎನ್ನುತ್ತಲೇ ಆತ್ಮೀಯರು ಬಿಕ್ಕಳಿಸುತ್ತಿದ್ದಾರೆ. ಅದರಲ್ಲೂ, ಆತ್ಮೀಯ ಗೆಳತಿ ಅನುಪಮಾ ಅಂತೂ ಬಿಕ್ಕಳಿಸುತ್ತಿದ್ದಾರೆ. ಸದಾ ಇನ್ನೊಬ್ಬರ ಖುಷಿಯಲ್ಲೇ ತನ್ನ ಖುಷಿ ಕಾಣುತ್ತಿದ್ದ ಸಂಧ್ಯಾಗೆ ಹೀಗೆ ಆಗಬಾರದಿತ್ತು ಅಂತಿದ್ದಾರೆ. ಎಲ್ಲರನ್ನೂ ಹುಷಾರಾಗಿ ಹೋಗಿ ಬಾ ಅಂತಿದ್ದವಳಿಗೆ ದಾರುಣವಾದ ಕ್ಷಣವನ್ನು ನೆನಪಿಸಿಕೊಂಡು ದುಃಖಿಸುತ್ತಿದ್ದಾರೆ.

ಜೇನ ದನಿಯ ಬೆಳದಿಂಗಳ ಬಾಲೆ ನಿಜಕ್ಕೂ ಯಾರನ್ನೂ ನೋಯಿಸದ ಜೀವ. ಆದರೇ, ಅದೇ ಜೀವವನ್ನು ನಿರ್ದಯವಾಗಿ ಧನುಷ್ ಕೊಂದಿದ್ದಾನೆ ಅನ್ನೋ ಆರೋಪ ಹೊತ್ತಿದ್ದಾನೆ. ಆರೋಪ ಬಂದ ಕೂಡಲೇ ಎಫ್​ಐಆರ್​ ಕೂಡ ಹಾಕೋದಕ್ಕೆ ಹಿಂದೇಟು ಹಾಕಿದ್ದ ಪೊಲೀಸರು, ಇದೀಗ ಎಫ್​ಐಆರ್​ನಲ್ಲೂ ಹೆಸರನ್ನು ಹಾಕಿಲ್ಲ ಎನ್ನಲಾಗುತ್ತಿದೆ. ಇದು ಸಾಲದು ಅಂತ ಸಿಸಿಟಿವಿ ಫೂಟೇಜ್​​ ಇಲ್ಲ ಎನ್ನುತ್ತಿದ್ದಾರೆ. ತನಿಖೆಯ ಆರಂಭದಲ್ಲೇ ಎಡವುತ್ತಿರೋ ಪೊಲೀಸರು ಪ್ರಭಾವಕ್ಕೆ ಒಳಗಾದ್ರಾ? ನಿಜಕ್ಕೂ ಸಂಧ್ಯಾ ಅನ್ನೋ ಬಂಗಾರದಂಥ ಪ್ರತಿಭಾವಂತೆ ಸಾವಿಗೆ ನ್ಯಾಯ ಸಿಗೋದಿಲ್ವಾ? ಇಂಥದ್ದೊಂದು ಧ್ವನಿ ಗಟ್ಟಿಯಾಗಿ ಕೇಳುತ್ತಿದೆ. ಇದರ ಮಧ್ಯೆಯೇ ಸಂಧ್ಯಾ ಧ್ವನಿ ಅಕ್ಷರಶಃ ಅಳಿಸುತ್ತಿದೆ.

ಇದನ್ನೂ ಓದಿ: ಸಂಧ್ಯಾ ಏನು ತಪ್ಪೇ ಮಾಡಿಲ್ಲ.. ನಮಗೆ ನ್ಯಾಯ ಸಿಗಬೇಕು; ಆದರೆ.. ಪತಿ ಶಿವಕುಮಾರ್ ಹೇಳಿದ್ದೇನು?

ಸಂಧ್ಯಾ ಅನ್ನೋ ಈ ಜೇನ ದನಿಗೆ ನ್ಯಾಯ ಸಿಗುತ್ತಾ? ಪೊಲೀಸರ ನಿಗೂಢ ನಡೆಗಳು ವಿಶ್ವಾಸಕ್ಕೇ ಸಿಗುತ್ತಿಲ್ಲ. ಹೀಗಂತ ಸಾರ್ವಜನಿಕರೇ ಹೇಳುತ್ತಿದ್ದಾರೆ. ಆದರೇ ನಾಳೆಗಳ ನಂಬಿಕೆಯಲ್ಲೇ ಬದುಕಿದ್ದ ಬಂಗಾರದಂಥಾ ಸಂಧ್ಯಾ ಕುಡುಕನೊಬ್ಬನ ಕುಡಿತಕ್ಕೆ ಬಲಿ ಆಗಿದ್ದಾರೆ. ನಿಜಕ್ಕೂ ಸಂಧ್ಯಾ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ, ಧನುಷ್​​ಗೆ ತಕ್ಕ ಶಿಕ್ಷೆ ಆಗ್ಬೇಕು. ಪೊಲೀಸರು ನ್ಯಾಯ ಕೊಡಿಸಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment