/newsfirstlive-kannada/media/post_attachments/wp-content/uploads/2025/01/BNG_VV.jpg)
ಬೆಂಗಳೂರು: ನಾಳೆ ಅಂದರೆ ಜನವರಿ 16 ರಿಂದ ನಡೆಯಬೇಕಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸ್ನಾತಕ ಪದವಿ (ಯುಜಿ) ಕೋರ್ಸ್ಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.
2025 ಜನವರಿ 16ರಿಂದ ನಡೆಯಬೇಕಿದ್ದ ಎಲ್ಲ ಪದವಿ ಕೋರ್ಸ್ಗಳ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ವಿಶ್ವವಿದ್ಯಾಲಯದಿಂದ ಮುಂದಿನ ಅಧಿಕೃತ ಮಾಹಿತಿ ಪ್ರಕಟವಾಗುವವರೆಗೂ ವಿದ್ಯಾರ್ಥಿಗಳು ಕಾಯಬೇಕಾಗಿದೆ.
ಇದನ್ನೂ ಓದಿ:ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹುದ್ದೆಗಳು.. IT ವಿಭಾಗಕ್ಕೆ ಬೇಕಾಗಿದ್ದಾರೆ ಅಭ್ಯರ್ಥಿಗಳು
ಜನವರಿ 16 ರಂದು ಮಧ್ಯಾಹ್ನ 2 ಗಂಟೆಗೆ ನಿಗಧಿಯಾಗಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಎಸ್ಇಪಿ 1ನೇ ಸೆಮಿಸ್ಟರ್ ಎಲ್ಲಾ ಸ್ನಾತಕ ಪದವಿ (ಯುಜಿ) ಕೋರ್ಸ್ಗಳ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ. ಪರೀಕ್ಷೆಗಳು ಯಾವಾಗಿನಿಂದ ನಡೆಸಲಾಗುತ್ತದೆ ಎಂಬುದರ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಕ್ಯಾಂಪಸ್ನ ಕುಲಸಚಿವರು, ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರುಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ