ಬೆಂಗಳೂರು ಇಡ್ಲಿ ಪ್ರಿಯರೇ ಎಚ್ಚರ.. ಡೆಡ್ಲಿ ಕ್ಯಾನ್ಸರ್ ಕಾರಕ ಪತ್ತೆ; ಆಘಾತಕಾರಿ ವರದಿ ಬಿಡುಗಡೆ!

author-image
admin
Updated On
ಬೆಂಗಳೂರು ಇಡ್ಲಿ ಪ್ರಿಯರೇ ಎಚ್ಚರ.. ಡೆಡ್ಲಿ ಕ್ಯಾನ್ಸರ್ ಕಾರಕ ಪತ್ತೆ; ಆಘಾತಕಾರಿ ವರದಿ ಬಿಡುಗಡೆ!
Advertisment
  • ಬೆಂಗಳೂರಿನ ಹೋಟೆಲ್‌ಗಳಲ್ಲಿ ಇಡ್ಲಿ ತಿನ್ನಲು ಹೋಗುವವರೇ ಎಚ್ಚರ!
  • ಆಹಾರ ಇಲಾಖೆ ಡೆಡ್ಲಿ ಇಡ್ಲಿ ಬಗ್ಗೆ ಆಘಾತಕಾರಿ ವರದಿ ಬಿಡುಗಡೆ
  • ಡೆಡ್ಲಿ ಇಡ್ಲಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

ಬೆಂಗಳೂರು: ಬೆಳಗ್ಗೆ ಎದ್ದು ಇಡ್ಲಿ ತಿನ್ನಲು ಹೋಟೆಲ್‌ಗಳಿಗೆ ಹೋಗುವ ಇಡ್ಲಿ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್. ಆಹಾರ ಇಲಾಖೆ ಡೆಡ್ಲಿ ಇಡ್ಲಿ ಬಗ್ಗೆ ಆಘಾತಕಾರಿ ವರದಿ ಬಿಡುಗಡೆ ಮಾಡಿದೆ. ಆಹಾರ ಇಲಾಖೆಯ ಈ ರಿಪೋರ್ಟ್‌ ಸಿಲಿಕಾನ್ ಸಿಟಿ ಜನರನ್ನ ನಿಜಕ್ಕೂ ಆತಂಕಕ್ಕೀಡು ಮಾಡಿದೆ.

publive-image

ಇಡ್ಲಿಯಿಂದ ಡೆಡ್ಲಿ ಕ್ಯಾನ್ಸರ್​!
ಇಡ್ಲಿಯಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ರಸ್ತೆ ಬದಿ ಪ್ಲಾಸ್ಟಿಕ್​ ಕವರ್​ನಲ್ಲಿ ತಯಾರಾಗ್ತಿರೋ ಇಡ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಹಲವಡೆ ಇಡ್ಲಿ ಬೇಯಿಸಲು ಹತ್ತಿ ಬಟ್ಟೆ ಬದಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇಡ್ಲಿ ಮಾಡುವಾಗ, ಬಡಿಸುವಾಗ, ಪ್ಯಾಕಿಂಗ್​ನಲ್ಲೂ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಕವರ್ ಬಳಸಿ ಇಡ್ಲಿ ಬೇಯಿಸುವಾಗ ಕಾರ್ಸಿನೋಜೆನಿಕ್ ಹಾನಿಕಾರಕ ವಸ್ತು ಸೇರಿಕೊಳ್ಳುತ್ತದೆ. ಪ್ಲಾಸ್ಟಿಕ್ ಹಾಳೆ ಶಾಖಕ್ಕೆ ಒಡ್ಡಿಕೊಂಡು ಹಾನಿಕಾರಕ ವಸ್ತುವನ್ನು ಹೊರಸೂಸುತ್ತಿದ್ದು, ಇದು ಕ್ಯಾನ್ಸರ್‌ ಕಾರಕವಾಗಿದೆ.

publive-image

ಆಹಾರ ಹಾಗೂ ಗುಣಮಟ್ಟ ಇಲಾಖೆ ಬೆಂಗಳೂರಿನ ಹಲವಡೆ ಇಡ್ಲಿಗಳ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದೆ. ನಗರದ ವಿವಿಧ ಭಾಗಗಳಲ್ಲಿ 500 ಇಡ್ಲಿ ಸ್ಯಾಂಪಲ್ಸ್​ಗಳನ್ನು ಸಂಗ್ರಹ ಮಾಡಿದ್ದು, ಅದರಲ್ಲಿ 35ಕ್ಕೂ ಹೆಚ್ಚು ಸ್ಯಾಂಪಲ್ಸ್​ಗಳು ಸುರಕ್ಷಿತವಲ್ಲ ಅನ್ನೋ ಫಲಿತಾಂಶ ಬಂದಿದೆ. ಉಳಿದ ನೂರಾರು ಸ್ಯಾಂಪಲ್ಸ್​ ವರದಿಗೆ ಆಹಾರ ಇಲಾಖೆ ಕಾಯುತ್ತಿದೆ. ಆಹಾರ ಇಲಾಖೆಗೆ ಎಲ್ಲಾ ಸ್ಯಾಂಪಲ್‌ಗಳ ವರದಿ ಬಂದ ಬಳಿಕ ಪ್ಲಾಸ್ಟಿಕ್ ಪೇಪರ್ ಬಳಕೆಯನ್ನೇ ಬ್ಯಾನ್​ ಮಾಡಲು ಪ್ಲಾನ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಕೂಲ್​ ಡ್ರಿಂಕ್ಸ್ ಕುಡಿಯೋರಿಗೆ ಬಿಗ್​ ಶಾಕ್​​​​​​; ಕ್ಯಾನ್ಸರ್​ ಎಚ್ಚರಿಕೆ ಕೊಟ್ಟ WHO; ಓದಲೇಬೇಕಾದ ಸ್ಟೋರಿ 

publive-image

ಆರೋಗ್ಯ ಸಚಿವರು ಹೇಳಿದ್ದೇನು?
ಡೆಡ್ಲಿ ಇಡ್ಲಿ ವರದಿಯ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ 251 ಕಡೆಗಳಲ್ಲಿ ಸ್ಯಾಂಪಲ್ಸ್ ಪಡೆಯಲಾಗಿದೆ. ಇದರಲ್ಲಿ ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ.
ಈ ಹಿಂದೆ ಬಟ್ಟೆಯನ್ನು ಬಳಕೆ ಮಾಡಲಾಗುತ್ತಿದ್ದು, ಬಾಣಂತಿಯರು, ಗರ್ಭಿಣಿಯರ ಮೇಲೂ ಪರಿಣಾಮ ಬೀಳುತ್ತೆ. ಯಾರೇ ಆದರೂ ಇಂತಹ ಇಡ್ಲಿ ಆಹಾರ ಸೇವನೆ ಮಾಡಬಾರದು. ಈ ಆಹಾರ ಸೇವನೆಯಿಂದ ಅಂಗಾಗಳ ಮೇಲೆ ದುಷ್ಪರಿಣಾಮ ಬೀರುತ್ತೆ. ಅದು ಆಗಬಾರದು. ಈ ಬಗ್ಗೆಯೂ ಸಾರ್ವಜನಿಕರಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗುತ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment