ಇದು ಬೆಂಗಳೂರಿನಲ್ಲಿ ನಡೆದ ಅಚ್ಚರಿಯ ಘಟನೆ
ಒಂದೇ ನಿಲ್ದಾಣ 2ನೇ ಬಾರಿಗೆ ಕಾಣೆ.. ಕದ್ದವರು ಯಾರು?
ಹೊಸ ಶೆಲ್ಟರ್ ಹಾಕಿ 5 ದಿನದೊಳಗೆ ಮಂಗಮಾಯ.. ಯಾವ ಏರಿಯಾ ಗೊತ್ತಾ?
ಎಲ್ಲಾ ಮಾಯ.. ನಾಳೆ ನಾವೂ ಮಾಯ. ಅನ್ನೋ ಹಾಡನ್ನ ನೀವು ಕೇಳಿರಬಹುದು. ಬೆಂಗಳೂರಿನಲ್ಲಿ ಸ್ವಲ್ಪ ಯಾಮಾರಿದರೆ ಏನು ಬೇಕಾದರೂ ಮಾಯ ಆಗಬಹುದು. ಇದಕ್ಕೆ ತಕ್ಕ ನಿದರ್ಶನ ಎಂಬಂತೆ, ವರ್ಷಾನುಗಟ್ಟಲೆ ಇದ್ದ ನಿಲ್ದಾಣವೊಂದು ರಾತ್ರೋರಾತ್ರಿ ಮಾಯವಾಗಿಬಿಟ್ಟಿದೆ. ಅದು ಒಂದೇ ನಿಲ್ದಾಣ ಎರಡನೇ ಬಾರಿಗೆ ಕಾಣೆಯಾಗಿದೆ.
ಹೊಸ ಶೆಲ್ಟರ್ 5 ದಿನದೊಳಗೆ ಮಂಗಮಾಯ!
ಹೌದು. ಇದು ಕಲ್ಯಾಣ ನಗರದ ಎಚ್ ಆರ್ ಬಿಆರ್ ಲೇಜೌಟ್ ನ 80 ಫೀಟ್ ರಸ್ತೆಯ 7ನೇ ಮುಖ್ಯರಸ್ತೆ. ಇದೇ ರಸ್ತೆಯಲ್ಲಿ ಜೂನ್ 6ರಂದು ಬಿಬಿಎಂಪಿ ಹೊಸ ಬಸ್ ಶೆಲ್ಟರ್ ನಿರ್ಮಾಣ ಮಾಡಿತ್ತು. ಆದರೆ ಹೊಸ ಶೆಲ್ಟರ್ ಹಾಕಿ 5 ದಿನದೊಳಗೆ ಮಂಗಮಾಯವಾಗಿದೆ. ಇಲ್ಲಿ ಬಸ್ ನಿಲ್ದಾಣ ಇತ್ತು ಅನ್ನೋ ಕುರುಹೂ ಸಿಗದಂತೆ ಕಾಣೆಯಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣಾವಾಗಿದೆ.
ರಾತ್ರೋ ರಾತ್ರಿ ನಿಲ್ದಾಣ ಮಾಯ
ಅಂದಹಾಗೆಯೇ 15ನೇ ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣ ಕಾಣೆಯಾಗುವುದು ಇದೇ ಮೊದಲಲ್ಲ. ಕಳೆದ ಮಾರ್ಚ್ ನಲ್ಲಿ ಅಂದ್ರೆ 3 ತಿಂಗಳ ಹಿಂದೆ 30 ವರ್ಷ ಹಳೆಯ ಬಸ್ ಶೆಲ್ಟರ್ ಕಾಣೆಯಾಗಿತ್ತು. ಆಗ ಸ್ಥಳೀಯರ ಹೋರಾಟದ ನಂತರ ಬಿಬಿಎಂಪಿ ವತಿಯಿಂದ ಹಳೇ ಬಸ್ ನಿಲ್ದಾಣವಿದ್ದ 100 ಮೀಟರ್ ದೂರದಲ್ಲಿ ಹೊಸ ಶೆಲ್ಟರ್ ಹಾಕಲಾಗಿತ್ತು. ಸ್ಥಳೀಯರು ಖುಷಿಯಾಗಿದ್ರು. ಆದರೆ ಆ ಸಂತೋಷ 5 ದಿನದಲ್ಲೇ ಕರಗಿಹೋಗಿದೆ. ರಾತ್ರೋ ರಾತ್ರಿ ನಿಲ್ದಾಣ ಮಾಯವಾಗಿದೆ.
ಇದಕ್ಕೆ ಕಾರಣ ಯಾರು?
ಜೂನ್ 11ರ ಸಂಜೆಯಿದ್ದ ಬಸ್ ಶೆಲ್ಟರ್ ಬೆಳಗ್ಗೆ ನೋಡುವಾಗ ನಾಪತ್ತೆಯಾಗಿದೆ. ಹೀಗಾಗಿ ಪದೇ ಪದೇ ಬಸ್ ಶೆಲ್ಟರ್ ಕಣ್ಮರೆ ಆಗ್ತಿರುವ ಹಿನ್ನೆಲೆ ಕಲ್ಯಾಣನಗರದ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ದೂರು ನೀಡಲು ಮುಂದಾಗಿದ್ದಾರೆ. ಜೊತೆಗೆ ಇದರಲ್ಲಿ ಬಿಬಿಎಂಪಿ ಅಧಿಕಾರಿಯೊಬ್ಬರ ಕೈವಾಡ ಇದೆ ಅಂತ ಆರೋಪಿಸಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ, ಕೂಡಲೇ ಇಂಜಿನಿಯರ್ ಗೆ ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಸೂಚಿಸಲಾಗಿದೆ. ಇದರ ಆಧಾರದ ಮೇಲೆ ಕ್ರಮ ಜರುಗಿಸುವುದಾಗಿ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ