newsfirstkannada.com

ಅಕ್ಕಿ ರಾಜಕೀಯ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಇವತ್ತು ಸಚಿವ ಸಂಪುಟ ಸಭೆ; ಏನೆಲ್ಲ ಚರ್ಚೆ ಸಾಧ್ಯತೆ..?

Share :

Published June 15, 2023 at 7:26am

Update June 15, 2023 at 8:58am

  ಇಂದು ನಾಲ್ಕು ಗ್ಯಾರಂಟಿ ಜಾರಿ ವಿಚಾರ ಕುರಿತು ಚರ್ಚೆ ಸಾಧ್ಯತೆ

  ಸರ್ಕಾರದ ಶಕ್ತಿ ಯೋಜನೆಯಿಂದ ದಿಕ್ಕೆಟ್ಟು ಕೂತ ಖಾಸಗಿ ಬಸ್

  ಹುಬ್ಬಳಿಯಿಂದ ಪುತ್ತೂರಿಗೆ ಪ್ರಿಯಕರನ ಜೊತೆ ಮಹಿಳೆ ನಾಪತ್ತೆ

ಚುನಾವಣೆಯಲ್ಲಿ ಗ್ಯಾರಂಟಿ ಮಾಡಿದ ಮೋಡಿ, ಕಾಂಗ್ರೆಸ್​ ಅನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಿದೆ. ಕೊಟ್ಟ ಮಾತಿನಂತೆ ಕೆಲ ಕಂಡೀಷನ್​ಗಳನ್ನ ಹಾಕಿ ಜನರಿಗೆ ತಲುಪಿಸಲಾಗಿದೆ. ಆದ್ರೂ ಕೆಲ ಗೊಂದಲಗಳು ಸರ್ಕಾರವನ್ನ ಪೇಚಿಗೆ ಸಿಲುಕಿಸಿವೆ. ಆಡಿದ್ದೆ ಒಂದು, ಮಾಡಿದ್ದೇ ಇನ್ನೊಂದು ಅನ್ನೋ ಆರೋಪಕ್ಕೆ ಸಿದ್ದರಾಮಯ್ಯ ಸರ್ಕಾರದ ಗುರಿ ಆಗಿದೆ. ಈಗಾಗಲೇ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.

ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ಕರೆದ ಸಿದ್ದರಾಮಯ್ಯ!

ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ 4 ಗ್ಯಾರಂಟಿ ಜಾರಿ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಗೊಂದಲದಲ್ಲಿರುವ ಗೃಹಜ್ಯೋತಿ ಆನ್​ಲೈನ್ ಅರ್ಜಿ ಸೇರಿ, ಇನ್ನುಳಿದ ಮೂರು ಗ್ಯಾರೆಂಟಿಗಳು ಯಾವಾಗ ಜಾರಿ ಮಾಡಬೇಕು? ರೂಪುರೇಷೆಗಳು ಹೇಗಿರಬೇಕು? ಅಲ್ಲದೆ, ಶಕ್ತಿ ಯೋಜನೆಗೆ ರಾಜ್ಯದಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ಹೇಗಿದೆ ಅನ್ನೋ ಚರ್ಚೆ ನಡೆಸಲಿದ್ದಾರೆ.

ಫಲಾನುಭವಿಗಳ ನೋಂದಣಿ 18 ರಿಂದ ಆರಂಭ!

ಗೃಹಜ್ಯೋತಿ ಯೋಜನೆ ಜಾರಿಗೂ ಸರ್ಕಾರ ಭರದ ಸಿದ್ಧತೆ ಆರಂಭಿಸಿದೆ. ಇದೇ ಜೂನ್ 18 ರಿಂದ ಸೇವಾ ಸಿಂಧು ರ್ಫೋಟಲ್‌ನಲ್ಲಿ ನೋಂದಣಿ ಆರಂಭವಾಗಲಿದೆ.

ಗೃಹಜ್ಯೋತಿಗೆ 18ರಿಂದ ನೋಂದಣಿ

 • ಲಿಂಕ್; https://sevasindhugs.karnataka.gov.in
 • ಮೊಬೈಲ್, ಕಂಪ್ಯೂಟರ್ಸ್ & ಲ್ಯಾಪ್​ಟಾಪ್​ನಲ್ಲೂ ರಿಜಿಸ್ಟರ್
 • ಆಧಾರ್ ಕಾರ್ಡ್, ಗ್ರಾಹಕರ ಐಡಿಗಳ ಮಾಹಿತಿಗಳನ್ನ ನೀಡಬೇಕು
 • ಅಲ್ಲದೆ, ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್‌ ಕೇಂದ್ರ
 • ಯಾವುದೇ ವಿದ್ಯುತ್ ಕಛೇರಿಯಲ್ಲಿ ನೋಂದಣಿ ಮಾಡಬಹುದು
 • ಆಗಸ್ಟ್ 1 ರಿಂದ ಯೋಜನೆ ಜಾರಿ ಆಗ್ತಿದ್ದು, ಶೂನ್ಯ ಬಿಲ್ ಬರಲಿದೆ

ವೇತನ ಪರಿಷ್ಕರಣೆಗೆ ಹೆಚ್ಚುವರಿ ಅನುದಾನ ನೀಡಲ್ಲ

ಇತ್ತ, KSRTC, BMTC ಸೇರಿದಂತೆ ಸಾರಿಗೆ ‌ನಿಗಮಗಳ ವೇತನ‌ ಪರಿಷ್ಕರಣೆ, ಹೆಚ್ಚುವರಿ ಅನುದಾನ ನೀಡಲಾಗಲ್ಲ ಅಂತ ಹಣಕಾಸು ಇಲಾಖೆ ಹೇಳಿದೆ. ಇಂಧನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನ ಕೊಡಲಾಗಲ್ಲ ಅಂತ ತಿಳಿಸಿದೆ. ಸಾರಿಗೆ ನಿಗಮಗಳ ಮನವಿ ತಿರಸ್ಕರಿಸಿದ ಹಣಕಾಸು ಇಲಾಖೆ, ಅಂತರಿಕ‌ ಸಂಪನ್ಮೂಲಗಳಿಂದಲೇ ವೇತನ ಪರಿಷ್ಕರಣೆ ವೆಚ್ಚ ಭರಿಸಲು ಸೂಚಿಸಿದೆ.

ಪ್ರಿಯಕರನನ್ನ ನೋಡಲು ಫ್ರೀ ಬಸ್ ಹತ್ತಿ‌ ಬಂದ ಪ್ರಿಯತಮೆ

ಸರ್ಕಾರದ ಶಕ್ತಿ ಯೋಜನೆಯಲ್ಲಿ ಪ್ರಿಯಕರನನ್ನು ನೋಡಲು ವಿವಾಹಿತೆ ಪ್ರಿಯತಮೆ ಒಬ್ಬಳು ಹುಬ್ಬಳ್ಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದಿದ್ದಾಳೆ. ಯುವತಿಗೆ ಬೇರೆ ಮದುವೆ ಆದ ಬಳಿಕವೂ ತನ್ನ ಪ್ರಿಯಕರನ‌ ಜೊತೆ ಒಡನಾಟದಲ್ಲಿದ್ದಳು. ಕೋಡಿಂಬಾಡಿ ಸಮೀಪ ತೋಟದ ಕೆಲಸ ಮಾಡುತ್ತಿದ್ದ ಪ್ರಿಯಕರನನ್ನ ಕಾಣಲು ಪತಿಗೆ ಆಧಾರ್ ಲಿಂಕ್​​ ನೆಪ ಹೇಳಿ ಬಸ್ ಹತ್ತಿ ಬಂದಿದ್ದಾಳೆ. ಬಳಿಕ ಎರಡೂ ಕುಟುಂಬಗಳ ಹುಡುಕಾಟ‌ ನಡೆದಿದ್ದು, ಪುತ್ತೂರಿಗೆ ತಲುಪಿದ ಮಾಹಿತಿ ಸಿಕ್ಕಿದೆ. ಇದೀಗ ಇಬ್ಬರೂ ನಾಪತ್ತೆಯಾಗಿದ್ದಾರೆ.

ಕೊಡವರ ನಾಡಿಮಿಡಿತ ಖಾಸಗಿ ಬಸ್ ಖಾಲಿ!

ಕೊಡಗಿನ ಸಂಪರ್ಕ ಸಾಧನ, ಈ ಜಿಲ್ಲೆಯ ನರನಾಡಿ ಅಂದ್ರೆ ಖಾಸಗಿ ಬಸ್​ಗಳು. ಹಳ್ಳಿ ಹಳ್ಳಿಯ ಮನೆ ಬಾಗಿಲಿಗೆ ಸೇವೆಯನ್ನ ನೀಡುತ್ತಿದ್ದದ್ದು ಇದೇ ಖಾಸಗಿ ಬಸ್​ಗಳು. ಡಾಂಬರ್ ಕಾಣದ ರಸ್ತೆಗಳಲ್ಲಿ‌ ಸೇವೆ ನೀಡುತ್ತಿದ್ದ ಈ ಖಾಸಗಿ ಬಸ್‌ಗಳಿಗೆ ಕೋವಿಡ್ ಮಹಾಘಾತ ನೀಡಿತ್ತು. ಈ ಕಷ್ಟದಲ್ಲಿದ್ದಾಗಲೇ ಈಗ ಸರ್ಕಾರದ ಶಕ್ತಿ ಯೋಜನೆ ದೊಡ್ಡ ಹೊಡೆತ ನೀಡಿದೆ. ಮಹಿಳೆಯರು ಸರ್ಕಾರಿ ಬಸ್ ಏರುತ್ತಿದ್ದು, ಹಿಂದೆ 10-15 ಸಾವಿರವಿದ್ದ ಕಲೆಕ್ಷನ್ ಈಗ ಎರಡೇ ದಿನದಲ್ಲಿ 6 ಸಾವಿರಕ್ಕಿಳಿದಿದೆ.

ಒಂದ್ಕಡೆ ಖಾಸಗಿ ಬಸ್ ಮಾಲೀಕರು ಶಕ್ತಿ ಕಳೆದುಕೊಂಡಿದ್ದಾರೆ. ಇನ್ನೊಂದ್ಕಡೆ, ಶಕ್ತಿಯಿಂದ ಸ್ತ್ರೀಯರಿಗೆ ಶಕ್ತಿ ಬಂದಿದೆ. ಇತ್ತ, ಆಗಸ್ಟ್ 1 ರಿಂದ ಗೃಹಜ್ಯೋತಿಗೂ ಚಾಲನೆ ಸಿಗ್ತಿದ್ದು, ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕಿ ರಾಜಕೀಯ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಇವತ್ತು ಸಚಿವ ಸಂಪುಟ ಸಭೆ; ಏನೆಲ್ಲ ಚರ್ಚೆ ಸಾಧ್ಯತೆ..?

https://newsfirstlive.com/wp-content/uploads/2023/06/CM_SIDDARAMAIAH.jpg

Load More