newsfirstkannada.com

BREAKING: ಸಂಗಮಕ್ಕೆ ಬಿದ್ದು ಐವರು ವಿದ್ಯಾರ್ಥಿಗಳು ದಾರುಣ ಸಾವು

Share :

Published April 29, 2024 at 5:01pm

Update April 29, 2024 at 5:06pm

    3 ಯುವತಿಯರು, ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

    ಮೇಕೆದಾಟು ಬಳಿಯ ಸಂಗಮದ ಕಾವೇರಿ ನದಿಯಲ್ಲಿ ಘಟನೆ

    ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಸಾತನೂರು ಪೊಲೀಸರು

ರಾಮನಗರ: ಪ್ರವಾಸಕ್ಕೆಂದು ಹೋಗಿದ್ದ ಐವರು ವಿದ್ಯಾರ್ಥಿಗಳು ನೀರುಪಾಲಾಗಿರೋ ಘಟನೆ ಕನಕಪುರ ತಾಲೂಕಿನ ಮೇಕೆದಾಟು ಬಳಿಯ ಸಂಗಮದ ಕಾವೇರಿ ನದಿಯಲ್ಲಿ ನಡೆದಿದೆ. ಹರ್ಷಿತ, ಅಭಿಷೇಕ್, ತೇಜಸ್, ವರ್ಷ, ಸ್ನೇಹ ಮೃತ ವಿದ್ಯಾರ್ಥಿಗಳು.

ಇದನ್ನೂ ಓದಿ: ಬಿಸಿಲಲ್ಲಿ ತಿರುಗಾಡೋ ಜನರೇ ಎಚ್ಚರ! ಚೂರು ಯಾಮಾರಿದ್ರೂ ಈ ರೋಗಗಳು ಗ್ಯಾರಂಟಿ!

ಮೃತ ವಿದ್ಯಾರ್ಥಿಗಳು ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಮೂವರು ಯುವತಿಯರು ಹಾಗೂ ಇಬ್ಬರು ಯುವಕರು ಪ್ರವಾಸಕ್ಕೆಂದು ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಐದು ವಿದ್ಯಾರ್ಥಿಗಳು ಮಧ್ಯಾಹ್ನದ ಸಮಯದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದರು. ಇದೇ ವೇಳೆ ನೀರಿನ ಸುಳಿಯಲ್ಲಿ ಸಿಲುಕಿ ಐವರು ಸಾವನ್ನಪ್ಪಿದ್ದಾರೆ.

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸಾತನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಮೃತ ವಿದ್ಯಾರ್ಥಿಗಳ ಮೃತದೇಹದವನ್ನು ಪೊಲೀಸರು ಹೊರತೆಗೆದಿದ್ದಾರೆ. ಮೃತ ವಿದ್ಯಾರ್ಥಿಗಳ ಮಾಹಿತಿ ಪತ್ತೆ ಹಚ್ಚುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಸಂಗಮಕ್ಕೆ ಬಿದ್ದು ಐವರು ವಿದ್ಯಾರ್ಥಿಗಳು ದಾರುಣ ಸಾವು

https://newsfirstlive.com/wp-content/uploads/2024/04/death33.jpg

Load More