/newsfirstlive-kannada/media/post_attachments/wp-content/uploads/2024/04/SOUNDARY_JAGADEESH.jpg)
ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಸೌಂದರ್ಯ ಜಗದೀಶ್ ಅವರ ವ್ಯವಹಾರ ಲಾಸ್ ಆಗಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದರು. ಇದೇ ವೇಳೆ ಬೆಂಗಳೂರಿನ ರಾಜಾಜಿನಗರದ 5ನೇ ಹಂತ ಹಾಗೂ 6ನೇ ಹಂತದಲ್ಲಿರುವ ಮನೆಗಳ ಮೇಲೆ ಬ್ಯಾಂಕ್​ನವರು​ ಮುತ್ತಿಗೆ ಹಾಕಿದ್ದರು. ಇದರಿಂದ ಸೌಂದರ್ಯ ಜಗದೀಶ್​ಗೆ ಬಹಳಷ್ಟು ನೊಂದಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: BREAKING: ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಇನ್ನಿಲ್ಲ
ವ್ಯವಹಾರ ಲಾಸ್ ಆಗಿರುವುದದ ಜೊತೆಗೆ ಅವರು ಮಾನಿಸಿಕ ಕಿನ್ನತೆಗೂ ಒಳಗಾಗಿದ್ದರು. ಅಲ್ಲದೇ ಸ್ವಂತ ಬಾರ್​ ಮೇಲೆ ಪೊಲೀಸ್​ ರೈಡ್​ ಆದ ಮೇಲೆ ಅಂತೂ ಇನ್ನಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಈ ಕಾರಣಗಳಿಂದಲೇ ಸೌಂದರ್ಯ ಜಗದೀಶ್ ಅವರು ಸಾವಿನ ದಾರಿ ಹಿಡಿದರು ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us