/newsfirstlive-kannada/media/post_attachments/wp-content/uploads/2025/02/Bangalore-Train-Robbery-2.jpg)
ಬೆಂಗಳೂರು: ಪ್ರತಿದಿನ ಸಾವಿರಾರು ಜನ ಪ್ರಯಾಣಿಸುವ ಬೆಂಗಳೂರು, ಮೈಸೂರು ರೈಲಿನಲ್ಲಿ ದರೋಡೆ ಮಾಡಿದ್ದ ಗ್ಯಾಂಗ್ ಅನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಫೆಬ್ರವರಿ 10ರಂದು ರಾತ್ರಿ 11 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮೆಮು ರೈಲಿಗೆ ಈ ದರೋಡೆಕೋರರು ಹತ್ತಿದ್ದರು.
ಮೈಸೂರಿನಲ್ಲಿ ರೈಲು ಹತ್ತಿರುವ ಆರೋಪಿಗಳು ಮೆಮು ರೈಲು ಮಂಡ್ಯ ಬಳಿ ಬಂದಾಗ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದರು. ಈ ನಾಲ್ವರು ಆರೋಪಿಗಳು ಚಲಿಸುತ್ತಿದ್ದ ರೈಲಿನಲ್ಲಿ ಬಟನ್ ಚಾಕು, ತಲ್ವಾರ್ ತೋರಿಸಿ ಕಾಲಿನಿಂದ ಒದ್ದು ದರೋಡೆ ಮಾಡಿದ್ದರು. ಈ ಮಾಹಿತಿ ತಿಳಿದ ರೈಲ್ವೆ ಪೊಲೀಸರು ಚನ್ನಪಟ್ಟಣದಲ್ಲಿ ಹಿಡಿಯಲು ಹೋದಾಗ ಪರಾರಿಯಾಗಿದ್ದರು.
ಇದನ್ನೂ ಓದಿ: ಬೆಂಗಳೂರು-ಮೈಸೂರು ಮೆಮು ರೈಲಿನಲ್ಲಿ ಫಿಲ್ಮಿ ಸ್ಟೈಲ್ ದರೋಡೆ; ಮಂಡ್ಯ ಟು ಚನ್ನಪಟ್ಟಣ ನಡೆದಿದ್ದೇನು?
ಮೈಸೂರು-ಬೆಂಗಳೂರು ಮೆಮು ರೈಲಿನಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ರೈಲ್ವೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಪರಾರಿಯಾದವರ ಹಿಂದೆ ಬಿದ್ದಿದ್ದ ಪೊಲೀಸರು 2 ದಿನ ಕಳೆಯುವುದರೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳನ್ನು ಶೈಕ್ ಸೋಹೈಬ್, ಶಾಹಿಲ್ ಖಾನ್, ಮಹಮ್ಮದ್ ಯಾಸಿನ್, ಓರ್ವ ಅಪ್ರಾಪ್ತ ಎನ್ನಲಾಗಿದೆ. ಇವರು ಚಲಿಸುತ್ತಿದ್ದ ರೈಲಿಗೆ ಪ್ರಯಾಣಿಕರ ಸೋಗಿನಲ್ಲಿ ಹತ್ತಿದ್ದರು. ಪ್ರಯಾಣಿಕರಿಗೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಬಂಧಿತರಿಂದ ಒಟ್ಟು 6830 ರೂ. ನಗದು, 06 ಮೊಬೈಲ್ ಒಟ್ಟು 1ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ರೈಲ್ವೆ ಪ್ರಯಾಣಿಕರೇ ಟಾರ್ಗೆಟ್!
ಬಂಧಿತ ನಾಲ್ವರು ಆರೋಪಿಗಳು ರೈಲ್ವೆ ಪ್ರಯಾಣಿಕರನ್ನೆೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದರು. ರಾತ್ರಿ ವೇಳೆಯಲ್ಲಿ ದೂರದ ಊರಿನಿಂದ ಬರುತ್ತಿದ್ದ ಪ್ರಯಾಣಿಕರಿಗಾಗಿ ಇವರು ಕಾಯುತ್ತಿದ್ದರು.
ಆಟೋದಲ್ಲಿ ಪಿಕ್ ಅಫ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುಲಿಗೆ ಮಾಡುತ್ತಿದ್ದರು. ಮಹಮ್ಮದ್ ನೂಪೈಲ್, ಮಹಮ್ಮದ್ ಜಾವಿದ್ ಖಾನ್ ಪ್ರಯಾಣಿಕರ ಬಳಿ ಹಣ ಹಾಗೂ ಚಿನ್ನವನ್ನು ದರೋಡೆ ಮಾಡುತ್ತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ