ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು.. ಪರ ವಿರೋಧ ಕುರಿತು ಏನೆಲ್ಲ ಚರ್ಚೆ ಆಗ್ತಿದೆ..?

author-image
Ganesh
Updated On
ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ; ಕಾಂಗ್ರೆಸ್ ಕಚೇರಿಯಿಂದ ಹೊರಡಲಿದೆ ಅಂತಿಮ ಯಾತ್ರೆ
Advertisment
  • ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯ ಘೋಷಣೆ
  • ಸರ್ಕಾರದ ನಿರ್ಧಾರ ಸಮರ್ಥಿಸಿದ ಡಿಕೆ ಶಿವಕುಮಾರ್
  • ಬಿಜೆಪಿ, ಜೆಡಿಎಸ್​ ನಾಯಕರು ಏನು ಹೇಳ್ತಿದ್ದಾರೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಮಂಡಿಸಿದ ‘ಕರ್ನಾಟಕ ಬಜೆಟ್ 2025’ ರಲ್ಲಿ ಬೆಂಗಳೂರು ವಿವಿಗೆ ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ್ ಸಿಂಗ್ ಹೆಸರಿಡುವುದಾಗಿ ಘೋಷಣೆ ಮಾಡಿದ್ದಾರೆ. ಬೆನ್ನಲ್ಲೇ ಅನೇಕರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೂಡ ವಿರೋಧ ವ್ಯಕ್ತಪಡಿಸಿರೋದ್ರಿಂದ ಈ ವಿಚಾರ ರಾಜಕೀಯಕ್ಕೆ ತಿರುಗಿದೆ. ವಿರೋಧ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ.. ದೇಶಕ್ಕೆ ಮನಮೋಹನ್ ಸಿಂಗ್ ಕೊಡುಗೆ ಇಲ್ವಾ? ಮೊದಲು ಅದು ಸೆಂಟ್ರಲ್ ಯೂನಿರ್ವಸಿಟಿ ಆಗಿತ್ತು. ಬಿಜೆಪಿಯವರು ಬೌರಿಂಗ್​ಗೆ ವಾಜಪೇಯಿ ಹೆಸರು ಇಡಲಿಲ್ವಾ? ಎಂದು ಕಿಡಿಕಾರಿದ್ದಾರೆ.

ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ.. ಅವರು ದೀನ್ ದಯಾಳ್ ಹೆಸರು ಇಟ್ಟಿದ್ದಾರೆ. ನಾವು ಮನಮೋಹನ್ ಸಿಂಗ್ ಹೆಸರು ಇಡಬಾರದ್ದಾ? ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫ್ಲೈ ಓವರ್ ಮಾಡಿದ್ದು ಯಾರು? ಎಲೆಕ್ಟ್ರಾನಿಕ್ ಸಿಟಿಗೆ ಫ್ಲೈ ಓವರ್ ಮಾಡಿದ್ದು ಯಾರು? ನೆಲಮಂಗಲ ಫ್ಲೈಓವರ್ ಮಾಡಿದ್ದು ಯಾರು? ನೆರೇಗಾ ಯೋಜನೆ ತಂದಿದ್ದು ಯಾರು? ರೈಟ್ ಟು ಎಜುಕೇಷನ್ ತಂದಿದ್ದು ಯಾರು? ಪುಡ್ ಸೆಕ್ಯೂರಿಟಿ ಆಕ್ಟ್ ತಂದಿದ್ದು ಯಾರು? ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಂದಿದ್ದು ಯಾರು? ಆಶಾ ಕಾರ್ಯಕರ್ತೆ ಮಾಡಿದ್ದು ಯಾರು? ಇಷ್ಟೆಲ್ಲ ಕೊಡುಗೆ ನೀಡಿದರೂ ಅವರ ಹೆಸರು ಇಡಬಾರದ ಅನ್ನೋ ಮೂಲಕ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?

ಜೆಡಿಎಸ್ ವಿರೋಧ

ಜೆಡಿಎಸ್ ಟ್ವೀಟ್ ಮಾಡಿ.. ಕನ್ನಡದ್ರೋಹಿ ಸಿದ್ದರಾಮಯ್ಯ. ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿವಿ ಎಂದು ಮರು ನಾಮಕರಣ ಮಾಡುವ ಅವಶ್ಯಕತೆ ಏನಿತ್ತು ಸಿದ್ದರಾಮಯ್ಯ ಅವರೇ? ಬೆಂಗಳೂರು ನಗರ ವಿವಿಗೂ ಮನಮೋಹನ್ ಸಿಂಗ್ ಅವರಿಗೂ ಏನು ಸಂಬಂಧ ? ಇದು "ಕಾಂಗ್ರೆಸ್‌ ಗುಲಾಮಗಿರಿ"! ಕರ್ನಾಟಕದಲ್ಲಿ ಹುಟ್ಟಿದ ಸಾವಿರಾರು ಕನ್ನಡಿಗ ಮಹಾನ್‌ ಸಾಧಕರು ಇದ್ದರೂ ಅವರು ಯಾರು ಕಾಂಗ್ರೆಸ್‌ ಸರ್ಕಾರದ ಕಣ್ಣಿಗೆ ಬೀಳಲಿಲ್ಲವೇ ಕನ್ನಡ ದ್ರೋಹಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನೆ ಮಾಡಿದೆ.

ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಮಹತ್ವದ ನಿಯಮ ಬದಲಾವಣೆ.. ಪ್ರಯಾಣಿಕರಿಗೆ ಇದು ತಿಳಿದಿರಲೇಬೇಕು..!

ಡಾ.ಸುಧಾಕರ್ ವಿರೋಧ

ಬಿಜೆಪಿ ನಾಯಕ ಡಾ ಸುಧಾಕರ್ ಟ್ವೀಟ್ ಮಾಡಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಬಗ್ಗೆ ಎಲ್ಲರಿಗೂ ಗೌರವ ಇದೆ. ಬೆಂಗಳೂರಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿಯೋ ಅಥವಾ ರಾಜ್ಯದ ಇನ್ಯಾವ ಭಾಗದಲ್ಲಿಯಾದರೂ ಮತ್ತೊಂದು ಅರ್ಥಶಾಸ್ತ್ರದ ಕಾಲೇಜು/ವಿವಿ ತೆರೆದು ಅದಕ್ಕೆ ಮನಮೋಹನ್ ಸಿಂಗ್ ಅವರ ಹೆಸರಿಟ್ಟಿದ್ದರೆ ಅದು ಅರ್ಥಪೂರ್ಣವಾಗುತ್ತಿತ್ತು.

ಆರು ದಶಕಗಳಿಗೂ ಹೆಚ್ಚು ಇತಿಹಾಸ, ಪರಂಪರೆ ಇರುವ, ರಾಜ್ಯದ ರಾಜಧಾನಿಯ ಹೆಸರಿನಲ್ಲಿರುವ ಪ್ರತಿಷ್ಠಿತ ವಿವಿಗೆ ಒಬ್ಬ ವ್ಯಕ್ತಿಯ ಹೆಸರಿಡುವುದು ಸೂಕ್ತವಲ್ಲ. ವಾಷಿಂಗ್ಟನ್, ಲಂಡನ್, ದೆಹಲಿ ಹೀಗೆ ವಿಶ್ವದ ಅನೇಕ ಪ್ರತಿಷ್ಠಿತ ವಿವಿಗಳು ಆಯಾ ನಗರಗಳ ಹೆಸರಿನಲ್ಲೇ ಇವೆ ಎನ್ನುವುದನ್ನ ಗಮನಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಪ್ರಶ್ನಿಸಿದ್ದಕ್ಕೆ ಶಿಕ್ಷೆ; ಮಠದಿಂದಲೇ ಸ್ವಾಮೀಜಿಯನ್ನ ಹೊರ ಹಾಕಿದ ಕೆಲ ಭಕ್ತರು!

ಸೋಶಿಯಲ್ ಮೀಡಿಯಾದಲ್ಲಿ ಆಗ್ತಿರುವ ಕೆಲವು ಚರ್ಚೆಗಳು ಇಲ್ಲಿದೆ

ಇದನ್ನೂ ಓದಿ: ಸ್ಟಾರ್​ ಕ್ರಿಕೆಟರ್​ಗೆ ಗುಡ್​ನ್ಯೂಸ್​ ಸಿಗುತ್ತಾ.. ಶ್ರೇಯಸ್ ಅಯ್ಯರ್​ಗೆ ಒಲಿಯುತ್ತಾ ಮಹತ್ವದ ಕಾಂಟ್ರ್ಯಾಕ್ಟ್?​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment