ಮನೆ ಪಕ್ಕದಲ್ಲಿ ಗುಂಡಿ ಇದ್ರೆ ಹುಷಾರ್​..! ಚೆನ್ನಾಗಿದ್ದ ಬಿಲ್ಡಿಂಗ್​ನ ಬೇಸ್​ಮೆಂಟ್ ಏಕಾಏಕಿ ವಾಲಿದ್ದಕ್ಕೆ ಡೆಮಾಲಿಷನ್

author-image
Bheemappa
Updated On
ಮನೆ ಪಕ್ಕದಲ್ಲಿ ಗುಂಡಿ ಇದ್ರೆ ಹುಷಾರ್​..! ಚೆನ್ನಾಗಿದ್ದ ಬಿಲ್ಡಿಂಗ್​ನ ಬೇಸ್​ಮೆಂಟ್ ಏಕಾಏಕಿ ವಾಲಿದ್ದಕ್ಕೆ ಡೆಮಾಲಿಷನ್
Advertisment
  • ಬಿಲ್ಡಿಂಗ್ ಬೇಸ್​ಮೆಂಟ್ ಕುಸಿಯುವಾಗ ಒಳಗೆ 6 ಜನರು ಇದ್ದರು
  • ಕಟ್ಟಡದ ಪಕ್ಕದಲ್ಲಿ ಅವೈಜ್ಞಾನಿಕವಾಗಿ ಗುಂಡಿ ತೋಡಿದ್ದೆ ಕಾರಣನಾ?
  • ಬಿಲ್ಡಿಂಗ್ ಕುಸಿದ ರಭಸಕ್ಕೆ ಬೇಸ್​ಮೆಂಟ್​ನಲ್ಲಿದ್ದ ವಾಹನಗಳು ಜಖಂ

ಬಾಬುಸಾಬ್​ಪಾಳ್ಯ ದುರಂತ. 8 ಮಂದಿ ಕಾರ್ಮಿಕರ ಸಜೀವ ದಹನ.. ಈ ಘಟನೆ ಇನ್ನು ಸಿಲಿಕಾನ್ ಸಿಟಿ ಮಂದಿಯ ಕಣ್ಣಿಗೆ ಕಟ್ಟಿದಾಗಿದೆ. ಅವರ ಆರ್ತನಾದ ಇನ್ನೂ ಕಿವಿಯಲ್ಲಿ ಗುಯ್​ಗುಡ್ತಿದೆ. ಅದಾಗಲೇ, ಮತ್ತೊಂದು ದುರಂತ ನಡೆದೋಗಿದೆ. ಏಕಾಏಕಿ ಬಿಲ್ಡಿಂಗ್​ನ ಬೇಸ್​ಮೆಂಟ್ ವಾಲಿ, ಸ್ಥಳದಲ್ಲಿ ಆತಂಕದ ಕಾರ್ಮೋಡ ಆವರಿಸಿತ್ತು. ಇದೀಗ ಎರಡಂತಸ್ತಿನ ಕಟ್ಟಡವನ್ನ ಡೆಮಾಲಿಷನ್ ಮಾಡಲಾಗಿದೆ.

publive-image

ಬೆಂಗಳೂರಿನ ಜೀವನ್ ಭೀಮಾ ನಗರದ ತಿಪ್ಪಸಂದ್ರದ ಆಂಜನೇಯ ದೇವಸ್ಥಾನದ ಬಳಿ ನಿನ್ನೆ ಸಂಜೆ 4.15ರ ಸುಮಾರಿಗೆ ನೋಡ ನೋಡ್ತಿದ್ದಂತೆಯೇ ಬಿಲ್ಡಿಂಗ್​ ಒಂದರ ಬೇಸ್​ಮೆಂಟ್ ದಿಢೀರ್ ಅಂತ ಕುಸಿದುಬಿಟ್ಟಿದೆ. ಪರಿಣಾಮ ಈ 2 ಅಂತಿಸ್ತಿನ ಕಟ್ಟಡ ಸಂಪೂರ್ಣ ಒಂದು ಬದಿಗೆ ವಾಲಿ ನೆಲಕ್ಕೆ ಕುಸಿದು ಬಿಟ್ಟಿದೆ. ತಕ್ಷಣ ಮನೆಯಲ್ಲಿದ್ದವರೆಲ್ಲಾ ಹೆದರಿ ಓಡೋಡಿ ಆಚೆ ಬಂದಿದ್ದಾರೆ. ಇನ್ನು, ಕಟ್ಟಡ ಕುಸಿದ ರಭಸಕ್ಕೆ ಬೇಸ್​ಮೆಂಟ್​​ನಲ್ಲಿದ್ದ ಐದಕ್ಕೂ ಹೆಚ್ಚು ಬೈಕ್​ಗಳು ಸಂಪೂರ್ಣ ಜಖಂ ಆಗಿವೆ.

ಗುಂಡಿ ತೋಡಿದ್ದೆ ದುರಂತಕ್ಕೆ ಕಾರಣ

ಸದ್ಯ ಈ ಘಟನೆಯಾಗ್ತಿದ್ದಂತೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಕೈಗೊಂಡರು. ನೀವು ಈ ದೃಶ್ಯಗಳನ್ನ ನೋಡಿದ್ರೆ, ಈ ಬಿಲ್ಡಿಂಗ್​​ನ ಬೇಸ್​ಮೆಂಟ್ ಹೆಚ್ಚು ಹಾನಿಯಾಗಿರೋದು ಸ್ಪಷ್ಟವಾಗಿ ಕಾಣಿಸುತ್ತೆ. ಅಲ್ಲಿ ಹಿತ್ತಾಳೆ ವಸ್ತುಗಳನ್ನ ಮಾರಾಟ ಮಾಡಲಾಗುತ್ತಿತ್ತು. ಇನ್ನು, ಕಟ್ಟಡದ ಪಕ್ಕದಲ್ಲಿ ಅವೈಜ್ಞಾನಿಕವಾಗಿ ಗುಂಡಿ ತೋಡಿದ್ದೆ ದುರಂತಕ್ಕೆ ಕಾರಣ ಅನ್ನೋದು ಮನೆ ಮಾಲೀಕರ ಮಾತು.

ಇದನ್ನೂ ಓದಿ:ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಲಾಭಗಳಿವೆ: ನಿಮಗೆ ಗೊತ್ತಿರದ ವಿಷಯ ಇಲ್ಲಿವೆ!

publive-image
ಸದ್ಯ ಎರಡೂ ಹಿಟಾಚಿ ಮೂಲಕ 3 ಅಂತಸ್ತಿನ ಕಟ್ಟಡ ತೆರವು ಮಾಡಲಾಗಿದೆ. ಅಕ್ಕಪಕ್ಕದ ಕಟ್ಟಡಗಳ ಜನರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಇಡೀ ಬಿಲ್ಡಿಂಗ್‌ನ ಡೆಮಾಲಿಷನ್ ಮಾಡಲಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಾಗ ಈ ಬಿಲ್ಡಿಂಗ್​ನಲ್ಲಿ ಒಟ್ಟು 6 ಮಂದಿ ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್, ಎಲ್ಲರೂ ಆಪಾಯದಿಂದ ಪಾರಾಗಿದ್ದಾರೆ ಅನ್ನೋದೇ ಸಮಾಧಾನ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment