newsfirstkannada.com

‘ಕಾಲ್​ ಗರ್ಲ್​ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!

Share :

Published April 11, 2024 at 8:50am

  ಪೋಸ್ಟ್ ಹಾಕಿದ್ದೆ ತಡ ಹೆಂಡತಿಗೆ ನಿರಂತರ ಫೋನ್​ ಕಾಲ್ಸ್​ ಬಂದಿವೆ

  ಹೆಂಡತಿ ಫೋಟೋ, ನಂಬರ್ ಹಾಕಿ ಸೇಡು ತಿರಿಸಿಕೊಂಡ್ನಾ ಪತಿರಾಯ

  ಕೃತ್ಯ ಎಸೆಗಿ ತಲೆಮರೆಸಿಕೊಂಡಿರುವ ಗಂಡ, ಪೊಲೀಸರಿಂದ ತನಿಖೆ

ಬೆಂಗಳೂರು: ಹೆಂಡತಿ ಡಿವೋರ್ಸ್​ಗೆ ಅರ್ಜಿ ಹಾಕಿದ್ದಕ್ಕೆ ಕೋಪಗೊಂಡ ಗಂಡ ಸೋಷಿಯಲ್ ಮೀಡಿಯಾದಲ್ಲಿ ಕಾಲ್​​​ಗರ್ಲ್​​ ಅಂತ ಫೋನ್​ ನಂಬರ್, ಫೋಟೋ ಹಾಕಿ ಪೋಸ್ಟ್​ ಶೇರ್ ಮಾಡಿರುವ ಘಟನೆ ನಂದಿನಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ; ಸಮಾವೇಶ ರದ್ದು ಮಾಡಿದ್ದೇಕೆ..?

ಕರಿ ಸತ್ಯನಾರಾಯಣ ರೆಡ್ಡಿ ಎನ್ನುವ ವ್ಯಕ್ತಿಯು ಕಲಾ‌ಶಶಿ ಎಂಬ ಫೇಸ್​ಬುಕ್ ಪೇಜ್ ಕ್ರಿಯೇಟ್ ಮಾಡಿ ತನ್ನ ಹೆಂಡತಿಯ ಫೋನ್ ನಂಬರ್ ಮತ್ತು ಫೋಟೋ ಶೇರ್ ಮಾಡಿದ್ದಾನೆ. ಕಾಲ್​ಗರ್ಲ್​ ಬೇಕಾಗಿದ್ದರೆ ಕರೆ ಮಾಡಿ ಎಂದು ಫೋಸ್ಟ್​ ಶೇರ್ ಮಾಡಿದ್ದಾನೆ. ಪೋಸ್ಟ್ ಹಾಕಿದ್ದೆ ತಡ ಹೆಂಡತಿಗೆ ನಿರಂತರ ಫೋನ್​ ಕಾಲ್ಸ್​ ಬರಲು ಪ್ರಾರಂಭಿಸಿವೆ. ಅಲ್ಲದೇ ಪೋಸ್ಟ್​ನಲ್ಲಿ ಹೆಂಡತಿಯ ಸಹೋದರನ ನಂಬರ್ ಕೂಡ ಆತ ಹಾಕಿದ್ದಾನೆ. ಸದ್ಯ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ಪತಿರಾಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್​ಗೆ ಬಿಗ್ ಶಾಕ್ ಕೊಟ್ಟ ಲೋಕಾಯುಕ್ತ..!

2019ರಲ್ಲಿ ಸತ್ಯನಾರಾಯಣ ಹಾಗೂ ಶಶಿಕಲಾ ಮದುವೆಯಾಗಿದ್ದರು. ಆದರೆ 1 ವರ್ಷದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡಲು ಪ್ರಾರಂಭಿಸಿದ್ದನು. ಇದರಿಂದ ಬೇಸತ್ತಿದ್ದ ಹೆಂಡತಿ ಡಿವೋರ್ಸ್​ಗೆ ಅರ್ಜಿ ಹಾಕಿದ್ದಳು. ಇದಕ್ಕೆ ಕೋಪಗೊಂಡು ಪತಿರಾಯ ಸೋಷಿಯಲ್ ಮೀಡಿಯಾ ಮೂಲಕ ಸೇಡು ತಿರಿಸಿಕೊಂಡಿದ್ದಾನೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಾಲ್​ ಗರ್ಲ್​ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!

https://newsfirstlive.com/wp-content/uploads/2024/04/BNG_NANDINI_LAYOUT.jpg

Load More