ಬೆಂಗಳೂರು-ಮೈಸೂರು ಮೆಮು ರೈಲಿನಲ್ಲಿ ಫಿಲ್ಮಿ ಸ್ಟೈಲ್‌ ದರೋಡೆ; ಮಂಡ್ಯ ಟು ಚನ್ನಪಟ್ಟಣ ನಡೆದಿದ್ದೇನು?

author-image
admin
ಬೆಂಗಳೂರು-ಮೈಸೂರು ಮೆಮು ರೈಲಿನಲ್ಲಿ ಫಿಲ್ಮಿ ಸ್ಟೈಲ್‌ ದರೋಡೆ; ಮಂಡ್ಯ ಟು ಚನ್ನಪಟ್ಟಣ ನಡೆದಿದ್ದೇನು?
Advertisment
  • ಹಳೇ ಐಡಿಯಾ ಆದ್ರೆ ದರೋಡೆ ಮಾತ್ರ ಹೊಸ ಶೈಲಿಯಲ್ಲಿ
  • ಪ್ರಯಾಣಿಕರ ಸೋಗಿನಲ್ಲಿ ನುಗ್ಗಿದ 5-6 ಖದೀಮರ ಗ್ಯಾಂಗ್‌!
  • ಪ್ರತಿದಿನ ಸಾವಿರಾರು ಮಂದಿ ಸಂಚರಿಸುವ ಬೆಂಗಳೂರು-ಮೈಸೂರು ಮಾರ್ಗ

ಇದು ಹಳೇ ಐಡಿಯಾ. ಆದ್ರೆ ದರೋಡೆ ಮಾಡಿದ್ದು ಮಾತ್ರ ಹೊಸ ಶೈಲಿಯಲ್ಲಿ. ನಿನ್ನೆ ರಾತ್ರಿ ಬೆಂಗಳೂರು-ಮೈಸೂರು ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ನುಗ್ಗಿದ ಖದೀಮರು ಆಯುಧಗಳನ್ನು ತೋರಿಸಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಪ್ರತಿದಿನ ಸಾವಿರಾರು ಮಂದಿ ಸಂಚರಿಸುವ ಬೆಂಗಳೂರು-ಮೈಸೂರು ಮಾರ್ಗದ ರೈಲು ಪ್ರಯಾಣಿಕರು ಬೆಚ್ಚಿ ಬೀಳುವ ಸ್ಟೋರಿ ಇದು.

publive-image

ಚಲಿಸುತ್ತಿದ್ದ ರೈಲಿನ ಒಳಗೆ ಸಿನಿಮಾ ಸ್ಟೈಲಲ್ಲಿ ದರೋಡೆ
ಚಾಕು, ಲಾಂಗ್ ತೋರಿಸಿ ಹಣ ಸುಲಿಗೆ ಮಾಡಿ ಪರಾರಿ
ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಕನೆಕ್ಟ್ ಮಾಡಲು ರೈಲ್ವೇ ಪ್ರಯಾಣ ಪ್ರಮುಖ ಸಾರಿಗೆಯಾಗಿದೆ. ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುವ ಮೈಸೂರು-ಬೆಂಗಳೂರು ಮೆಮು ರೈಲಿನಲ್ಲಿ ನಿನ್ನೆ ತಡರಾತ್ರಿ ಬೆಚ್ಚಿ ಬೀಳಿಸುವ ದರೋಡೆ ನಡೆದಿದೆ.

publive-image

ಪ್ರಯಾಣಿಕರ ವೇಷ ಧರಿಸಿ ಮೈಸೂರು ನಿಲ್ದಾಣದಲ್ಲಿ ರೈಲು ಹತ್ತಿದ ಐವರು ಸುಲಿಗೆಕೋರರು ರೈಲು ಮಂಡ್ಯ ಬಳಿ ಬರ್ತಿದ್ದಂತೆ ತಮ್ಮ ವರಸೆ ತೋರಿಸಿದ್ದಾರೆ. ಚಾಕು, ಚೂರಿ, ಲಾಂಗ್ ತೋರಿಸಿ ಪ್ರಯಾಣಿಕರನ್ನು ಬೆದರಿಸಿ 12 ಸಾವಿರ ಹಣ, 5 ಮೊಬೈಲ್ ಸುಲಿಗೆ ಮಾಡಿದ್ದಾರೆ.

publive-image

ಚನ್ನಪಟ್ಟಣ ಬಳಿ ರೈಲ್ವೇ ಪೊಲೀಸರು ರೈಲಿನ ಒಳಗೆ ಬರ್ತಿದ್ದಂತೆ ಅವರಿಗೂ ಬೆದರಿಕೆ ಹಾಕಿ ಲೂಟಿಕೋರರ ಗ್ಯಾಂಗ್ ಅಲ್ಲಿಂದ ಪರಾರಿ ಆಗಿದೆ.

ಇದನ್ನೂ ಓದಿ: VIDEO: ವೀಲ್ ಚೇರ್‌ನಲ್ಲೇ ವೇದಿಕೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ 

ರೈಲಲ್ಲಿ ಕಳ್ಳರಿದ್ದಾರೆ ಎಚ್ಚರ!
ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮೆಮು ಟ್ರೈನ್ ರಾತ್ರಿ 10ಗಂಟೆ ಸುಮಾರಿಗೆ ಮೈಸೂರಿನಿಂದ ಹೊರಟಿತ್ತು. ಮಂಡ್ಯ ಬಳಿ 12 ಮಂದಿಗೆ ಬೆದರಿಕೆ ಹಾಕಿದ ಖತರ್ನಾಕ್​ ಗ್ಯಾಂಗ್​​​​ ಹಣ, ಮೊಬೈಲ್ ದರೋಡೆ ಮಾಡಿದೆ. ತಕ್ಷಣವೇ ಪ್ರಯಾಣಿಕರೊಬ್ಬರು ರೈಲ್ವೇ ಪೊಲೀಸರಿಗೆ ಮೆಸೇಜ್ ತಲುಪಿಸಿದ್ದು ಮಾಹಿತಿ ಸಿಗ್ತಿದ್ದಂತೆ ಅಲರ್ಟ್​ ಆದ ರೈಲ್ವೇ ಪೊಲೀಸರು ಚನ್ನಪಟ್ಟಣ ಬಳಿ ಟ್ರೈನ್ ಹತ್ತಿ ಕಳ್ಳರನ್ನು ಹಿಡಿಯಲು ಮುಂದಾದ್ರು. ಈ ವೇಳೆ ರೈಲ್ವೇ ಪೊಲೀಸರಿಗೂ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಖದೀಮರ ಗ್ಯಾಂಗ್​​ ರೈಲ್ವೇ ಪೊಲೀಸರ ಮೇಲೆಯೂ ಹಲ್ಲೆಗೆ ಮುಂದಾಗಿದೆ. ಬಳಿಕ ಚನ್ನಪಟ್ಟಣದ ಬಳಿ ರೈಲು ಇಳಿದು ರಾಬರ್ಸ್​ ಎಸ್ಕೇಪ್ ಆಗಿದ್ದಾರೆ.

publive-image

ಮೈಸೂರು ರೈಲ್ವೇ ಎಸ್​​ಪಿ ಡಾ. ಸೌಮ್ಯ ಲತಾ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ದರೋಡೆ ಪ್ರಕರಣ ಸಂಬಂಧ ಓರ್ವ ಪ್ರಯಾಣಿಕರು ಮಾತ್ರ ದೂರು ಸಲ್ಲಿಸಿದ್ದಾರೆ. ಸದ್ಯ ಮೈಸೂರು ವಲಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ..

ರೈಲಿನಲ್ಲಿ ದರೋಡೆ ನಡೆಯುತ್ತಿರುವುದು ಇದೇ ಮೊದಲ್ಲ, ಆದ್ರೆ ಪ್ರಯಾಣಿಕರ ಸೋಗಿನಲ್ಲಿ ರೈಲು ಹತ್ತುವ ಖದೀಮರು ಇಂತಹ ಕೃತ್ಯ ಎಸಗುತ್ತಿದ್ದಾರೆ. ಸಾವಿರಾರು ಜನರು ಓಡಾಡುವ ರೈಲಿನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಿದೆ. ರೈಲು ಸಂಚಾರ ಮತ್ತಷ್ಟು ಪ್ರಯಾಣಿಕ ಸ್ನೇಹಿಯನ್ನಾಗಿ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment