/newsfirstlive-kannada/media/post_attachments/wp-content/uploads/2025/05/BNG_RAIN-3.jpg)
ಬೆಂಗಳೂರು: ಉದ್ಯಾನನಗರಿಯಲ್ಲಿ ಮಂಗಳವಾರ (ಏ.13)ದಂದು ಭಾರೀ ಗಾಳಿ, ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದರಿಂದ ಅವಾಂತರಗಳು ಸಂಭವಿಸಿವೆ. ಅನೇಕ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿವೆ. ರಸ್ತೆಗಳು ಜಲಾವೃತಗೊಂಡರೆ, ಸಿಲಿಕಾನ್ ಸಿಟಿಯಲ್ಲಿ ಅಲ್ಲಾಲ್ಲಿ ಮರಗಳು ಧರೆಗುರುಳಿವೆ. ಇದರಿಂದ ಸಾರ್ವಜನಿಕರು ಪರದಾಡಿದ್ದಾರೆ.
ಹೆಚ್‌ಬಿಆರ್ ಲೇಔಟ್‌ನಲ್ಲಿ ಬೃಹತ್ ಮರಗಳು ಧರೆಗುರುಳಿವೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ವಾಹನಗಳು ಜಖಂ ಆಗಿದೆ. ಯಲಚೇನಹಳ್ಳಿ ಬಳಿ ಮೂರು ಮರಗಳು ಬಿದ್ದ ಪರಿಣಾಮ ನಾಲ್ಕು ಕಾರುಗಳು ಜಖಂಗೊಂಡಿವೆ.
ಬೆಂಗಳೂರಿನ ಕೆ.ಆರ್ ಮಾರ್ಕೆಟ್, ಹೆಬ್ಬಾಳ, ಮೆಖ್ರೀ ಸರ್ಕಲ್, ಮೆಜೆಸ್ಟಿಕ್, ಶಾಂತಿನಗರ, ಬಸವನಗುಡಿ, ಮಲ್ಲೇಶ್ವರಂ, ಶಿವನಾಂದ, ಆರ್ಟಿ ನಗರ, ಪ್ಯಾಲೇಸ್ ಗುಟ್ಟಹಳ್ಳಿ, ವಿಧಾನಸೌಧ ಸೇರಿದಂತೆ ಇಡೀ ನಗರದ್ಯಾಂತ ವರುಣ ಆರ್ಭಟಿಸಿದ್ದಾನೆ. ಇದರಿಂದ ರಸ್ತೆಗಳೆಲ್ಲಾ ಜಲಾವೃತ ಆಗಿದ್ದವು.
ಬೆಂಗಳೂರಿನ ಇಂದಿರಾನಗರದಲ್ಲಿ ಭಾರೀ ಮಳೆ ಜೊತೆಗೆ ಗಾಳಿ ಬೀಸಿದ್ದು, ಎಸ್‌ವಿ ರಸ್ತೆ ಮೆಟ್ರೋ ಬಳಿ ಇರುವ ಓಎಂಆರ್ ರಸ್ತೆಯ ಮೇಲೆ ಮರದ ಕೊಂಬೆಗಳು ಬಿದ್ದಿವೆ. 80 ಫೀಟ್ ರೋಡ್ನಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆ ಆಗಿತ್ತು. ಇನ್ನು ಬಿಬಿಎಂಪಿಯ 8 ವಲಯದಲ್ಲಿ 35ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. 120ಕ್ಕೂ ಹೆಚ್ಚು ಮರದ ಕೊಂಬೆಗಳು ಮುರಿದು ಬಿದ್ದಿವೆ.
ಗಾರ್ಡನ್ ಸಿಟಿಯ ಬನ್ನೇರುಘಟ್ಟ ಮುಖ್ಯ ರಸ್ತೆಯ ಬಿಳೇಕಹಳ್ಳಿಯಿಂದ ತಿಲಕ್‌ನಗರದವರೆಗೆ ಹೋಗುವ ರಸ್ತೆಯು ಮಳೆ ಸಂದರ್ಭದಲ್ಲಿ ಕಂಡು ಬಂದಿದ್ದು ಹೀಗೆ.
ಇದನ್ನೂ ಓದಿ: ಕರ್ನಾಟಕಕ್ಕೆ ಸಿಡಿಲ ಆಘಾತ.. ಒಂದೇ ದಿನ 7 ಮಂದಿ ಜೀವ ತೆಗೆದ ಬೆಳ್ಮಿಂಚು
'
ಬೆಂಗಳೂರಿನ ಕಲ್ಯಾಣನಗರದಲ್ಲಿ ಪಾರ್ಕಿಂಗ್ ಮಾಡಿದ್ದ ಕಾರಿನ ಮೇಲೆ ಬೃಹತ್ ಮರಬೊಂದು ಉರುಳಿ ಬಿದ್ದಿದೆ. ಇದರಿಂದ ಕಾರಿಗೆ ಹಾನಿಯಾಗಿದ್ದು ಮಾಲೀಕ ಬೇಸರಗೊಂಡಿದ್ದಾರೆ.
ಸಿಲಿಕಾನ್ ಸಿಟಿಯ ಮಾರತ್ಹಳ್ಳಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ರಸ್ತೆಯೇ ಕರೆಯಂತೆ ಆಗಿದೆ. ಇನ್ನು ಪರ್ಲ್ ಪ್ಲಾಜಾ ಬಳಿ ನಿಂತಿರುವ ಮಳೆನೀರಿನಲ್ಲೇ ಕಾರು ಹೋಗುತ್ತಿರುವ ದೃಶ್ಯ ಕಾಣಬಹುದು.
ನಿನ್ನೆ ಸುರಿದ ಭಾರೀ ಮಳೆಗೆ ಹೆಚ್‌ಬಿಆರ್ ಲೇಔಟ್ನ ರಸ್ತೆಯೊಂದು ಕರೆಯಂತೆ ಆಗಿದೆ. ರಸ್ತೆ ತಗ್ಗು ಇದ್ದಿದ್ದರಿಂದ ಮಳೆ ನೀರು ಶೇಖರಣೆ ಆಗಿದೆ.
ಧಾರಾಕಾರ ಮಳೆಗೆ ರಸ್ತೆ ಬದಿ ಇದ್ದ ಬೃಹತ್ ಮರವೊಂದು ವಾಲಿದೆ. ಈ ದೃಶ್ಯವು ಬೆಂಗಳೂರಿನ ರೇಸ್ ಕೋರ್ಸ್ಬಳಿ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಮಳೆ ಜೋರಾಗಿ ಬಂದಿದ್ದರಿಂದ ಹಲವೆಡೆ ಮರಗಳು ಧರೆಗುರುಳಿವೆ. ಇದು ಕಮ್ಮನಹಳ್ಳಿ ಮ್ಯಾನ್ ರಸ್ತೆಯಲ್ಲಿ ಕಂಡು ಬಂದ ದೃಶ್ಯಗಳು
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ