ನನಗೆ ತಾಯಿ ಇಲ್ಲ, ಅಕ್ಕನೇ ಎಲ್ಲಾ.. ದುಡ್ಡು ಬೇಡ, ಸಂಧ್ಯಾ ಬೇಕು; ಮೃತ ಟೆಕ್ಕಿ ತಮ್ಮನ ಕಣ್ಣೀರು

author-image
Veena Gangani
Updated On
ನನಗೆ ತಾಯಿ ಇಲ್ಲ, ಅಕ್ಕನೇ ಎಲ್ಲಾ.. ದುಡ್ಡು ಬೇಡ, ಸಂಧ್ಯಾ ಬೇಕು; ಮೃತ ಟೆಕ್ಕಿ ತಮ್ಮನ ಕಣ್ಣೀರು
Advertisment
  • ನ್ಯೂಸ್ ಫಸ್ಟ್ ಜೊತೆಗೆ ಮಾತಾಡುತ್ತಾ ಸಂಧ್ಯಾಳನ್ನು ನೆನೆದು ತಮ್ಮ ಕಣ್ಣೀರು
  • ಕುಡಿದ ಅಮಲಿನಲ್ಲಿ ಬೆನ್ಜ್‌ ಕಾರು ಓಡಿಸಿ ಅಟ್ಟಹಾಸ ಮೇರೆದ ಆರೋಪಿ
  • ನಿನ್ನೆ ಕೆಂಗೇರಿ ಬಸ್ ನಿಲ್ದಾಣದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಟೆಕ್ಕಿ ಸಾವು

ಬೆಂಗಳೂರು: ನಿನ್ನೆ ಕೆಂಗೇರಿ ಬಸ್ ನಿಲ್ದಾಣದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 30 ವರ್ಷದ ಟೆಕ್ಕಿ ಸಂಧ್ಯಾ ಅವರು ಮೃತಪಟ್ಟಿದ್ದರು. ಯಾವ ತಪ್ಪು ಮಾಡದ ಇರೋ ಸಂಧ್ಯಾ ಪ್ರಾಣ ತೆತ್ತಿದ್ದಾರೆ.

ಇದನ್ನೂ ಓದಿ:ಡ್ರಿಂಕ್‌ & ಡ್ರೈವ್‌ ಅಪಘಾತ.. ಸಂಧ್ಯಾ ಸಾವಿಗೂ ಮುನ್ನ ನಡೆದಿದ್ದೇನು? ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ನಿನ್ನೆ ಸಂಜೆ 6.45ಕ್ಕೆ ಆರೋಪಿ ಧನುಷ್ ಹಾಗೂ ಆತನ ಗೆಳೆಯರು ಕುಡಿದು ಬೆನ್ಜ್‌ ಕಾರು ಚಾಲನೆ ಮಾಡುತ್ತಿದ್ದರು. ಕೆಂಗೇರಿ ಬಸ್ ನಿಲ್ದಾಣದ ಬಳಿ ಟೆಕ್ಕಿ ಸಂಧ್ಯಾ ಅವರು ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಏಕಾಏಕಿ ಸ್ಪೀಡಾಗಿ ಬರ್ತಿದ್ದ ಬೆನ್ಜ್ ಕಾರು ಆಕೆಗೆ ಡಿಕ್ಕಿ ಹೊಡೆದಿದೆ. ಬೆನ್ಜ್ ಕಾರು ಗುದ್ದಿದ ರಭಸಕ್ಕೆ ಸಂಧ್ಯಾ ದೇಹವೇ ನುಜ್ಜುಗುಜ್ಜಾಗಿದೆ. ಇನ್ನು, ಸಂಧ್ಯಾ ಅವರ ಈ ದುರಂತ ಸಾವು ಸ್ನೇಹಿತರು, ಕುಟಂಬಸ್ಥರಿಗೆ ಭರಿಸಲಾರದ ನಷ್ಟವನ್ನುಂಟು ಮಾಡಿದೆ.

publive-image

ಅಲ್ಲದೇ ಪ್ರೀತಿಯ ಅಕ್ಕನನ್ನು ಕಳೆದುಕೊಂಡ ದುಃಖದಲ್ಲಿ ಸಂಧ್ಯಾಳ ಸಹೋದರ ನ್ಯೂಸ್​ಫಸ್ಟ್​ ಮುಂದೆ ಕಣ್ಣೀರು ಹಾಕಿದ್ದಾರೆ. ಅಕ್ಕನನ್ನು ಕಳೆದುಕೊಂಡ ದುಃಖದಲ್ಲಿ ಮಾತಾಡಿದ ಸಂಧ್ಯಾಳ ಸಹೋದರ ಶೇಖರ್, ನಮಗೆ 8.30ಕ್ಕೆ ಪೋಲಿಸರಿಂದ ಒಂದು ಕಾಲ್​ ಬಂತು. ಹೀಗೆ ಸಂಧ್ಯಾಗೆ ಅಪಘಾತವಾಗಿದೆ ಆಸ್ಪತ್ರೆಗೆ ಬನ್ನಿ ಅಂತ ಹೇಳಿದ್ರು. ಆಗ ನಾವು ತಡ ಮಾಡದೇ ಆಸ್ಪತ್ರೆಗೆ ಹೋದೇವು. ಆದರೆ ನಮ್ಮ ಅಕ್ಕ ಸಾವನ್ನಪ್ಪಿದ್ರು. ಕಾರು ಡಿಕ್ಕಿಯಾದ ರಭಸಕ್ಕೆ ಬಾಡಿಯಲ್ಲಿ ಒಂದು ಪಾರ್ಟ್ ಕೂಡ ಸರಿಯಾಗಿಲ್ಲ. ಕಾರು ಮಾಲೀಕರ ಕಡೆಯವರು ಬಂದು ಎಫ್ಐಆರ್ ಮಾಡಬೇಡಿ. ದುಡ್ಡು ಕೊಡ್ತೀವಿ ಅಂತಾ ಹೇಳಿದ್ದರು. ನಮಗೆ ದುಡ್ಡು ಬೇಡ, ಸಂಧ್ಯಾ ಬೇಕು. ಈ ಘಟನೆ ಬಗ್ಗೆ ಎಲ್ಲಾ ತಿಳಿದುಕೊಂಡು ಪೊಲೀಸ್​ ಠಾಣೆಗೆ ಹೋಗಿ ಎಫ್​ಐಆರ್​ ಹಾಕಲು ಮುಂದಾಗಿದ್ದೇವು. ಆದರೆ ಅಲ್ಲಿ ಎಫ್​ಐಆರ್​ ಹಾಕೋದಕ್ಕೆ ಹಿಂದೇಟು ಹಾಕಿದ್ದು, ಬಳಿಕ ಎಫ್​ಐಆರ್​ ದಾಖಲು ಮಾಡಿಕೊಂಡ್ರು ಅಂತ ಹೇಳಿದ್ದಾರೆ.

ನಮ್ಮ ಅಕ್ಕ ಒಂದು ಬಟ್ಟೆ ಶಾಪ್​ನಲ್ಲಿ ಸ್ಟೋರ್ ಮ್ಯಾನೇಜರ್ ಆಗಿದ್ದರು. ನಮ್ಮ ಅಕ್ಕ ಸಾಯುವ ಮುನ್ನ ನಾನು ಆಕೆಗೆ ಕಾಲ್​ ಮಾಡಿದ್ದೆ. ಇದಾದ 10 ನಿಮಿಷದ ಬಳಿಕ ಈ ಘಟನೆ ನಡೆದಿದೆ. ಪೊಲೀಸರು ಸಿಸಿಟಿವಿ ಫೋಟೋಜ್​ ಕೊಡ್ತಾ ಇಲ್ಲ. ಕಟ್ಟರೆ ಏನ್​ ಆಯ್ತು ಅಂತೆಲ್ಲಾ ತಿಳಿದುಕೊಳ್ಳಬಹುದು. ಈ ಘಟನೆ ನಡೆದ ನಂತರ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಂಧ್ಯಾ ಅವರಿಗೆ ಮದುವೆಯಾಗಿ ಕೇವಲ 4 ವರ್ಷ ಆಗಿತ್ತು. ನನ್ನ ತಾಯಿ 2021ರಲ್ಲಿ ಕೋವಿಡ್ ಟೈಮ್​ನಲ್ಲಿ ಡೆತ್ ಆಗಿದ್ದರು. ನನಗೆ ತಂದೆ ತಾಯಿ ಇಬ್ರೂ ಇಲ್ಲ. ಇದ್ದಿದ್ದು ಕೇವಲ ಅಕ್ಕಾ ಮಾತ್ರ. ನಾನು ಒಬ್ಬ ಹಾಲು ಮಾರುವವನು. ಏನಾದ್ರೂ ನಿನ್ನ ಜೊತೆ ನಾನಿದ್ದೀನಿ ತಮ್ಮಾ ಅಂತ ಹೇಳುತ್ತಿದ್ದರು. ಆಕೆ ಒಳ್ಳೆ ಆರ್ಟಿಸ್ಟ್​ ಹಾಗೂ ಒಳ್ಳೆಯ ಸಪೋರ್ಟರ್ ಕೂಡ ಆಗಿದ್ದರು. ಆದರೆ ನಮ್ಮ ಅಕ್ಕನಿಗೆ ಹೀಗೆ ಆಗಿದೆ ಅಂದ್ರೆ ನಮಗೆ ನಂಬೋಕೆ ಆಗುತ್ತಿಲ್ಲ. ಕುಡಿದು ವಾಹನ ಚಲಾಯಿಸುವುದು ತಪ್ಪು. ಆತ ಶೋಕಿಯಲ್ಲಿ ಕುಡಿದು ಕಾರು ಓಡಿಸಿ ನಮ್ಮ ಅಕ್ಕನ ಜೀವ ತೆಗೆದಿದ್ದಾನೆ. ಅವರಿಗೆ ಶಿಕ್ಷೆ ಆಗಲೇಬೇಕು ಅಂತ ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment