/newsfirstlive-kannada/media/post_attachments/wp-content/uploads/2024/12/BNG_BUDABUDIKE.jpg)
ಮನೆಯಲ್ಲಿರುವ ಕಷ್ಟವನ್ನ ಪರಿಹಾರ ಮಾಡುತ್ತೇವೆಂದು ಬಂದವರು. ನಂಬಿದವರನ್ನ ಮತ್ತೆ ಕಷ್ಟಕ್ಕೆ ತಳ್ಳಿದ್ದಾರೆ. ಮುಖ ಮೂತಿ ಪರಿಚಯ ಇಲ್ಲದಿದ್ದವರನ್ನ ಮನೆಯೊಳಕ್ಕೆ ಬಿಟ್ಕೊಂಡ್ರೆ ಏನ್ ಆಗುತ್ತೆ ಎನ್ನುವುದಕ್ಕೆ ಇಲ್ಲಿ ದೊಡ್ಡ ಸ್ಟೋರಿಯೇ ಇದೆ.
ಬುಡಬುಡಿಕೆ ವೇಷದಲ್ಲಿ ಬಂದು ಹಾಡಹಗಲೇ ದರೋಡೆ
ಜಯ ಆಗ್ಲಿ, ಜಯ ಆಗ್ಲಿ ಬಂದ ಕಾರ್ಯ ಶುದ್ಧ ಆಗ್ಲಿ. ದೇವ ಅನುಗ್ರಹದಿಂದ ಬೆಳಕಾಗ್ಲಿ. ಈ ಸಂಕ್ರಾಂತಿ ಕಳೆದ ಮೇಲೆ ಸರ್ವಾನಂದ ನಿಮ್ಮ ಮನೆ ತುಂಬ್ಲಿ. ಹೀಗೆ ಶುಭ ಅಶುಭಗಳ ಬಗ್ಗೆ ಬುಡಬುಡಿಕೆಯವರು ಭವಿಷ್ಯ ನುಡಿತಾರೆ. ಆದ್ರೆ ಇಲ್ಲೊಬ್ಬ ಅದೇ ಬುಡಬುಡಿಕೆಯವರ ವೇಷ ಧರಿಸಿ ಬಂದು ದೋಚಿದ್ದಾನೆ.
ಇಲ್ಲಿ ನಾವು ಕೂಳಿತುಕೊಂಡಿದ್ವಿ, ಅವರು ಅಲ್ಲಿ ಕುಳಿತ್ತಿದ್ದರು. ಇನ್ನೊಬ್ಬ ಚೇರ್ ಮೇಲಿದ್ದ. ಅವರ ಡಬ್ಬದಲ್ಲಿ ಅದೇನೋ ಕಪ್ಪುಗೆ ಇತ್ತು ಅದನ್ನ ನೀರಲ್ಲಿ ಮಿಕ್ಸ್ ಮಾಡಿ, ನಮ್ಮ ಮುಖಕ್ಕೆ ಹೊಡೆದರು. ಅಷ್ಟೆ, ನಾವು ಮನೆಯಲ್ಲಿದ್ದ ಅಷ್ಟೂ ದುಡ್ಡು, ಚಿನ್ನಾಭರಣವನ್ನ ಬುಡುಬುಡಿಕೆ ವೇಷಧಾರಿಗಳಿಗೆ ಕೊಟ್ಟಿದ್ದೇವೆ ಎಂದು ದಂಪತಿ ಹೇಳುತ್ತಿದ್ದಾರೆ.
ಒಂದೇ ಗ್ರಾಮದ 4- 5 ಮನೆಗಳಲ್ಲಿ ಹಣ, ಚಿನ್ನ ದೋಚಿ ಎಸ್ಕೇಪ್
ಇದು ಇವರೊಬ್ಬರಿಗೆ ಮಾತ್ರ ಆಗಿಲ್ಲ, ಬದಲಿಗೆ ಆ ಗ್ರಾಮದ 4-5 ಮನೆಗಳಲ್ಲಿ ನಡೆದಿದೆ. ಅಂದಹಾಗೆ ಈ ಬ್ಲ್ಯಾಕ್ ಮ್ಯಾಜಿಕ್ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮದಲ್ಲಿ. ಅಪಾಯ ಕಾದಿದೆ, ಅಪಘಾತವಾಗುತ್ತೆ, ಕಷ್ಟಗಳು ಬರುತ್ತೆ. ಇದಕ್ಕೆ ನಾವು ಪರಿಹಾರ ಹೇಳುತ್ತೇವೆ ಎಂದು ಮನೆಯೊಳಕ್ಕೆ ಬಂದ ಬೂಟಾಟಿಕೆಯವರು ಮಾಡಿದ್ದು ಮಾತ್ರ ದರೋಡೆ.
ಇದನ್ನೂ ಓದಿ:ಸಾಲ ಕೊಡಿಸುವಾಗ ಹುಷಾರ್..! ಮಹಿಳೆಯರಿಗೆ ಲಕ್ಷ ಲಕ್ಷ ಪಂಗನಾಮ, ದಂಪತಿ ಎಸ್ಕೇಪ್
ನೂರು ರೂಪಾಯಿ ಹಣ ನೀಡಿದರೆ ಕಷ್ಟ ಪರಿಹಾರ ಮಾಡಿಕೊಡುತ್ತೇವೆ ಅಂತ ಯಾಮಾರಿಸಿ. ಚಿನ್ನದ ಉಂಗುರ, ಕಿವಿ ಓಲೆ ಸೇರಿದಂತೆ ನಗದು ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಬುಡುಬುಡಿಕೆ ವೇಷದಲ್ಲಿ ಬಂದಿದ್ದ ಇಬ್ಬರು ಅಪರಿಚಿತರಿಂದ ಕೃತ್ಯ ಎಸಗಿರುವ ಬಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗಾಗ್ಲೇ ವಿಶ್ವನಾಥಪುರ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಈಗಿನ ಕಾಲದಲ್ಲಿ ಯಾರನ್ನು ನಂಬೋದು ಅಂತಾನೇ ಗೊತ್ತಾಗುತ್ತಿಲ್ಲ. ನಂಬಿಕೆ ಅನ್ನೋ ಶಬ್ಧವೇ ಬಲ ಕಳೆದುಕೊಂಡಿದೆ. ಮನೆಯಲ್ಲಿರೋ ಕಷ್ಟವನ್ನ ಪರಿಹಾರ ಮಾಡುತ್ತೇವೆಂದು ಬಂದವರು, ನಂಬಿದವರನ್ನ ಮತ್ತೆ ಕಷ್ಟಕ್ಕೆ ತಳ್ಳಿದ್ದಾರೆ. ಮುಖ ಮೂತಿ ಪರಿಚಯ ಇಲ್ಲದಿದ್ದವರನ್ನ ಮನೆಯೊಳಕ್ಕೆ ಬಿಟ್ಕೊಳ್ಳಬೇಡಿ ಅನ್ನೋದು ಪೊಲೀಸರ ಮುನ್ನೆಚ್ಚರಿಕೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ