ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ.. ನಗರದಲ್ಲಿ ಧರೆಗುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ

author-image
Bheemappa
Updated On
ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ.. ನಗರದಲ್ಲಿ ಧರೆಗುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ
Advertisment
  • ಆಟೋ ಮೇಲೆ ಮರ ಬಿದ್ದಿದ್ದರಿಂದ ಉಸಿರು ಚೆಲ್ಲಿದ ಡ್ರೈವರ್​
  • ರಸ್ತೆಗೆ ಮರ ಬಿದ್ದ ಕಾರಣ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ
  • ಸದ್ಯ ಬಿಬಿಎಂಪಿ ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆ

ಬೆಂಗಳೂರು: ಉದ್ಯಾನನಗರಿಯ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ವೈಟ್​​ಫೀಲ್ಡ್​ನ ಗುಂಜೂರು ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ಆಗಮಿಸಿ ಮರವನ್ನು ತೆರವು ಮಾಡಿದ್ದಾರೆ.

publive-image

ಸಿಲಿಕಾನ್​ ಸಿಟಿಯಲ್ಲಿ ಸಂಜೆ ಮಳೆ ಜೋರಾಗಿಯೇ ಸುರಿದಿದೆ. ವೈಟ್ ಫೀಲ್ಡ್​​ನ ಗುಂಜೂರು ರಸ್ತೆ ಮಳೆ ನೀರಿನಿಂದ ತುಂಬಿದೆ. ಅಲ್ಲದೇ ರಸ್ತೆಗೆ ಮರ ಬಿದ್ದು ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಮರವನ್ನು ತೆರವುಗೊಳಸಿದ್ದಾರೆ. ಇನ್ನೊಂದೆಡೆ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದರಿಂದ ಬೈಕ್​​ ಸವಾರರು, ವಾಹನ ಚಾಲಕರು ಸಮಸ್ಯೆ ಎದುರಿಸಿದರು.

ಇದನ್ನೂ ಓದಿ: ಹಿಟ್​ಮ್ಯಾನ್​ ರೋಹಿತ್ ಸ್ಫೋಟಕ, ರಯಾನ್ ಸಿಡಿಲಬ್ಬರ.. ಓಪನರ್ಸ್​ ಇಬ್ಬರೂ ಭರ್ಜರಿ ಅರ್ಧಶತಕ

publive-image

ಮಳೆಯಿಂದಾಗಿ ನಗರದ ಮೂರು ಕಡೆಗಳಲ್ಲಿ ಮರ‌ ಬಿದ್ದಿವೆ. ಕತ್ರಿಗುಪ್ಪೆ ಬಳಿ ಭಾರೀ ಮಳೆಯಿಂದ ಆಟೋ ಮೇಲೆ ಮರ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಮಹೇಶ್ (45) ಪ್ರಾಣ ಬಿಟ್ಟಿದ್ದಾರೆ. ಕೋರಮಂಗಲದ ತಾವರೆಕೆರೆ ಬಳಿ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಸುಬ್ರಮಣ್ಯ ನಗರದಲ್ಲೂ ಮರ ಧರೆಗುರುಳಿದೆ. ಸದ್ಯ ಬಿಬಿಎಂಪಿ ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment