/newsfirstlive-kannada/media/post_attachments/wp-content/uploads/2025/01/JOB_BDA.jpg)
ಬಿಡಿಎ ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಉದ್ಯೋಗಗಳು ಖಾಲಿ ಇವೆ. ಈ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಅನುಮತಿ ನೀಡಬೇಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಸರ್ಕಾರದ ಆದೇಶ ಬಂದ ಕೂಡಲೇ ಅಧಿಸೂಚನೆ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಈ ಹುದ್ದೆಗಳ ಆಹ್ವಾನ ಬಗ್ಗೆ ನಿಗಾವಹಿಸಿರಬೇಕು. ಕೆಇಎ ನೋಟಿಫಿಕೆಶನ್ ರಿಲೀಸ್ ಮಾಡಿದ ತಕ್ಷಣ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ದ್ವಿತೀಯ ದರ್ಜೆ ಸಹಾಯಕರು (ಎಸ್ಡಿಎ) ಹಾಗೂ ಪ್ರಥಮ ದರ್ಜೆ ಸಹಾಯಕರು (ಎಫ್ಡಿಎ) ಸೇರಿ ಒಟ್ಟು 25 ಉದ್ಯೋಗಗಳು ಇವೆ. ಈ ಕೆಲಸಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ. ಜನರಲ್ ನ್ಯಾಲೆಡ್ಜ್ ಹಾಗೂ ಕಂಪ್ಯೂಟರ್, ಇಂಗ್ಲಿಷ್, ಕನ್ನಡ ಸೇರಿ 2 ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಇದಕ್ಕಾಗಿ ಆಕಾಂಕ್ಷಿಗಳು ನ್ಯೂಸ್ ಪೇಪರ್ ಸೇರಿದಂತೆ ಇದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು.
ಇದನ್ನೂ ಓದಿ:ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ.. AIIMSನಲ್ಲಿ ವಿವಿಧ ಉದ್ಯೋಗಗಳಿಗೆ ಆಹ್ವಾನ
ಪ್ರಥಮ ದರ್ಜೆ ಸಹಾಯಕರು ಉದ್ಯೋಗಕ್ಕೆ ಪದವಿ (ಡಿಗ್ರಿ) ನಿಗದಿ ಮಾಡಿದ್ರೆ, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗುತ್ತದೆ. ಉದ್ಯೋಗ ಆಕಾಂಕ್ಷಿಗಳು 18 ರಿಂದ 43 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆಗೆ ಇಲಾಖೆ ಅವಕಾಶ ನೀಡಬಹುದು. ಕೆಇಎ ಅಧಿಕೃತವಾಗಿ ನೋಟಿಫಿಕೆಶನ್ ರಿಲೀಸ್ ಮಾಡಿದ ಬಳಿಕ ಈ ಬಗ್ಗೆ ಸಂಪೂರ್ಣ ಮಾಡಹಿತಿ ದೊರೆಯುತ್ತದೆ. ಆದರೆ ಉದ್ಯೋಗ ಕರೆಯುವುದು ಪಕ್ಕಾದ ಕಾರಣ ಉದ್ಯೋಗಾಕಾಂಕ್ಷಿಗಳು ಈ ಬಗ್ಗೆ ಗಮನ ಇಟ್ಟಿರಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ