/newsfirstlive-kannada/media/post_attachments/wp-content/uploads/2024/12/ATUL-SUBHASH-CASE.jpg)
ಬೆಂಗಳೂರು: ಪತ್ನಿ ಕಿರುಕುಳದ ಆರೋಪ ಹೊರಿಸಿದ್ದ ಟೆಕ್ಕಿ ಅತುಲ್ ಸುಭಾಷ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ನಿಖಿತಾ ಸೇರಿ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಟೆಕ್ಕಿ ಅತುಲ್ ಸುಭಾಷ್ ಕೇಸ್‌ನಲ್ಲಿ ನಿಖಿತಾ ಸಿಂಘಾನಿಯಾ, ನಿಶಾ ಸಿಂಘಾನಿಯಾ ಹಾಗೂ ಅನುರಾಗ್ ಸಿಂಘಾನಿಯಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರಿನ 29ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಅರ್ಜಿಯ ವಾದ, ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿತ್ತು. ಗ್ರೌಂಡ್ಸ್ ಆಫ್ ಅರೆಸ್ಟ್ ಸರಿಯಿಲ್ಲ ಅನ್ನೋ ಕಾರಣಕ್ಕೆ ಕೋರ್ಟ್ ಮೂವರಿಗೂ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ: ಅತುಲ್ ಸುಭಾಷ್ ಕೇಸ್‌ಗೆ ಸ್ಫೋಟಕ ಟ್ವಿಸ್ಟ್.. ಹೆಂಡತಿ, ಅತ್ತೆ ಬಂಧಿಸಿದ ಬೆಂಗಳೂರು ಪೊಲೀಸ್; ಹೇಗಿತ್ತು ಆಪರೇಷನ್?
ಆರೋಪಿಗಳಿಗೆ ಜಾಮೀನು ನೀಡದಂತೆ ಎಸ್‌ಪಿಪಿ ವಾದ ಮಂಡಿಸಿದರು. ಸತತ 5 ವರ್ಷಗಳಿಂದ ಟೆಕ್ಕಿ ಅತುಲ್ ಸುಭಾಷ್‌ಗೆ ಕಿರುಕುಳ ನೀಡಲಾಗಿದೆ. ಬೆಂಗಳೂರಲ್ಲಿ ವಾಸವಿದ್ದರೂ ಉತ್ತರ ಪ್ರದೇಶದಲ್ಲಿ ಕೇಸ್‌ಗಳನ್ನ ದಾಖಲಿಸಲಾಗಿದೆ. ಕೇಸ್ ಮೇಲೆ ಕೇಸ್ ಹಾಕಿ ಅತುಲ್‌ಗೆ ಟಾರ್ಚರ್ ನೀಡಲಾಗಿದೆ. ಹೆಂಡತಿ ಹಾಗೂ ಅವರ ಮನೆಯವರ ಟಾರ್ಚರ್ ತಡೆಯದೇ ಅತುಲ್ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿತ್ತು.
ಅಷ್ಟೇ ಅಲ್ಲದೇ ಆರೋಪಿಗಳಿಗೆ ಜಾಮೀನು ಸಿಕ್ಕಲ್ಲಿ ಮತ್ತೆ ಅವರು ತನಿಖೆಗೆ ಸಿಗುವುದಿಲ್ಲ. ಅತುಲ್ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿದ್ದರಿಂದ ಆರೋಪಿಗಳು ಸಿಕ್ಕಿದ್ದಾರೆ. ಇಲ್ಲದೇ ಇದ್ದಲ್ಲಿ ಆರೋಪಿಗಳು ಪೊಲೀಸರಿಗೆ ಸಿಗುತ್ತಿರಲಿಲ್ಲ. ಹೀಗಾಗಿ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಎಸ್‌ಪಿಪಿ ಮನವಿ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us