ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್​.. ಸಂಸದ ಪಿಸಿ ಮೋಹನ್ ಪ್ರಯತ್ನಕ್ಕೆ ಒಲಿದ ಫಲ

author-image
Bheemappa
Updated On
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್​.. ಸಂಸದ ಪಿಸಿ ಮೋಹನ್ ಪ್ರಯತ್ನಕ್ಕೆ ಒಲಿದ ಫಲ
Advertisment
  • ಪ್ರಯಾಣಿಕರಿಗೆ ಬಿಗ್ ಶಾಕ್ ಕೊಡಲು ಮುಂದಾಗಿದ್ದ ಮೆಟ್ರೋ ​
  • Namma Metroದ ಸಭೆಯಲ್ಲಿ ಏನೇನು ಚರ್ಚೆ ಮಾಡಿದ್ದರು?
  • ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದ ಸಂಸದ ಪಿಸಿ ಮೋಹನ್

ಬೆಂಗಳೂರು: ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್‌. ಸುದ್ದಿ ಏನೆಂದರೆ ಮೆಟ್ರೋ ಟ್ರೈನ್ ಟಿಕೆಟ್​ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಇತ್ತೀಚೆಗೆ ಹೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರ ಟಿಕೆಟ್ ದರ ಹೆಚ್ಚಳ ಮಾಡುವ ಕುರಿತು ಮಾಹಿತಿ ಕೇಳಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೆಟ್ರೋ ಟಿಕೆಟ್​ ದರ ಏರಿಕೆಯನ್ನು ತಡೆಹಿಡಿಯಲಾಗಿದೆ.

ಮೆಟ್ರೋ ಟಿಕೆಟ್​ ದರ ಏರಿಕೆ ಸಂಬಂಧ ಜನವರಿ 17 ರಂದು ದರ ನಿಗದಿ ಮಾಡುವ ಸಮಿತಿ ಸಭೆ ನಡೆಸಿತ್ತು. ಸಭೆಯಲ್ಲಿ ಶೇಕಡಾ 45 ರಷ್ಟು ದರ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ಮಾಡಲಾಗಿತ್ತು. ಇದನ್ನು ಫೆಬ್ರುವರಿ 1 ರಿಂದ ಜಾರಿಗೆ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದ ಸಂಸದ ಪಿಸಿ ಮೋಹನ್ ಅವರು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು.

publive-image

ಇದನ್ನೂ ಓದಿ: Maha Kumbh; ಕಾಲ್ತುಳಿತದಲ್ಲಿ 30 ಭಕ್ತರು ಇನ್ನಿಲ್ಲ.. ಸಂತ್ರಸ್ತರ ಕುಟುಂಬಸ್ಥರಿಗೆ ತಲಾ ₹25 ಲಕ್ಷ ಪರಿಹಾರ

ಸದ್ಯ ಈ ಸಂಬಂಧ ಬಿಎಂಆರ್​ಸಿಎಲ್ (ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌)ನಿಂದ ಕೇಂದ್ರ ಸರ್ಕಾರ ಮಾಹಿತಿ ಕೇಳಿದೆ. ಯಾವ ಮಾನದಂಡಗಳ ಆಧಾರದ ಮೇಲೆ ದರ ಹೆಚ್ಚಿಸುತ್ತಿದ್ದೀರಿ, ಯಾವ ಕಾರಣಕ್ಕೆ ದರ ಏರಿಕೆ ಮಾಡಲಾಗುತ್ತಿದೆ ಎಂದು ಅಧ್ಯಯನದ ವರದಿ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಕೇಳಿದೆ. ಮೆಟ್ರೋ ಟಿಕೆಟ್ ದರ ಶೇ.45 ರಷ್ಟು ಹೆಚ್ಚಾದರೆ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸದ್ಯ ಈ ಸಂಬಂಧ ಪೋಸ್ಟ್​ ಅನ್ನು ಸಂಸದ ಪಿಸಿ ಮೋಹನ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. BMRCLನ ಶೇಕಡ 45 ರಷ್ಟು ಮೆಟ್ರೋ ದರ ಹೆಚ್ಚಳ, ಫೆಬ್ರವರಿ 1ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಈಗ ಇದಕ್ಕೆ ತಡೆಹಿಡಿಯಲಾಗಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಮಗ್ರ ವರದಿ ನೀಡುವಂತೆ ಬಿಎಂಆರ್​ಸಿಎಲ್​ಗೆ ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ಇದು ಬೆಂಗಳೂರಿನ ಜನರಿಗೆ ದೊಡ್ಡ ಗೆಲುವು ಎಂದು ಬರೆದುಕೊಂಡಿದ್ದಾರೆ.


">January 29, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment