newsfirstkannada.com

ಮೋದಿ ಸರ್ಕಾರದ ವಿರುದ್ಧ ಗುಡುಗು.. ಇಡೀ ದೇಶದಲ್ಲಿ ಹೆಚ್ಚು ಸುದ್ದಿಯಾದ ಹೇಳಿಕೆಗೆ ಡಿ.ಕೆ ಸುರೇಶ್ ಸ್ಪಷ್ಟನೆ; ಹೇಳಿದ್ದೇನು?

Share :

Published February 21, 2024 at 12:22pm

    ಮೊದಲು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಬಲ ತುಂಬಬೇಕು

    ಕನ್ನಡಿಗರಿಗೆ ಆಗುವಂತ ಅನ್ಯಾಯವನ್ನು ಸರಿಪಡಿಸಿ ಅಂತ ಹೇಳಿದ್ದೇನೆ

    ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ನೀಡಲಿ

ನಾನು ದೇಶ ವಿಭಜನೆ ಬಗ್ಗೆ ಮಾತನಾಡಿಲ್ಲ. ಕನ್ನಡಿಗರಿಗೆ ಆಗುವಂತ ಅನ್ಯಾಯ, ದಕ್ಷಿಣ ಭಾರತದ ರಾಜ್ಯಗಳಿಗೆ ಆಗುವಂತ ಮಲತಾಯಿ ಧೋರಣೆಯನ್ನು ಸರಿಪಡಿಸಿ ಅಂತ ಹೇಳಿದ್ದೇನೆ ಎಂದು ಸಂಸದ ಡಿ.ಕೆ ಸುರೇಶ್ ಅವರು ಹೇಳಿದ್ದಾರೆ.

ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಂಸದ ಡಿ.ಕೆ ಸುರೇಶ್ ಅವರು, ನಾನು ದೇಶ ವಿಭಜನೆ ಬಗ್ಗೆ ಮಾತನಾಡಿಲ್ಲ. ಕನ್ನಡಿಗರಿಗೆ ಆಗುವಂತ ಅನ್ಯಾಯವನ್ನು ಸರಿಪಡಿಸಿ ಅಂತ ಹೇಳಿದ್ದೇನೆ. ತಮಿಳು ನಾಡಿನಲ್ಲಿ ಈ ಕೂಗು ಮೊದಲಿನಿಂದಲೂ ಇದೆ. ಹೊಸದೇನು ಅಲ್ಲ. ಧ್ವನಿ ಹೆಚ್ಚಾಗುವ ಮೊದಲು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಬಲ ತುಂಬಬೇಕು. ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಅವಕಾಶವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: VIDEO: ‘ಈಶ್ವರಪ್ಪ ಗುಂಡಿಕ್ಕಿ ಕೊಲ್ಲಲು ಬಂದ್ರೆ ಎದೆ ಕೊಟ್ಟು ನಿಲ್ಲುತ್ತೇನೆ’- ಡಿ.ಕೆ ಸುರೇಶ್ ಖಡಕ್ ಸವಾಲು

ಕೇಂದ್ರದ ವಿರುದ್ಧ ನಾವು ಧಿಕ್ಕಾರ ಕೂಗಿಲ್ಲ, ನಮ್ಮ ಬೇಡಿಕೆಯನ್ನು ಅವರ ಮುಂದಿಟ್ಟಿದ್ದೇವೆ. ಆ ಬೇಡಿಕೆಯನ್ನು ಪರಿಹರಿಸಬೇಕು ಎನ್ನುವ ಜವಾಬ್ದಾರಿ ಪ್ರಧಾನಿ ಮೋದಿ ಮೇಲೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ನೀಡಬೇಕು. ಯಾವ್ಯಾವದರಲ್ಲಿ ಸಮಸ್ಯೆ ಆಗುತ್ತಿದೆ ಅದನ್ನು ಗಣನೆಗೆ ತೆಗೆದುಕೊಂಡು ಟ್ಯಾಕ್ಸ್ ಹಣ ಕೊಡಬೇಕು. 2024-25ರ ಕೇಂದ್ರದ ಬಜೆಟ್​ನಲ್ಲಿ 50 ಸಾವಿರ ಕೋಟಿ ರೂ.ಗಳನ್ನ ಕೊಡುತ್ತಿದ್ದೇವೆ ಅಂತ ಹೇಳಿದ್ದಾರೆ. ಕಳೆದ ವರ್ಷ 52 ಸಾವಿರ ಕೋಟಿ ರೂ.ಗಳನ್ನ ಕೊಟ್ಟಿದ್ದರು. ಒಟ್ಟಾರೆ ನಮ್ಮ ತೆರಿಗೆ ಪಾಲು ಎಷ್ಟು ಹೋಗುತ್ತಿದೆ ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ ಅಂತ ಡಿ.ಕೆ ಸುರೇಶ್ ಹೇಳಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳಿಂದ ಎಷ್ಟು ಹಣ ತೆರಿಗೆ ರೂಪದಲ್ಲಿ ಹೋಗುತ್ತಿದೆ. ಯಾಱರಿಗೆ ಎಷ್ಟೆಷ್ಟು ಹಣ ಹಂಚಿಕೆ ಆಗುತ್ತಿದೆ. ಯಾವ್ಯಾವುದಕ್ಕೆ ಆಗುತ್ತಿದೆ ಅಂತೇಳಿ ಕೇಂದ್ರದ ಬಜೆಟ್​ ಬುಕ್​ನಲ್ಲಿ ಎಲ್ಲ ಇದೆ. ನನಗೆ ಬಂದ ಭಾವನೆಯನ್ನು ನಾನು ಕೇಳಿದ್ದೇನೆ. ಇನ್ನೊಬ್ಬರಿಗೆ ಅಪ್ರೋಚ್ ಮಾಡಿಲ್ಲ. ಆದರೆ ಈ ಬಗ್ಗೆ ಇಷ್ಟೊಂದು ಚರ್ಚೆ, ಹೋರಾಟಗಳು ನಡೆದರೂ ಇದುವರೆಗೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಸಂಸದ ಸುರೇಶ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಸರ್ಕಾರದ ವಿರುದ್ಧ ಗುಡುಗು.. ಇಡೀ ದೇಶದಲ್ಲಿ ಹೆಚ್ಚು ಸುದ್ದಿಯಾದ ಹೇಳಿಕೆಗೆ ಡಿ.ಕೆ ಸುರೇಶ್ ಸ್ಪಷ್ಟನೆ; ಹೇಳಿದ್ದೇನು?

https://newsfirstlive.com/wp-content/uploads/2024/02/DK_SURESH.jpg

Load More