/newsfirstlive-kannada/media/post_attachments/wp-content/uploads/2024/11/Fake-Cab-Driver.jpg)
ಏರ್​ಪೋರ್ಟ್​ನಲ್ಲಿ ಓಲಾ ರೀತಿಯ ಕ್ಯಾಬ್​ಗಳನ್ನು ಕಣ್ಣು ಮುಚ್ಚಿಕೊಂಡು ಏರುವ ಮುನ್ನ ಸ್ವಲ್ಪ ಎಚ್ಚರಿಕೆ ಇರಲಿ. ನಕಲಿ ಓಲಾ ಕ್ಯಾಬ್ ಚಾಲಕರು ಈಗ ಬೆಂಗಳೂರಿನಲ್ಲಿ ಹರಿದಾಡುತ್ತಿದ್ದಾರೆ. ದುಬಾರಿ ಶುಲ್ಕಕ್ಕೆ ಬೇಡಿಕೆಯಿಟ್ಟು, ಯುವತಿಯರೊಂದಿಗೆ ಅನುಚಿತ ವರ್ತನೆ ತೋರಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ತನ್ನ ಸಮಯಪ್ರಜ್ಞೆಯಿಂದಾಗಿ ಯುವತಿ ಆ ದುರಳನ ಕೈಯಿಂದ ಬಚಾವಾಗಿ ಬಂದಿದ್ದಾಳೆ. ನವೆಂಬರ್ 8 ರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಷ್ಟಕ್ಕೂ ನವೆಂಬರ್ 8ರ ರಾತ್ರಿ ನಡೆದಿದ್ದು ಏನು
ನವೆಂಬರ್ 8ರ ರಾತ್ರಿ 10.30ರ ಸುಮಾರಿಗೆ ಯುವತಿಯೊಬ್ಬಳು ಓಲಾ ಕ್ಯಾಬ್​ನ್ನು ಬುಕ್ ಮಾಡಿರುತ್ತಾರೆ. ಯುವತಿ ಬುಕ್ ಮಾಡಿದ್ದ ಓಲಾ ಕ್ಯಾಬ್ ಅನ್ನುವಂತೆ ಬಿಂಬಿಸಿಕೊಂಡು ಬಂದ ಒಬ್ಬ ಚಾಲಕ ಆಕೆಯನ್ನು ಕಾರ್​ನಲ್ಲಿ ಹತ್ತಿಸಿಕೊಂಡು ಹೊರಟಿದ್ದಾನೆ. ಆದ್ರೆ ಕಾರು ಹತ್ತಿದಾಗ ಒಟಿಪಿ ಕೇಳದ ಕಾರಣ ಯುವತಿಗೆ ಅನುಮಾನ ಬಂದಿದೆ. ಅಧಿಕೃತ ಅಪ್ಲಿಕೇಷನ್​ನಲ್ಲಿ ಡೆಸ್ಟಿನೇಷನ್ ಮ್ಯಾಪ್ ನಮೂದಿಸುವಂತೆ ಸೂಚನೆ ನೀಡಿದ್ದಾಳೆ. ಕಾರು ಸ್ವಲ್ಪ ದೂರ ಹೋಗುತ್ತಿದ್ದಂತೆ ಚಾಲಕ ತನ್ನ ವರಸೆಯನ್ನು ಶುರು ಮಾಡಿದ್ದಾನೆ
ಕಾರು ಏರ್​ಪೋರ್ಟ್​ನಿಂದ ಕೊಂಚ ದೂರ ಹೋಗುತ್ತಿದ್ದಂತೆ ಚಾಲಕ ಯುವತಿಗೆ ಹೆಚ್ಚುವರಿ ಶುಲ್ಕ ನೀಡಬೇಕು ಎಂದು ಪೀಡಿಸಲು ಆರಂಭಿಸಿದ್ದಾನೆ. ಅವನ ಮಾತಿಗೆ ನಿರಾಕರಿಸಿದ ಯುವತಿ ಬೇರೊಂದು ವಾಹನಕ್ಕೆ ಬುಕ್ಕಿಂಗ್ ವರ್ಗಾಯಿಸುವಂತೆ ಹೇಳಿದ್ದಾಳೆ.ಅದಕ್ಕೂ ಕೂಡ ಆತ ಒಪ್ಪಿಲ್ಲ. ಆಗ ಮರಳಿ ನನ್ನನ್ನು ಏರ್​ಪೋರ್ಟ್​ಗೆ ಕರೆದೊಯ್ದು ಬಿಡು ಎಂದು ಸೂಚಿಸಿದ್ದಾಳೆ ಯುವತಿ. ಅದಕ್ಕೂ ಒಪ್ಪದ ಚಾಲಕ ಬಂಕ್​ನಲ್ಲಿ ಕಾರು ನಿಲ್ಲಿಸಿ ಇಂಧನಕ್ಕಾಗಿ 500 ರೂಪಾಯಿ ಕೊಡುವಂತೆ ಬೇಡಿಕೆಯಿಟ್ಟಿದದ್ದಾನೆ.
ಸಮಯ ಪ್ರಜ್ಞೆ ಮೆರೆದ ಯುವತಿ, ಅಪಾಯದಿಂದ ಪಾರು
ಯಾವಾಗ ಚಾಲಕನ ವರ್ತನೆಯಲ್ಲಿ ವಿಪರೀತ ಬದಲಾವಣೆಯಾಗತೊಡಗಿತೊ ಕೂಡಲೇ ಯುವತಿಗೆ ಅಪಾಯದ ಅರಿವಾಗಿದೆ. ಸಮಯಪ್ರಜ್ಞೆಯಿಂದ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾಳೆ. ತಾವಿರುವ ಸ್ಥಳದ ಬಗ್ಗೆ ಪೊಲೀಸರಿಗೂ ಹಾಗೂ ಕುಟುಂಬದ ಸದಸ್ಯರಿಗೂ ಲೋಕೆಷನ್ ಕಳುಹಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/Fake-Cab-Driver-1.jpg)
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಯುವತಿ ತನ್ನ ಅನುಭವವನ್ನು ಬರೆದುಕೊಂಡಿದ್ದಾರೆ. ನಕಲಿ ಕ್ಯಾಬ್ ಚಾಲಕನಿಂದ ನಾನು ಬಹುತೇಕ ಅಪಹರಣಗೊಂಡಿದ್ದೆ. ಅತ್ಯಾಚಾರ, ಸುಲಿಗೆ ಹಾಗೂ ಹಲ್ಲೆಗೊಳಗಾಗುವ ಸಾಧ್ಯತೆ ಇತ್ತು . 112ಕ್ಕೆ ಕರೆ ಮಾಡದಿದ್ದರೆ ಇದನ್ನು ಬರೆಯಲು ಬಹುಶಃ ನಾನಿರುತ್ತಿರಲಿಲ್ಲವೇನೋ ಎಂದು ತನ್ನ ಬದುಕಿನ ಕರಾಳ ಅನುಭವವನ್ನು ತೆರೆದಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us