/newsfirstlive-kannada/media/post_attachments/wp-content/uploads/2024/04/BNG-LOVERS.jpg)
ಬೆಂಗಳೂರಿನ ಪಾರ್ಕ್​​ನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಯುವತಿಯನ್ನ ಹತ್ಯೆಗೈದ ಪ್ರಿಯಕರ ಯುವತಿಯ ತಾಯಿಯಿಂದಲೇ ಕೊಲೆಯಾಗಿದ್ದ. ಈ ಸುದ್ದಿ ಇಡೀ ರಾಜಧಾನಿಯನ್ನ ದಂಗು ಬಡಿಸಿತ್ತು. ಸದ್ಯ ಎರಡು ಕಡೆಯಿಂದಲೂ ದೂರು, ಪ್ರತಿದೂರು ದಾಖಲಾಗಿದೆ.
ಇಬ್ಬರ ಜೀವ ತೆಗೆದ ‘ಆ ಹತ್ತು ನಿಮಿಷ’ದ ಭೇಟಿ!
ನಿನ್ನೆ ಹಾಡಹಗಲೇ ಬೆಂಗಳೂರಿನ ಸಾರಕ್ಕಿ ಗೇಟ್ ಬಳಿ ನಡೆದಿದ್ದ ರಣಭೀಕರ ಜೋಡಿ ಕೊಲೆ ಪ್ರಕರಣಕ್ಕೆ ಮತ್ತೊಂದು ರೋಚಕ ಎಳೆ ಸಿಕ್ಕಿದೆ. ಕೊನೆಯ ಸಾರಿ ನಾವಿಬ್ಬರು ಭೇಟಿ ಮಾಡೋಣ ಅಂತ ಕರೆದಿದ್ದ ಸುರೇಶ್​.. ಆ 10 ನಿಮಿಷದ ಕೊನೆಯ ಭೇಟಿ ಅಂತ್ಯವಾಗಿದ್ದು ಇಬ್ಬರ ಭೀಕರ ಹತ್ಯೆಯಲ್ಲಿ.. ಈ ಡಬಲ್ ಮರ್ಡರ್​ ಸುತ್ತ ಒಂದಷ್ಟು ಸತ್ಯ ಸಂಗತಿಗಳು ತೆರೆದುಕೊಂಡಿವೆ..
ಇದನ್ನೂ ಓದಿ:ಇವರು ಆಡಿದ್ದು ಕೇವಲ ಎರಡು ಟಿ-20I ಪಂದ್ಯ ಮಾತ್ರ..! RCBಯಲ್ಲಿ ಕೊಹ್ಲಿ, ಮ್ಯಾಕ್ಸಿಗೆ ಏನ್ ಟಿಪ್ಸ್ ಕೊಟ್ಟಾರು..?
‘ಜೋಡಿ’ ಕೊಲೆಯ ಸುತ್ತ!
ಅನುಷಾ ಹಾಗೂ ಸುರೇಶ್​ ಇಬ್ಬರಿಗೂ ಐದು ವರ್ಷಗಳಿಂದ ಪರಿಚಯವಿತ್ತು. ಸುರೇಶ್ ಗೊರಗುಂಟೆಪಾಳ್ಯ ನಿವಾಸಿ, ಇನ್ನು ಅನುಷಾ ಶಾಕಾಂಬರಿ ನಗರ ನಿವಾಸಿಯಾಗಿದ್ದು ಈ ಹಿಂದೆ ಇಬ್ಬರು ಒಟ್ಟಿಗೆ ಕೆಲಸ ಕೂಡ ಮಾಡ್ತಿದ್ದರು. ನನಗೆ ಮದುವೆಯಾಗಿಲ್ಲ ಅಂತ ಸುಳ್ಳು ಹೇಳಿ ಪ್ರೀತಿ ಮಾಡಿದ್ದ ಈ ಸುರೇಶ್.. ಆದ್ರೆ, ಕಳೆದ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್​ನ ಅಸಲಿ ಬಣ್ಣ ಗೊತ್ತಾಗಿದೆ. ಹೀಗಾಗಿ, ಸುರೇಶ್​ನಿಂದ ಅನುಷಾ ಅಂತರ ಕಾಯ್ದುಕೊಂಡಿದ್ದಳು. ಆದ್ರೆ, ಸುರೇಶ್ ಮಾತ್ರ ಆಕೆಗೆ ಕಾಟ ಕೊಡೋದನ್ನ ನಿಲ್ಲಿಸಿರಲಿಲ್ಲ.. ಹೀಗಾಗಿ, ನಿನ್ನೆ ಬೆಳಗ್ಗೆ ಅನುಷಾ ಜೆ.ಪಿ.ನಗರದ ಠಾಣೆಗೆ ಭೇಟಿ ನೀಡಿ ಪೊಲೀಸರಿಂದ ವಾರ್ನ್​ ಮಾಡಿಸಿದ್ದಾಳೆ. ಅದಲ್ಲದೇ, ಸುರೇಶ್ ಆಕೆಯ ತಂಟೆಗೆ ಹೋಗಲ್ಲ ಅಂತಾ ಮುಚ್ಚಳಿಗೆ ಪತ್ರ ಬರೆದುಕೊಟ್ಟಿದ್ದಾನೆ. ಇದಾದ ಮೇಲೆ ಪೊಲೀಸ್ ಠಾಣೆಯಿಂದ ಹೊರಬಂದ ಮೇಲೆ ಸುರೇಶ್​ ಬಣ್ಣ ಬಣ್ಣದ ಮಾತಾಡಿದ್ದಾನೆ.
ಸುರೇಶ್ : ಅನು.. ಪ್ಲೀಸ್ ಕೊನೆಯದಾಗಿ ಒಂದ್ಸಾರಿ ಭೇಟಿ ಮಾಡಿ ಮಾತಾಡೋಣ.. ಲಾಸ್ಟ್​ ಟೈಮ್​
ಅನುಷಾ : ನೋ.. ಸುರೇಶ್ ಪ್ಲೀಸ್​ ಲೀವ್​ ಮಿ.. ಐ ಡೋಂಟ್​ ಲೈಕ್​ ಯು..
ಸುರೇಶ್ : ಪ್ಲೀಸ್​ ಇವತ್ತೆ ಲಾಸ್ಟ್.. ಟೆನ್​ ಮಿನಿಟ್ಸ್​ ಮಾತಾಡೋಣ..
ಅನುಷಾ : ಸರಿ.. ಪಾರ್ಕ್​ಗೆ ಹೋಗೋಣ.. ಇರು ಅಮ್ಮಾ ಕಾಲ್ ಮಾಡ್ತಿದ್ದಾರೆ.
ಬಳಿಕ ಸಾರಕ್ಕಿ ಮಾರ್ಕೆಟ್​ ಬಳಿಯ ಪಾರ್ಕ್​ಗೆ ಹೋಗಿದ್ದಾರೆ.. ಅದ್ಯಾವಾಗ ಅನುಷಾ ಇನ್ಮುಂದೆ ನನಗೆ ಸಿಗೋದಿಲ್ಲಾ ಅಂತಾ ಕನ್ಫರ್ಮ್​ ಆಯ್ತೋ.. ಸಿಟ್ಟಿಗೆದ್ದ ಸುರೇಶ ತಾನೇ ತಂದಿದ್ದ ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ. ಈ ವೇಳೆ ಪಾರ್ಕ್​ಗೆ ಎಂಟ್ರಿ ಕೊಟ್ಟ ಅನುಷಾ ತಾಯಿ ಗೀತಾ ನನ್ನ ಮಗಳಿಗೆ ಏನೂ ಮಾಡಬೇಡ ಅಂತಾ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.. ಇಷ್ಟಾದ್ರೂ ಕೇಳದಿದ್ದಾಗ, ಅಲ್ಲೆ ಇದ್ದ ಸಿಮೆಂಟ್​ ಇಟ್ಟಿಗೆ ತೆಗೆದು ತಲೆ ಮೇಲೆ ಹಾಕಿದ್ದಾರೆ. ಬಳಿಕ ಸ್ಥಳದಲ್ಲೇ ಆತನೂ ಜೀವ ಬಿಟ್ಟಿದ್ದಾನೆ.
ಮೃತ ಸುರೇಶ್ ಪತ್ನಿ, ಅನುಷಾ ತಾಯಿಯಿಂದಲೂ ದೂರು
ಇದೀಗ ಜೆ.ಪಿ.ನಗರ ಪೊಲೀಸ್​ ಠಾಣೆಯಲ್ಲಿ ಕೌಂಟರ್​ ಕಂಪ್ಲೇಟ್​ ದಾಖಲಾಗಿದೆ.. ಮೃತ ಸುರೇಶ್ ಪತ್ನಿಯಿಂದ ಅನುಷಾ ತಾಯಿ ಮೇಲೆ ದೂರು ಕೊಟ್ಟಿದ್ರೆ, ಇತ್ತ ಮೃತ ಅನುಷಾ ತಾಯಿ ಸುರೇಶ್ ಮೇಲೆ ದೂರು ದಾಖಲಿಸಿದ್ದಾರೆ.. ಇದೀಗ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ, ಈ ಪ್ರೀತಿ.. ಪ್ರೇಮ.. ಸೇಡು ಇದೆಲ್ಲದರ ನಡುವೆ ಆ ಜೋಡಿ ಬೀದಿ ಹೆಣವಾಗಿದೆ.. ಮಗಳನ್ನು ಕಳೆದುಕೊಂಡ ತಾಯಿ ಕಂಬಿ ಎಣಿಸುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us