/newsfirstlive-kannada/media/post_attachments/wp-content/uploads/2025/01/BDA_FLAT.jpg)
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಣಿಮಿಣಿಕೆಯಲ್ಲಿ ಫ್ಲ್ಯಾಟ್ ಮೇಳವನ್ನು ಆಯೋಜನೆ ಮಾಡಿತ್ತು. ಸದ್ಯ ಇದಕ್ಕೆ ಸಾರ್ವಜನಿಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದೇ ದಿನದಲ್ಲಿ 175 ನಿವಾಸಗಳು ಮಾರಾಟ ಆಗಿವೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಫ್ಲ್ಯಾಟ್ ಮೇಳದಲ್ಲಿ ನಿರೀಕ್ಷೆಗೂ ಮೀರಿ ಜನರು ಭಾಗಿಯಾಗಿದ್ದರು. ಸುಮಾರು 500 ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 175 ಜನರು 175 ಫ್ಲ್ಯಾಟ್ಗಳನ್ನು ಖರೀದಿ ಮಾಡಿದ್ದು ಇದರಲ್ಲಿ 75 ಜನರು ಫ್ಲ್ಯಾಟ್ನ ಠೇವಣಿಯನ್ನು ಸ್ಥಳದಲ್ಲೇ ಪಾವತಿ ಮಾಡಿ, ಹಂಚಿಕೆ ಪತ್ರವನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ 25 ಮಂದಿ ಚೆಕ್ ನೀಡಿದ್ದು ಸೋಮವಾರ ಆರ್ಟಿಜಿಎಸ್ ಮೂಲಕ ಹಣ ಪಾವತಿ ಮಾಡಿದ ಬಳಿಕ ಹಂಚಿಕೆ ಪತ್ರವನ್ನು ನೀಡಲಾಗುವುದು.
ಇದನ್ನೂ ಓದಿ:ಸಮಂತಾಗೆ ಮತ್ತೆ ಲವ್.. ಸ್ಟಾರ್ ಡೈರೆಕ್ಟರ್ನಿಂದ ಮೆಸೇಜ್ ಬರ್ತಿದ್ದಂತೆ ಫುಲ್ ಖುಷ್
ಮೇಳದಲ್ಲಿ ಕಣಿಮಿಣಿಕೆ ಹಂತ 1 ಮತ್ತು 2ರಲ್ಲಿ ಎರಡು ಬಿಹೆಚ್ಕೆ (ಬೆಡ್ ರೂಮ್, ಹಾಲ್, ಕಿಚನ್) ಮನೆಗಳನ್ನು ಮಾರಾಟ ಮಾಡಲಾಯಿತು. ಕಣಿಮಿಣಿಕೆ ಹಂತ-2 ರಲ್ಲಿ ಎರಡು ಬಿಹೆಚ್ಕೆ 650 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್‌ಗಳ ದರ 25 ಲಕ್ಷ ರೂಪಾಯಿಗೆ ಖರೀದಿ ಮಾಡಿದರೆ, ಕಣಿಮಿಣಿಕೆ ಹಂತ -3ರಲ್ಲಿ 2 ಬಿಹೆಚ್ಕೆ 800 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್‌ಗಳ ದರ 30 ಲಕ್ಷ ರೂಪಾಯಿ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ