/newsfirstlive-kannada/media/post_attachments/wp-content/uploads/2025/06/Zindagified4.jpg)
ಸಿಲಿಕಾನ್​ ಸಿಟಿ ಬೆಂಗಳೂರಿನ ವಾತಾವರಣಕ್ಕೆ ಬೇಸತ್ತು ಟೆಕ್ಕಿ ದಂಪತಿ ಊರು ಬಿಟ್ಟಿದ್ದಾರೆ. ಇಲ್ಲಿನ ಗಾಳಿ ಸೇಫ್ ಅಲ್ಲ ಅಂತ ವಿಡಿಯೋ ಮಾಡುವ ಮೂಲಕ ಬೆಂಗಳೂರು ತೊರೆದಿದ್ದಾರೆ. ಕೇರಳ ಮೂಲದ ಅಶ್ವಿನ್ ಮತ್ತು ಅಪರ್ಣ ದಂಪತಿ ಕಳೆದ 2 ವರ್ಷಗಳಿಂದ ಬೆಂಗಳೂರಲ್ಲಿ ವಾಸವಿದ್ರು. ಆದ್ರೀಗ ಬೆಂಗಳೂರಿನ ಕಲುಷಿತ ಗಾಳಿಯಿಂದ ನಮ್ಮ ಆರೋಗ್ಯ ಹಾಳಾಗಿದೆ. ಬೆಂಗಳೂರನ್ನ ಇಷ್ಟಪಟ್ಟರೂ ಈಗ ದ್ವೇಷಿಸುವಷ್ಟು ಬದಲಾಗಿದೆ ಅಂತ ವಿಡಿಯೋ ಮಾಡಿ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:‘ಬೆಂಗಳೂರು ಸಹವಾಸ ಸಾಕ್ರಿ’ ಎಂದ ಉದ್ಯಮಿ ದಂಪತಿ.. ಇವರ ನಿರ್ಧಾರಕ್ಕೆ ನೀವೂ ಗಾಬರಿ ಆಗ್ತೀರಿ!
/newsfirstlive-kannada/media/post_attachments/wp-content/uploads/2025/06/Zindagified.jpg)
ಇದೀಗ ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಇದ್ದುಕೊಂಡು ಕೊನೆಗೆ ಇಲ್ಲಿನ ವಾತಾವರಣ ಚೆನ್ನಾಗಿಲ್ಲ ಎಂದು ಟೀಕಿಸಿದ ದಂಪತಿಗೆ ನೆಟ್ಟಿಗರು ತರಾಟೆ ತೆಗದುಕೊಂಡಿದ್ದಾರೆ. ನೀವು ಹೋಗಿದ್ದು ತುಂಬಾ ಒಳ್ಳೆಯದಾಯ್ತು, ನಿಮ್ಮ ಥರಾನೇ ತುಂಬಾ ಜನ ಇದ್ದಾರೆ ಅವರನ್ನು ಕರ್ಕೊಂಡು ಹೋಗಿ, ನೀವು ಸಾಕಷ್ಟು ಜನಕ್ಕೆ ಸ್ಪೂರ್ತಿ, ಮತ್ತೆ ಬರಲೇಬೇಡಿ ಅಂತ ವ್ಯಂಗ್ಯವಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/06/Zindagified3.jpg)
ಏನಿದು ಸ್ಟೋರಿ..?
ಎರಡು ದಿನಗಳ ಹಿಂದೆಯಷ್ಟೇ ಉದ್ಯಮಿ ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಬೆಂಗಳೂರಿಗೆ ಸಂಬಂಧಪಟ್ಟ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲೇ ವಾಸವಾಗಿದ್ದ ದಂಪತಿ ಇಲ್ಲಿನ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದೇ ತಮ್ಮ ಸ್ಥಳಾಂತರಕ್ಕೆ ಕಾರಣ ಅಂತ ಹೇಳಿದ್ದು ಸಿಲಿಕಾನ್​ ಸಿಟಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಜೋಗನ ಹಕ್ಕಲು ಜಲಪಾತ ವೀಕ್ಷಣೆಗೆ ಹೋದಾಗ ಘೋರ ದುರಂತ.. ಕಾಲು ಜಾರಿ ಯುವಕ ಕಣ್ಮರೆ
27 ವರ್ಷದ ಅಶ್ವಿನ್ ಮತ್ತು ಅಪರ್ಣ ಇಬ್ಬರೂ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮದೇ ಆದ ವ್ಯವಹಾರವನ್ನು ಸಹ ನಡೆಸುತ್ತಿದ್ದರು, ಮತ್ತು ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಜೀವಿಸಿದ್ದಾರೆ. ನೀವು ನಮ್ಮನ್ನು ದ್ವೇಷಿಸಬಹುದು, ಆದರೆ ಬೆಂಗಳೂರು ನಿಧಾನವಾಗಿ ನಮ್ಮನ್ನು ಕೊಲ್ಲುತ್ತಿದೆ ಎಂದು ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನ ಹವಾಮಾನ, ಅದರ ವಾತಾವರಣದಿಂದ ನಾವು ಅನಾರೋಗ್ಯಕ್ಕೆ ಒಳಗಾದೆವು. ನನಗೆ ಉಸಿರಾಟದ ತೊಂದರೆ, ಅಲರ್ಜಿ ಮತ್ತು ಶೀತ ಕೂಡ ಬರದ ನನಗೆ ಯಾವಾಗಲೂ ಕೆಮ್ಮು ಮತ್ತು ಸೀನುವಿಕೆಯಿಂದ ಬಳಲುತ್ತಿದ್ದೆ. ಪ್ರತಿದಿನ ಆರೋಗ್ಯಕರವಾಗಿ ಇರಲು ವ್ಯಾಯಾಮ ಮಾಡುವ ಮೂಲಕ ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದ್ದೆವು. ಆದ್ರೆ ಕೊನೆಗೆ ಬೆಂಗಳೂರಿನ ಗಾಳಿಯ ಗುಣಮಟ್ಟವು ನಮ್ಮ ಅನಾರೋಗ್ಯಕ್ಕೆ ಮೂಲ ಕಾರಣವಾಗಿದೆ ಎಂದು ದಂಪತಿ ವಿಡಿಯೋದಲ್ಲಿ ಹೇಳಿದ್ದಾರೆ.
View this post on Instagram
ಇನ್ನೂ ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದನ್ನೂ ನೋಡಿದ ನೆಟ್ಟಿಗರು ದಂಪತಿಗೆ ಕಾಮೆಂಟ್ಸ್​ಗಳ ಮೂಲಕ ತರಾಟೆ ತೆಗೆದುಕೊಂಡಿದ್ದಾರೆ. ನೀವು ಹೋಗಿದ್ದು ತುಂಬಾ ಒಳ್ಳೆಯದಾಯ್ತು, ನಿಮ್ಮ ಥರಾನೇ ತುಂಬಾ ಜನ ಇದ್ದಾರೆ ಅವರನ್ನು ಕರ್ಕೊಂಡು ಹೋಗಿ, ನೀವು ಸಾಕಷ್ಟು ಜನಕ್ಕೆ ಸ್ಪೂರ್ತಿ, ಮತ್ತೆ ಬರಲೇಬೇಡಿ ಅಂತ ವ್ಯಂಗ್ಯವಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us